ವಿಜಯಪುರ: ಬಲಿಷ್ಟ ಭಾರತ ನಿರ್ಮಾಣಕ್ಕೆ ಹೆಣ್ಣು ಮಕ್ಕಳನ್ನು ಓದಿಸಿ

ಲೋಕದರ್ಶನ ವರದಿ ವಿಜಯಪುರ 08: ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದರೋಂದಿಗೆ ಬಲಿಷ್ಟ ಭಾರತ ನಿರ್ಮಿಸಲು ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಸೇವಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರವೀಂದ್ರ ಕಾರಬಾರಿ ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಲ್ಲಾ ಸೇವಾ ಕಾನೂನು ಪ್ರಾಧಿಕಾರ ವಿಜಯಪುರ ಹಾಗು ಕೆಜಿಎಸ್ ಮುಳವಾಡರವರ ಸಹಯೋಗದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದಡಿ ಯಲ್ಲಿ ನಾಂಕ:06-12-2020 ರಂದು ಬಸವನ ಬಾಗೇವಾಡಿ ತಾಲೂಕಿನ ಕೆ.ಜಿ.ಎಸ್ ಮುಳವಾಡದಲ್ಲಿ ಏರ್ಪಡಿಸಲಾಗಿದ್ದ ಕಾನೂನು ಅರಿವು ಮತ್ತು ಆರೋಗ್ಯ ಮತ್ತು ನೈರ್ಮಲಿಕರಣದ ಬಗಗೆ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣುಮಕ್ಕಳು ಮತ್ತು ಪಾಲಕರು ಕಾನೂನುಗಳ ಬಗ್ಗೆ ಅರಿತುಕೊಂಡು ಹೆಣ್ಣು ಮಕ್ಕಳ ಮೇಲೆ ಯಾಗುತ್ತಿರುವ ದೌರ್ಜನ್ಯಗಳ ಬಗ್ಗೆ ದ್ವನಿ ಎತ್ತಬೇಕು ಎಂದು ಹೇಳಿದ ಅವರು, ಹೆಣ್ಣು ಮಕ್ಕಳಿಗೆ ಸರಿಯಾಗಿ ಓದಿಸಿ ಅವರನ್ನು ಸಬಲೆಯರನ್ನಾಗಿ ಮಾಡಿ ಉತ್ತಮ ವಾತಾವರಣಕ್ಕೆ ಅವಕಾಶ ಕಲ್ಪಿಸಿದರೆ ಸಮಾಜದ ಸವರ್ಾಂಗೀಣ ಅಭಿವೃದ್ದಿ ಸಾಧ್ಯವಾ ಗುತ್ತದೆ ಎಂದು ಹೇಳಿದರು. ಉಪನ್ಯಾಸಕರಾಗಿ ಆಗಮಿಸಿದ್ದ ಬಿಎಲ್ಡಿಇ ಸಂಸ್ಥೆಯ ಆರ್ಯುವೇದ ಮಾಹಾವಿದ್ಯಾಲಯದ ಸಹಪ್ರಾದ್ಯಾಪಕ ಡಾ.ಬಿರಾದಾರ, ಹೆಣ್ಣು ಮಕ್ಕಳ ಆರೋಗ್ಯವನ್ನು ಕಾಡಿಕೊಳ್ಳುವ ಗುಟ್ಟನ್ನು ತಿಳಿಸಿಕೊಡುವುದರ ಜೊತೆಗೆ ಪುರಾತನತದ ಆಹಾರ ಅಭ್ಯಾಸವನ್ನು ಅಳುವಡಿಸಿಕೊಂಡಲ್ಲಿ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾದ್ಯವಾಗುತ್ತದೆ ಎಂದು ತಿಳಿಸಿದರು. ಕೆಜಿಎಸ್ ಮುಳವಾಡ ಶಾಲೆಯ ಮುಖ್ಯ ಶಿಕ್ಷಕ ಎಸ್.ಎಲ್.ಓಂಕಾರ ಸ್ವಾಗತಿಸಿದರು.ಶಿಕ್ಷಕ ಪೂಜಾರಿ ನಿರೂಪಿಸಿ ವಂದಿಸಿದರು. ಗ್ರಾ.ಪಂ.ಅಧ್ಯಕ್ಷ ಕೃಷ್ಣಾ ಹಂಚಿನಾಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯೆ ಶ್ರೀದೇವಿ.ಅ.ಐಹೊಳ್ಳಿ, ತಾ.ಪಂ.ಸದಸ್ಯೆ ಮಂಜುಳಾ.ಮ.ನಾಗನೂರ, ಎಸ್ಡಿಎಮ್ಸಿ ಅಧ್ಯಕ್ಷ ಲಕ್ಷ್ಮಣ ಹಂಚಿನಾಳ ಸೇರಿದಂತೆ ಮುಳವಾಡ ಗ್ರಾಮದ ಗ್ರಾಮಸ್ಥರು, ಪಾಲಕರು ಶಿಕ್ಷಕರು ಉಪಸ್ಥಿರಿದ್ದರು