ಲೋಕದರ್ಶನ ವರದಿ
ವಿಜಯಪುರ 06: ಪರಿಸರ ಸಂರಕ್ಷಣೆ ಸಮಾಜದ ಪ್ರತಿಯೊಬ್ಬ ನಾಗರಿಕರ ಹೊಣೆಗಾರಿಕೆ ಆಗಿದೆ. ಆದ್ದರಿಂದ ಕೇವಲ ಪರಿಸರ ದಿನಾಚರಣೆ ಆಚರಿಸಿದರೇ ಸಾಲದು ಅದನ್ನು ನಿತ್ಯ ಪಾಲನೆ, ಪೋಷಣೆ ಮಾಡಿದರೇ ಮಾತ್ರ ಪರಿಸರ ಉಳಿಸಿ ಬೆಳೆಸಲು ಸಹಕಾರಿಯಾಗಲಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧಿಶರಾದ ರವೀಂದ್ರ ಕಾರಬಾರಿ ಹೇಳಿದರು.
ವಿಜಯಪುರ ನಗರದ ಹೊರವಲಯದಲ್ಲಿರುವ ಹಿಟ್ನಳ್ಳಿ ಕೃಷಿ ವಿಜ್ಞಾನ ಕೇಂದ್ರದ ಸಭಾ ಭವನದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಪೋಷಣೆ ಮತ್ತು ಸಂರಕ್ಷಣೆ ಕುರಿತು ಏರ್ಪಡಸಿದ್ದ ವಿಚಾರ ಸಂಕೀರಣವನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರ ಉತ್ತಮ ಪರಿಸರಕ್ಕೆ ಮತ್ತು ಸ್ವಚ್ಛ ಪರಿಸರ ಅನುಷ್ಠಾಣಕ್ಕಾಗಿ ಕೋಟಿ ಕೋಟಿ ಅನುದಾನವನ್ನು ವಿನಯೋಗಿಸುತ್ತದೆ. ಆದರೆ ಸರಕಾರದ ಹಣ ಪೋಲಾಗದಂತೆ ನಿಜವಾಗಿ ಪರಿಸರಕ್ಕೆ ಮಾತ್ರ ಬಳಕೆ ಆಗಬೇಕು. ಪರಿಸರ ಬೆಳೆಸುವುದು ಕೇವಲ ವಿದ್ಯಾರ್ಥಿಗಳಿಗಾಗಿ ಮಾತ್ರವಲ್ಲ, ಸಮಾಜದ ಪ್ರತಿಯೊಬ್ಬ ನಾಗರಿಕರ ಹೊಣೆಗಾರಿಕೆ ಆಗಬೇಕೆಂದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಸುರೇಶ ಗೊಣಸಗಿ ಮಾತನಾಡಿ, ಗಿಡ ಮರಗಳನ್ನು ಬೆಳೆಸುವುದರಿಂದ ಪ್ರಾಣಿ, ಪಕ್ಷಿ ಹಾಗೂ ಮಾನವ ಸಂಕುಲವನ್ನು ಉಳಿಸಬಹುದು. ಇಲ್ಲವಾದರೆ ಮುಂದಿನ ದಿನಗಳಲ್ಲಿ ತುಂಬ ಕಷ್ಟದ ಕಾಲವನ್ನು ನಾವೆಲ್ಲರು ಎದುರಿಸಬೇಕಾಗುತ್ತದೆ. ಮರ ಬೆಳೆಸಿ ಬರ ಅಳಿಸಿ ಎಂಬ ನಾಣ್ನುಡಿಯಂತೆ ಪ್ರತಿಯೊಬ್ಬರು ಮನೆ ಅಂಗಳದಲ್ಲಿ ಶಾಲೆಗಳಲ್ಲಿ, ರಸ್ತೆ ಬದಿಗಳಲ್ಲಿ, ಅರಣ್ಯ ಪ್ರದೇಶಗಳಲ್ಲಿ, ಬೆಟ್ಟ ಗುಡ್ಡಗಳಲ್ಲಿ ಪರಿಸರ ಗಿಡ ಮರಗಳನ್ನು ಬೆಳೆಸುವ ಪರಿಪಾಠವನ್ನು ಮಾಡಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಹ ವಿಸ್ತರಣಾ ನಿದರ್ೇಶಕರಾದ ಡಾ. ಎಸ್.ಬಿ. ಕಲಗಟಗಿ ಮಾತನಾಡಿ, ಪರಿಸರ ಮಾಲಿನ್ಯ ಮತ್ತು ಪ್ಲಾಸ್ಟಿಕ್ ಬಳಕೆಯಿಂದ ಮಾನವ ಸಂಕುಲದ ಮೇಲೆ ದುಷ್ಪರಿಣಾಮ ಬೀರಲಿದೆ. ಆದ್ದರಿಂದ ಪ್ರತಿಯೊಬ್ಬರು ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಉತ್ತಮ ಪರಿಸರ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಿಂದಗಿ ವಲಯ ಅರಣ್ಯ ಅಧಿಕಾರಿ ಬಿ.ಆಯ್. ಬಿರಾದಾರ, ವಿಜಯಪುರ ವಲಯ ಅರಣ್ಯ ಅಧಿಕಾರಿ ರೂಪಾ, ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಎಸ್.ಎಮ್.ಮುಂದಿನಮನಿ, ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ ಸಹ ಸಂಶೋಧನ ನಿರ್ದೇಶಕ ಡಾ.ಆಯ್.ಎಸ್. ಕಟಗೇರಿ ಪರಿಸರ ಸಂರಕ್ಷಣೆ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಗತಿ ಪರ ರೈತರಾದ ಮಲ್ಲು ಬಿದರಿ, ಆಹೇರಿ ಬಸವ ಸಾಹಿತ್ಯ ವೇದಿಕೆ ಅಧ್ಯಕ್ಷ ಬಂಡೆಪ್ಪ ತೇಲಿ, ಡಾ. ಪ್ರೇಮಾ ಪಾಟೀಲ, ಡಾ. ಸಂಗೀತಾ ಜಾಧವ, ಡಾ. ಶ್ರೀಶೈಲ ರಾಠೋಡ, ವಿವೇಕ ದೇವರನಾವದಗಿ, ಮಲ್ಲಪ್ಪ ಬಿ ಮುಂತಾದವರು ಉಪಸ್ಥಿತರಿದ್ದರು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಎಸ್.ಎ. ಬಿರಾದಾರ ಸ್ವಾಗತಿಸಿದರು. ಕೆ.ವಿ.ಕೆ. ತಾಂತ್ರಿಕ ಅಧಿಕಾರಿ ಡಾ. ಬಿ.ಸಿ. ಕೊಲ್ಹಾರ ನಿರೂಪಿಸಿದರು. ಕೆ.ವಿ.ಕೆ. ಸಸ್ಯ ರೋಗ ಶಾಸ್ತ್ರ ವಿಜ್ಞಾನಿ ಡಾ. ಎಸ್.ಎಮ್. ವಸ್ತ್ರದ ವಂದಿಸಿದರು. ಇದೇ ಸಂದರ್ಭದಲ್ಲಿ ಕೆ.ವಿ.ಕ. ಆವರಣದಲ್ಲಿ ನೂರಾರು ಸಸಿಗಳನ್ನು ನೆಟ್ಟು ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.