ವಿಜಯಪುರ: ವಿದ್ಯಾರ್ಥಿನಿ ಮಧು ಪತ್ತಾರ್ ಹತ್ಯೆ ವಿರೋಧಿಸಿ ಪ್ರತಿಭಟನೆ

ವಿಜಯಪುರ  24: ನಗರದ ಗಾಂಧಿವೃತ್ತದಲ್ಲಿ ಇಂದು ಎಐಡಿಎಸ್ಓ ಎಐಡಿವೈಓ ಹಾಗೂ ಎಐಎಮ್ಎಸ್ಎಸ್  ಸಂಘಟನೆಗಳ ವತಿಯಿಂದ ರಾಯಚೂರಿನ ಇಂಜಿನಿಯರಿಂಗ ವಿದ್ಯಾಥರ್ಿನಿ ಮಧು ಪತ್ತಾರ್ ಹತ್ಯೆಯನ್ನು ಖಂಡಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್ಓ ನ ಜಿಲ್ಲಾ ಸಂಚಾಲಕರಾದ ಶೋಭ ಯರಗುದ್ರಿಯವರು ಮಾತನಾಡುತ್ತಾ ಮಹಿಳೆಯರ ಮೇಲೆ ನಡೆಯುವ ಈ ರೀತಿಯ ಕೃತ್ಯಗಳಿಗೆ ಅಶ್ಲೀಲ ಸಿನಿಮಾ ಸಾಹಿತ್ಯಗಳೇ ಕಾರಣ, ಇವುಗಳಿಗೆ ಕಡಿವಾಣ ಹಾಕಬೇಕು. ನಮ್ಮ ವಿದ್ಯಾಥರ್ಿ ಯುವಜನರಲ್ಲಿ ಹೋರಾಟದ ಮನೋಭಾವ ಬೆಳೆಯಬೇಕು. ಅನ್ಯಾಯವನ್ನು ಪ್ರತಿಭಟಿಸುವ ಗುಣವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು ಎಂದರು. ಮಧು ಸಾವಿಗೆ ಕಾರಣರಾದವರಿಗೆ ನಿದರ್ಶನೀಯ ಶಿಕ್ಷೆ ಕೊಡುವವರಿಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ರಾಜ್ಯದಾದ್ಯಂತ ಹೋರಾಟ ಕೈಗೊಳ್ಳಬೇಕಾಗುತ್ತದೆ ತಪ್ಪಿತಸ್ತರಿಗೆ ಉಗ್ರವಾದ ಶಿಕ್ಷೆಕೊಡಬೇಕು ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಕರೆ ನೀಡಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಐಡಿವೈಓ ಜಿಲ್ಲಾಧ್ಯಕ್ಷರಾದ ಸಿದ್ದಲಿಂಗ ಬಾಗೇವಾಡಿ ಯವರು ರಾಯಚೂರಿನಲ್ಲಿ ನಡೆದ ಘಟನೆ ದೆಹಲಿಯ 2012  ರಲ್ಲಿ ನಡೆದ ನಿರ್ಭಯ ಅತ್ಯಾಚಾರವನ್ನು ನೆನಪಿಸುವಂತಿದೆ. ನಮ್ಮ ರಾಜ್ಯದಲ್ಲಿ ಕೂಡ ನಾಗರೀಕ ಸಮಾಜ ತಲೆತಗ್ಗಿಸುವಂತಹ ಇಂತಹ ಪ್ರಕರಣಗಳು ನಡೆಯುತ್ತಿದ್ದರೂ ನ್ಯಾಯ ಸಮ್ಮತವಾಗಿ ತನಿಖೆ ನಡೆಯದೆ ಇರುವುದು ದುರಂತ ಸಂಗತಿ ಎಂದರು. 2017 ರಲ್ಲಿ ದಾನಮ್ಮ ಅತ್ಯಾಚಾರ ಮತ್ತು ಕೊಲೆ ಪ್ರಕರಣ, 2018 ರಲ್ಲಿ ಮಾಲೂರು ಪಟ್ಟಣದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ರಾಜ್ಯವನ್ನು ತಲ್ಲಣಗೊಳಿಸಿದ್ದವು. ಇದೆ ಹಾದಿಯಲ್ಲಿ ಈಗ ರಾಯಚೂರಿನಲ್ಲಿ ತಲೆತಗ್ಗಿಸುವಂತ ಕೆಲಸ ನಡೆದಿದ್ದು ಪ್ರಕರಣಕ್ಕೆ ರಾಜಕೀಯ ಪ್ರಭಾವವಿದ್ದು ತನಿಖೆ ದಿಕ್ಕು ತಪ್ಪಸಲಾಗುತ್ತಿದೆ ಎಂದು ಆರೋಪಿಸಿದರು. ಇಂತಹ ಸಮಯದಲ್ಲಿ ಯುವಜನರು ಹೋರಾಟ ಕೈಗೊಂಡು ನ್ಯಾಯ ದೊರಕಿಸಬೇಕಿದೆ ಈ ಪ್ರಕರಣ ಇತ್ಯರ್ಥವಾಗುವವರೆಗೂ ನಮ್ಮ ಹೋರಾಟ ಕೈಬಿಡುವುದಿಲ್ಲ ಎಂದು ಹೇಳಿದರು.

