ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ತಾಲೂಕಾ ಘಟಕ ಚಿಕ್ಕೋಡಿ ಇವರ ಸಹಯೋಗದಲ್ಲಿ ಜರುಗಿದ ವಿಜಯ ದಿವಸ ಕಾರ್ಯಕ್ರಮ
ಮಾಂಜರಿ 16 : ವಿಧ್ಯಾರ್ಥಿಗಳಲ್ಲಿ ದೇಶ ಪ್ರೇಮ ಬೆಳೆಯಬೇಕು ಎಂದು ನಿವೃತ ಸೈನಿಕರಾದ ಬಾಳಾಸಾಬ ಧಯಾರಕರ ವಿಧ್ಯಾರ್ಥಿಗಳಿಗೆ ಕರೆ ನೀಡಿದರು
ಇಂದು ದಿನಾಂಕ 16 ರಂದು ಮಾಂಜರಿ ಗ್ರಾಮದಲ್ಲಿ ಭಾರತ ಸರ್ಕಾರದ ನೆಹರು ಯುವ ಕೇಂದ್ರ ಬೆಳಗಾವಿ. ಅಂಬೇಡ್ಕರ್ ಕಲಾ ಮತ್ತು ಕ್ರೀಡಾ ಯುವಕ ಮಂಡಳ ಮಾಂಜರಿ. ಸರ್ವೋದಯ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ತಾಲೂಕಾ ಘಟಕ ಚಿಕ್ಕೋಡಿ ಇವರ ಸಹಯೋಗದಲ್ಲಿ ಜರುಗಿದ ವಿಜಯ ದಿವಸ ಕಾರ್ಯಕ್ರಮದಲ್ಲಿ ಮಾತನಾಡುತಾ . ದೇಶದಲ್ಲಿ ನಾವೆಲ್ಲರು ನೆಮ್ಮದಿಯಾಗಿ ಸುಖ ಶಾಂತಿಯಿಂದ ಜೀವನ ನಡೆಸುತ್ತಿದೇವೆ ಎಂದರೆ ಅದು ದೇಶದ ಗಡಿ ಕಾಯುವ ಸೈನಿಕರ ತ್ಯಾಗದ ಪ್ರತಿಫಲವೇ ಆಗಿದೆ ಎಂದರು
ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಸಿದ್ದಾರ್ಥ ಗಾಯಾಗೋಳ ಮಾತನಾಡಿ ವಿಧ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗದೆ ಒಳ್ಳೆಯ ಶಿಕ್ಷಣ ಪಡೆಯುವ ಮೂಲಕ ಸಮಾಜಮೂಕಿ ಕಾರ್ಯ ಮಾಡುವ ಮೂಲಕ ರಾಷ್ಟದ ಅಬಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಅನಿತಾ ಧಯಾರಕರ ವಹಿಸಿದರು ವೇದಿಕೆಮೇಲೆ .ಕೆ ಎಸ. ಸಾಳುಂಕೆ. ಎಮ ಬಿ. ಕೋಳಿ ಡಿ.ಬಿ.ಖಟಾವಿ.ಆರ ಎಸ ಶಿಂಗೆ. ಸೇರಿದತ್ತೆ ಸಂಸ್ಥೆಯ ಶಿಕ್ಷಕರು ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ನಿವೃತ ಸೈನಿಕರಾದ ಶ್ರೀ ಬಾಳಾಸಾಬ ಧಯಾರಕರ ಅವರನ ಸತ್ಕರಿಸಲಾಯಿತು
ಕಾರ್ಯಕ್ರಮವನ ರಾಘವೇಂದ್ರ ಲಂಬುಗೋಳ ನಿರೂಪಿಸಿ ಸ್ವಾಗತಿಸಿ ವಂಧಿಸಿದರು