ವಿಜಯಪುರ: ಡಿಆರ್ಡಿಒ ವಿಜ್ಞಾನಿಗಳಿಂದ ವಿಚಾರ ಸಂಕೀರಣ

ಲೋಕದರ್ಶನ ವರದಿ

ವಿಜಯಪುರ 01: ಸ್ಫರ್ಧಾತ್ಮಕ ಜಗತ್ತಿಗೆ ಹೊಂದಾಣಿಕೆಯಾಗುವಂತೆ ನವೀಕೃತ ತಂತ್ರಜ್ಞಾನದ ಮೂಲಕ ಸೃಜನಶೀಲತೆಯನ್ನು ಬೆಳೆಸಿಕೊಂಡು ನಾವಿನ್ಯ ವಿಚಾರಗಳಿಗೆ ಸದಾ ಯೋಜಿಸುತ್ತಿರಬೇಕು ಎಂದು ಭಾರತ ಸುಪ್ರಸಿದ್ಧ ಸಂಸ್ಥೆಯಾದ ಡಿಆರ್ಡಿಒ ಪ್ರತಿಭಾನ್ವಿತ ಯುವ ವಿಜ್ಞಾನಿ ಡಾ.ವಿಜಯ ಪೆಟಲೆ ವಿದ್ಯಾಥರ್ಿಗಳಿಗೆ ಕರೆ ನೀಡಿದರು.

ನಗದರ ಸಿಕ್ಯಾಬ ಶಿಕ್ಷಣ ಸಂಸ್ಥೆಯ ಇಂಜಿನಿಯರಿಂಗ ಕಾಲೆಜಿನ ಮೆಕ್ಯಾನಿಕಲ್ ವಿಭಾಗದಲ್ಲಿ ಜರುಗಿದ ಒಂದು ದಿನದ ವೈಜ್ಞಾನಿಕ ವಿಚಾರ ಸಂಕೀರ್ಣದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿಶೇಷ ಉಪನ್ಯಾಸ ನೀಡಿದ ಅವರು, ತಾಂತ್ರಿಕ ವಿಭಾಗದಲ್ಲಿ ವಿನೂತನ ಚಟುವಟಿಕೆಗಳ ಮೂಲಕ ಅನ್ವೇಶಣಾ ಮನೋಭಾವದಿಂದ ಹೊಸದನ್ನು ಕಂಡು ಹಿಡಿಯಲು ತವಕವಿರಬೇಕು. ಸದಾ ಚಿಂತನಶೀಲ, ಅಧ್ಯಯನಶೀಲ ಮನೋಭಾವದಿಂದ ಓದಿನೊಂದಿಗೆ ಪ್ರಾತಕ್ಷಿಕ ಕಡೆಗೆ ಗಮನ ನೀಡುತ್ತ ಹೊಸತನದ ಮೂಲಕ ವಿದ್ಯಾಥರ್ೀ ಜೀವನ ಸಾಗಬೇಕು. ಆಳವಾದ ಅಧ್ಯಯನ ನಮ್ಮ ಜೀವನಕ್ಕೆ ಸುಮಾರ್ಗ ಕಲ್ಪಿಸಬಲ್ಲದು ಎಂದು ಹೇಳುತ್ತ ನವೀಕೃತ ತಂತ್ರಜ್ಞಾನ ಮತ್ತು ಅದರ ಸಂಶೋಧನೆ ಕುರಿತು ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ನೀಡುವುದರ ಜೊತೆಗೆ ಇಂತಹ ಸಂಸ್ಥೆಗಳಲ್ಲಿ ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡುವುದರ ಮೂಲಕ ಭವಿಷ್ಯ ರೂಪಿಸಿಕೊಂಡು ದೇಶಕ್ಕೆ ಕೊಡುಗೆ ಆಗಿ ಬಾಳಬೇಕೆಂದು ನುಡಿದರು.

ಮೆಕ್ಯಾನಿಕಲ್ ಇಂಜಿನಿಯರಿಂಗ ವಿಭಾಗದ ಮುಖ್ಯಸ್ಥರಾದ ಡಾ.ಸೈಯದ ಅಬ್ಬಾಸ ಅಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತ, ನಮ್ಮ ಕಾಲೇಜಿನಲ್ಲಿ ವಿದ್ಯಾಥರ್ಿಗಳ ಅನುಕೂಲಕ್ಕಾಗಿ ಇಂತಹ ಕಾರ್ಯಕ್ರಮ ಆಯೋಜಿಸಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಶಿಕ್ಞಕ ಗುರು ಬಡಿಗೇರ ಅವರು ಕಾರ್ಯಾಗಾರವನ್ನು  ಆಯೊಜಿಸಿದ್ದು ಶಶೀರ ಕೆಂಗನಾಳ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಸಂಸ್ಥೆಯ ಉಪಪ್ರಾಂಶುಪಾಲ ನುರುಲ್ಲಾ ಶರೀಫ ಉಪನ್ಯಾಸಕ ಅಲ್ತಾಫ ಬಾಗವಾನ, ಆಸಿಫ ದೊಡಮನಿ, ಸಚಿನ ಪಾಂಡೆ, ಸಿಕಂದರ ಗಿರಗಾಂವಕರ, ಸರಫರಾಜ ಕಾಜಿ, ಸೈಯದ ಸಮೀರ, ರಫೀಕ ಮಾನವಿ, ದಿಲೀಪ ಸುತ್ರಾವೆ, ಮುತ್ತು ಡೊಮನಾಳ ಉಪಸ್ಥಿತರಿದ್ದರು. ಕಾರ್ಯಕ್ರಮ ಆಯೊಜಿಸಿದಕ್ಕೆ ಸಂಸ್ಥೆಯ ನಿರ್ದೇಶಕ  ಸಲಾವುದ್ದಿನ ಪುಣೇಕರ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗಕ್ಕೆ ಶುಭ ಕೋರಿದರು.