ಬಾಗಲಕೋಟೆ: ಸರಕಾರ ಮುಖ್ಯ ಕಾರ್ಯದಶರ್ಿಗಳಾದ ವಿಜಯ ಬಾಸ್ಕರ ಅವರು ಜಿಲ್ಲೆಯ ಬಾಗಲಕೋಟೆ, ಬಾದಾಮಿ, ಮುಧೋಳ ಹಾಗೂ ಜಮಖಂಡಿ ತಾಲೂಕಿನ ಪ್ರವಾಹ ಬಾಧಿತ ಪ್ರದೇಶಗಳ ಪ್ರವಾಸ ಕೈಗೊಂಡು ಹಾನಿ ಪರಿಶೀಲಿಸಿದರು.
ರವಿವಾರ ಬೆಳಿಗ್ಗೆ ಬಾದಾಮಿಯ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಪ್ರವಾಹ ಬಾಧಿತ ಪ್ರದೇಶಗಳ ಛಾಯಾಚಿತ್ರ ಪ್ರದರ್ಶನವನ್ನು ವಿಕ್ಷಿಸಿದರು. ನಂತರ ಗೋವನಕಿ ಗ್ರಾಮಕ್ಕೆ ತೆರಳಿ ನದಿ ಪಾತ್ರದಲ್ಲಿ ಸಂಗ್ರಹವಾಗಿದ್ದ ಮರಳನ್ನು ವೀಕ್ಷಿಸಿದರು.
ನಂದಿಕೇಶ್ವರ ಗ್ರಾಮಕ್ಕೆ ತೆರಳಿ ಅಲ್ಲಿನ ಆಶ್ರಯ ಮನೆಗಳಿಗೆ ಭೇಟಿ ನೀಡಿ ಅಲ್ಲಿ ಮೂಲಭೂತ ಸೌಲಭ್ಯಗಳು ಇರುವ ಬಗ್ಗೆ ಪರಿಶೀಲನೆ ಮಾಡಿದರು. ಜಾಲಿಹಾಳ ಗ್ರಾಮಕ್ಕೆ ತೆರಳಿ ಸೂರ್ಯಕ್ರಾಂತಿ ಬೆಳೆ ಹಾನಿ ವೀಕ್ಷಿಸಿದರು.
ಐತಿಹಾಸಿಕ ತಾಣಗಳಾದ ಪಟ್ಟದಕಲ್ಲ ಹಾಗೂ ಐಹೊಳೆ ಗ್ರಾಮಗಳಿಗೆ ತೆರಳಿ ಮನೆ ಹಾಗೂ ರಸ್ತೆ ಹಾನಿಯನ್ನು ಪರಿಶೀಲಿಸಿದರು.
ನಂತರ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮಕ್ಕೆ ತೆರಳಿ ದಾಳಿಂಬೆ ಬೆಳೆ ಹಾನಿಯನ್ನು ವೀಕ್ಷಿಸಿ ರೈತರ ಸಮಸ್ಯೆಗಳನ್ನು ಆಲಿಸಿದರು.
ಮುಧೋಳ ತಾಲೂಕಿನ ಚಚಿಖಂಡಿ ಮತ್ತು ಯಾದವಾಡ ಸೇತುವೆ ಪರಿಶೀಲಿಸಿದರು.
ನಂತರ ಜಮಖಂಡಿ ತಾಲೂಕಿನ ಅಸ್ಕಿ ಗ್ರಾಮದಲ್ಲಿ ತೆರೆಯಲಾದ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು.
ಸಂತ್ರಸ್ತರು ಸಂಪೂರ್ಣವಾಗಿ ಬೆರೆಡೆ ಸ್ಥಳಾಂತರಿಸುವಂತೆ ಮನವಿ ಮಾಡಿಕೊಂಡರು. ಈ ಕುರಿತು ಅಧಿಕಾರಿಗಳೊಂದಿಗೆ ಚಚರ್ಿಸಲಾಗುವುದೆಂದರು ಮುಖ್ಯ ಕಾರ್ಯದಶರ್ಿಗಳು ತಿಳಿಸಿದರು.
ಜಿಲ್ಲಾಧಿಕಾರಿಗಳಾದ ಆರ್.ರಾಮಚಂದ್ರನ್ ಅವರು ಪ್ರವಾಸದೂದ್ದಕ್ಕೂ ಪ್ರವಾಹ ಬಾಧಿತ ಪ್ರದೇಶಗಳ ಹಾನಿ ವಿವರಣೆಯನ್ನು ಮುಖ್ಯ ಕಾರ್ಯದಶರ್ಿಗಳಿಗೆ ನೀಡಿದರು.
ಭೇಟಿ ವೇಳೆಯಲ್ಲಿ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ, ಪ್ರೋಬೇಷನರಿ ಐ.ಎ.ಎಸ್ ಅಧಿಕಾರಿ ಗರಿಮಾ ಪನ್ವಾರ, ಬಾದಾಮಿ ತಹಶೀಲ್ದಾರ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.