ಎಐಎಮ್ಎಸ್ಎಸ್ ಜಿಲ್ಲಾ ಸಂಚಾಲಕರಾದ ಶಿವಬಾಳಮ್ಮ ಕೊಂಡುಗುಳಿ ಮಾತನಾಡುತ್ತಾ ಮಹಿಳೆಯರು ಸಮಾಜದಲ್ಲಿ ಬದುಕುವಂತಹ ವಾತವರಣ ಇಲ್ಲ. ಆಟವಾಡಲು ಮಗು ಕೂಡ ಇವತ್ತು ಭದ್ರತೆಯಿಂದ ಮನೆಗೆ ವಾಪಸ್ಸಗುವುದಿಲ್ಲ ಇಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಮಧು ಸಾವಿನಲ್ಲಿ ಭಾಗಿಯಾಗಿರುವ ಎಲ್ಲಾ ಅಪರಾಧಿಗಳಿಗೆ ಉಗ್ರವಾದ ಶಿಕ್ಷೆ ನೀಡಬೇಕು. ಸರಕಾರ ಗಂಭೀರವಾಗಿ ಪರಿಗಣಿಸಿ ಪಾಸ್ಟ್ಟ್ರ್ಯಾಕ್ ಕೋಟ್ರ್  ಮುಖಾಂತರ ಸೂಕ್ತ ತನಿಖೆ ನಡೆಸಿ ಅಪರಾಧಿಗಳಿಗೆ ನಿದರ್ಶನೀಯ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು. 

ಪ್ರತಿಭಟನೆಯಲ್ಲಿ ಎಐಡಿವೈಓ ಜಿಲ್ಲಾ ಉಪಾಧ್ಯಕ್ಷರಾದ ಬಾಳುಜೇವೂರ, ಎಐಎಮ್ಎಸ್ಎಸ್ ನ ಗೀತಾ ಹೆಚ್. ಹಾಗೂ ಎಐಡಿವೈಓ ಸುರೇಖಾ ಕಡಪಟ್ಟಿ, ಕಾವೇರಿ ರಜಪೂತ, ಲಕ್ಷ್ಮೀ ರಾಠೋಡ್, ಪೂಜಾ  ಬಳಗನೂರು, ಪೃಥ್ವಿ ಬಗಲಿ, ನಿಸರ್ಗ, ಕಲಾಶ್ರೀ, ಅಶ್ವಿನಿ, ಉಮಾಶ್ರೀ, ನೂರಾರು ವಿದ್ಯಾಥರ್ಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆ ಮುಗಿದ ನಂತರ ನಿಯೋಗದಲ್ಲಿ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.