ಕಾಯಕ ರತ್ನ ಪ್ರಶಸ್ತಿಗೆ ವಿಜಯ ಕುಮಾರ ಕವಲೂರ್ ಆಯ್ಕೆ
ಕೊಪ್ಪಳ 28: ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ ಜಿಲ್ಲಾ ಮತ್ತು ತಾಲೂಕು ಘಟಕ ವತಿಯಿಂದ ವಚನ ಸಾಹಿತ್ಯದಲ್ಲಿ ಸಾಧನೆಯನ್ನು ಮಾಡಿದ ವಿವಿಧ ಕ್ಷೇತ್ರದ ಮಹನೀಯರಿಗೆ ಕಾಯಕ ರತ್ನ ಪ್ರಶಸ್ತಿ ಯನ್ನು ನೀಡಿ ದಿನಾಂಕ 1 ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಘಟಕ ಉದ್ಘಾಟನಾ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು ಎಂದು ಕಾರ್ಯಕ್ರಮದ ಸಂಘಟಕರಾದ ಜಿ.ಎಸ್ ಗೋನಾಳ್ ಡಾ. ಶಿವಬಸಪ್ಪ ಮಸ್ಕಿ, ಮೈಲಾರ್ಪ ಉಂಕಿ, ಸುರೇಶ ಕುಂಬಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ವಿಜಯಕುಮಾರ ಕವಲೂರ ಆಯ್ಕೆ ಆಗಿದ್ದರೆ.ವಿಜಯ್ ಕುಮಾರ್ ಕವಲೂರು ಅವರಿಗೆ ಕಾಯಕ ರತ್ನ ಪ್ರಶಸ್ತಿ ಆಯ್ಕೆಗೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.