ಲೋಕದರ್ಶನ ವರದಿ
ವಿಜಯಪುರ 09: ಬರಪೀಡಿತ ವಿಜಯಪುರ ಜಿಲ್ಲೆಯ ನೀರಾವರಿಗೆ ವಿಶೇಷ ಕೊಡುಗೆ ನೀಡಿದ ಸಚಿವ ಎಂ.ಬಿ.ಪಾಟೀಲರ ಪ್ರತಿಮೆ ಸ್ಥಾಪಿಸಲು ನಾಗಠಾಣ ಮತಕ್ಷೇತ್ರದ ಜೆಡಿಎಸ್ ಶಾಸಕ ಡಾ, ದೇವಾನಂದ ಚವ್ಹಾಣ ಅವರು ಮುಂದಾಗಿದ್ದಾರೆ.
ಈ ವಿಷಯವನ್ನು ಸ್ವತ: ಶಾಸಕ ಡಾ.ದೇವಾನಂದ ಚವ್ಹಾಣ ಅವರೇ ಪ್ರಕಟಿಸಿದ್ದಾರೆ.
ಈ ಕುರಿತು ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಎಂ.ಬಿ.ಪಾಟೀಲರು ನೀರಾವರಿ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ನೀರಾವರಿಯಲ್ಲಿ ಹೊಸಕ್ರಾಂತಿ ಮಾಡಿದ್ದಾರೆ. ಹೀಗಾಗಿ ನಾನು ವೈಯಕ್ತಿಕವಾಗಿ ಅವರ ಪ್ರತಿಮೆ ಪ್ರತಿಷ್ಠಾಪಿಸಬೇಕೆಂದು ನಿಧರ್ಾರ ಮಾಡಿದ್ದೇನೆ ಎಂದರು.
ಕ್ಷೇತ್ರದ ಜನರು ರೈತರೊಂದಿಗೆ ಚರ್ಚಿಸಿ ರಾಷ್ಟ್ರೀಯ ಹೆದ್ದಾರಿ ಬಳಿ ಇಲ್ಲವೇ ಬೇರೆ ಪ್ರಮುಖ ಸ್ಥಳದಲ್ಲಿ ಸಚಿವರ ಪ್ರತಿಮೆ ಸ್ಥಾಪಿಸುವ ಕುರಿತು ನಿಧರ್ಾರ ಕೈಗೊಳ್ಳಲಾಗುವುದು. ಆ ಮೂಲಕ ನಾನು ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ನಾಗಠಾಣ ಮತಕ್ಷೇತ್ರದ ಅನೇಕ ಕಡೆ ಜಮೀನಿನಲ್ಲಿ ಹುರುಳಿ ಕಾಳು ಸಹ ಬೆಳೆಯುತ್ತಿರಲಿಲ್ಲ. ಆದರೆ ಇಂದು ಸಚಿವ ಎಂ.ಬಿ.ಪಾಟೀಲರು ಜಿಲ್ಲೆಯಲ್ಲಿ ಕೈಗೊಂಡ ನೀರಾವರಿ ಯೋಜನೆಗಳಿಂದಾಗಿ ಹಾಗೂ ದೇಶದಲ್ಲಿಯೇ ಮಾದರಿಯಾದ ಕೆರೆ ನೀರು ತುಂಬುವ ಯೋಜನೆ ಅನುಷ್ಠಾನಗೊಳಿಸಿದ್ದರಿಂದ ರೈತರು ಶೇಂಗಾ ಹಾಗೂ ಇನ್ನಿತರೆ ವಾಣಿಜ್ಯ ಬೆಳೆ ಬೆಳೆಯುತ್ತಿದ್ದಾರೆ. ನೀರು ಕೊಟ್ಟಿದ್ದಕ್ಕೆ ಹಲವಾರು ರೈತರು ತಮ್ಮ ಮನೆಯಲ್ಲಿ ಎಂ.ಬಿ. ಪಾಟೀಲರ ಭಾವಚಿತ್ರವನ್ನಿಟ್ಟು ಪೂಜಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ನಾಗಠಾಣ ಮತಕ್ಷೇತ್ರದ ಜನತೆಯ ಹಾಗೂ ರೈತರ ಪರವಾಗಿ ನಾನು ಸಹ ಅವರಿಗೆ ಅಭಿನಂದಿಸುತ್ತೇನೆ ಎಂದರು.