ಲೋಕದರ್ಶನ ವರದಿ
ವಿಜಯಪುರ 24: ಕಲಾವಿದರು ತಮಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಉನ್ನತ ಸ್ಥಾನಕ್ಕೆ ತಲುಪಬೇಕು. ಕಲಾವಿದರು ಕಲೆಗಳನ್ನು ಪ್ರೀತಿಸಬೇಕು ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಕುಲಸಚಿವೆ ಪ್ರೊ.ಆರ್.ಸುನಂದಮ್ಮ ಹೇಳಿದರು.
ಮಹಿಳಾ ವಿವಿ ಜ್ಞಾನಶಕ್ತಿ ಆವರಣದ ಪ್ರದರ್ಶಕ ಕಲೆಗಳ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ 'ತಬಲಾ ಸ್ವತಂತ್ರವಾದನ' ಕಾರ್ಯಕ್ರಮವನ್ನು ತಬಲಾ ಬಾರಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಸಂಗೀತ ವಿಭಾಗದ ವಿದ್ಯಾಥರ್ಿನಿಯರು ಎಲ್ಲರೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಳ್ಳಬೇಕು ಎನ್ನುವುದೇ ನನ್ನ ಆಶಯ. ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಎಂ.ಪಿ.ಬಳಿಗಾರ್ ಮಾತನಾಡಿ, ಈ ಕಾರ್ಯಕ್ರಮಕ್ಕೆ ಖ್ಯಾತ ತಬಲಾ ವಾದನ ಕೇಶವ ಜೋಶಿ ಆಗಮಿಸಿದ್ದು ನಮಗೆಲ್ಲ ಅತೀವ ಸಂತಸವನ್ನು ತಂದಿದೆ. ಇಂತಹ ಕಾರ್ಯಕ್ರಮಗಳು ಸಂಗೀತ ವಿದ್ಯಾಥರ್ಿನಿಯರಿಗೆ ಪ್ರೋತ್ಸಾಹವನ್ನು ತುಂಬುತ್ತವೆ. ಎಂದರು.
ಸಂದರ್ಭದಲ್ಲಿ ಬೆಂಗಳೂರಿನ ಕಲಾವಿದ ಕೇಶವ ಜೋಶಿ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಉಪನ್ಯಾಸಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ, ನಗರದ ಕಲಾವಿದರಾದ ರಮೇಶ ಚವ್ಹಾಣ, ದತ್ತಾತ್ರೇಯ, ಶ್ರೀಪಾದ ಅಟ್ಲೆ, ಬಸವಂತರಾಯ್ ಹೂಗಾರ, ಜಗನ್ನಾಥ್ ಅಳಗಿ, ಸಂಗಣ್ಣ ಪಾಟೀಲ್, ವಿಭಾಗದವಿದ್ಯಾರ್ಥಿನಿಯರು ಹಾಗೂ ಮತ್ತಿತರರು ಇದ್ದರು. ಕಾರ್ಯಕ್ರಮದಲ್ಲಿ ಅನುಷಾ ಹಿರೇಮಠ ಪ್ರಾಥರ್ಿಸಿದರು. ವಿದ್ಯಾಶ್ರೀ ಪರಿಚಯಿಸಿದರು. ಡಾ.ಹರೀಶ್ ಹೆಗಡೆ ನಿರೂಪಿಸಿ, ವಂದಿಸಿದರು.