ಕೆಪಿಎಸ್ಸಿ ಪರೀಕ್ಷೆಯ ಅಕ್ರಮ ವಿರೋಧಿಸಿ ವಿದ್ಯಾರ್ಥಿ ಪರಿಷತ್ ಖಂಡಿನೆ

ಕೆಪಿಎಸ್ಸಿ ಪರೀಕ್ಷೆಯ ಅಕ್ರಮ ವಿರೋಧಿಸಿ ವಿದ್ಯಾರ್ಥಿ ಪರಿಷತ್ ಖಂಡಿನೆ 

ಬಳ್ಳಾರಿ 18: ಕರ್ನಾಟಕ ರಾಜ್ಯದಲ್ಲಿ ಕೆಪಿಎಸ್ಸಿ ಹಾಗೂ ಇನ್ನಿತರ ಹುದ್ದೆಗಳಿಗೆ ನಡೆಯುವ ಪರೀಕ್ಷೆಗಳಲ್ಲಿ ಪದೇಪದೇ ಅಕ್ರಮ ಪ್ರಶ್ನೆ ಪತ್ರಿಕೆ ಸೋರಿಕೆ ಇನ್ನಿತರ ಘಟನೆಗಳು ನಡೆಯುತ್ತಿರುವುದು ಎಬಿವಿಪಿ ಖಂಡಿಸುತ್ತದೆ. ವಿದ್ಯಾರ್ಥಿ ಸಮುದಾಯಕ್ಕೆ ಸರ್ಕಾರಿ ಹುದ್ದೆಗಳಿಗೆ ನಡೆಯುವ ಪರೀಕ್ಷೆಯ ಪಾವಿತ್ರ್ಯತೆ ಕಳೆದುಕೊಂಡಿರುವುದು ಸ್ಪಷ್ಟವಾಗುತ್ತಿದೆ.   

ಪಿಡಿಒ ಹುದ್ದೆಗಾಗಿ ಕೆಪಿಎಸ್ಸಿ ರಾಯಚೂರು ಜಿಲ್ಲೆಯ ಸಿಂಧನೂರು ಸರ್ಕಾರಿ ಪದವಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ 10 ಗಂಟೆ ಬದಲಿಗೆ 10 ಇಪ್ಪತ್ತಕ್ಕೆ ಪ್ರಶ್ನೆ ಪತ್ರಿಕೆ ನೀಡಿದೆ ಹಾಗೂ ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆ ತೆಗೆಯುವಾಗ  ಅನ್ ಸೀಲ್ಡ್‌ ಇತ್ತು. 24 ಪ್ರಶ್ನೆ ಪತ್ರಿಕೆಗಳ ಪೈಕಿ 12 ಪ್ರಶ್ನೆ ಪತ್ರಿಕೆಗಳು ಮಾತ್ರ ಇದ್ದವು. ಕೇವಲ 12 ಪ್ರಶ್ನೆ ಪತ್ರಿಕೆಗಳು ಮಾತ್ರ ಹಂಚಿಕೆ ಮಾಡಲಾಗಿದೆ, ಇನ್ನುಳಿದ ಪ್ರಶ್ನೆ ಪತ್ರಿಕೆಗಳು ಕಾಣಿಯಾಗಿರುವುದು ಪರೀಕ್ಷಾ ಅಕ್ರಮವನ್ನು ತೋರಿಸುತ್ತಿದೆ.   

ಪದೇ ಪದೇ ರಾಜ್ಯದಲ್ಲಿ ಇಂತಹ ಪ್ರಶ್ನೆ ಪತ್ರಿಕೆ ಪ್ರಕರಣಗಳು ಆಗುತ್ತಿದ್ದು ಈ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನ ರಾಜ್ಯ ಸರ್ಕಾರ ವಿಧಿಸಬೇಕು ಹಾಗೂ ಪಿಡಿಓ ಪರೀಕ್ಷೆಯನ್ನ ಮರು ