ಮಾನವೀಯತೆ ಮರೆದ ವಿದ್ಯಾರ್ಥಿನಿಯರು

ಲೋಕದರ್ಶನವರದಿ

ಮಹಾಲಿಂಗಪುರ01 : ಮಾನವೀಯತೆಗೆ ಜಾತಿ-ಮತ-ಪಂಥ ಬೇದಭಾವ ಯಾವುದೂ ಅಡ್ಡಿಯಾಗದು ಎನ್ನುವುದಕ್ಕೆ ಸಾವಿರಾರು ಘಟನೆಗಳನ್ನು ಕೇಳುತ್ತೇವೆ ನೋಡುತ್ತೇವೆ.ಅದೇ ರೀತಿಯಾಗಿ ನಗರದ ಸಾಧು ಗುಡಿಯ ಭಾಗದಲ್ಲಿ ಪ್ರಗತಿ ಕಿರಿಯ ಶಾಲೆಯ 7ನೇ ತರಗತಿಯಲ್ಲಿ ಓದುತ್ತಿರುವ ಪ್ರಿಯಾಂಕ ಪಾತ್ರೋಟ, ಅನ್ನಪೂರ್ಣ ಹಟ್ಟಿ, ಯಶೋಧ ಮೇತ್ರಿ ಇವರು ಯಾರು ಇಲ್ಲದ ನೀಲವ್ವ ಕೆರೂರ ಎಂಬ ವೃದ್ಧೆಗೆ ಎಳೆನೀರು, ಬ್ರೆಡ್,ಪುರೆ ನೀಡಿ ಮಾನವೀಯತೆ ಮೆರೆದಿದ್ದಾರೆ. 

             ಶನಿವಾರ ಶಾಲೆಯಿಂದ ಮನೆಗೆ ಹೋಗುವ ದಾರಿಯಲ್ಲಿ ಯಾರೋ ನೀಡಿದ ಆಹಾರವನ್ನು ತೆಗೆದುಕೊಂಡು ಹೋಗಲಿಕ್ಕೆ ಕ್ಯಾರಿಬ್ಯಾಗ್ ಕೇಳಿದ್ದು ಆಗ ಮಕ್ಕಳು ವೃದ್ಧೆಯ ಪೂವರ್ಾಪರವನ್ನು  ವಿಚಾರಿಸಿ ನಿರ್ಗತಿಕಳು ಎಂದರಿತ  ಮಮ್ಮಲ ಮರುಗಿದ್ದಾರೆ. ಭಾನುವಾರ ರಜೆ ಇರುವುದರಿಂದ ಮೂವರು ಸಹಪಾಠಿಗಳು ನಿರ್ಧರಿಸಿ ಎಳನೀರು, ಬ್ರೆಡ್, ಪುರೆಯನ್ನು ಒಂದೂವರೆ ಕಿ.ಮಿ. ನಡೆದುಕ್ಕೊಂಡು  ವೃದ್ಧೆ ಇದ್ದಲ್ಲಿಗೆ ಬಂದು ತಮ್ಮ ಕೈಯಾರೆ ಎಳೆ ನೀರು ಕುಡಿಸಿ, ತಂದ ಅಲ್ಪೋಪಹಾರ ತಿನ್ನಿಸಿ ತಮ್ಮ ಮನೆಗೆ ಮರಳಿದ್ದಾರೆ.ಆ ಮಕ್ಕಳಿಗೆ ವೃದ್ಧೆ ಮನಸಾರೆ ಆಶೀರ್ವದಿಸಿದ್ದು ವಿಶೇಷವಾಗಿತ್ತು. 

         ನಮ್ಮವರೆ ನಮಗಾಗದಿರುವ ಸಂದರ್ಭದಲ್ಲಿ   ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಕ್ಕಳ   ಹೃದಯ ನಿರ್ಗತಿಕರಿಗಾಗಿ ಮಿಡಿಯುತಿರುವುದು ನೋಡಿದರೆ ಇವರಿಗೆ ಎಂಥ ಸಂಸ್ಕಾರ ನೀಡಲಾಗಿದೆ ಇದು ಎಲ್ಲರಿಗೂ ಮಾದರಿಯಾಗುವ ಪ್ರಸಂಗವೆಂದು ಜನ ಆಡಿಕೊಳ್ಳುತ್ತಿದ್ದರು. 

      ಅಲ್ಲಿ ಸೇರಿದ ಎಲ್ಲರ ಕಣ್ಣಲ್ಲೂ ನೀರುದುರಿತು.ಆ ಮಕ್ಕಳನ್ನು ಮತ್ತೆ ವಿಚಾರಿಸಿದಾಗ  ಮನೆ ಹಾಗೂ ಶಾಲೆಯಲ್ಲಿ ಶಕ್ತಿವಂತರಿದ್ದೂ ಭಿಕ್ಷೆ ಬೇಡುವವರಿಗೆ ನೀಡದೆ ಅಶಕ್ತರ, ಬಡವರ ದುಃಖದುಮ್ಮಾನಗಳಲ್ಲಿ ಪಾಲಗೊಂಡು ಸಹಕರಿಸಿ ಎನ್ನುವ ಮಾತುಗಳು ಕೇಳಿ ಬಂದವು.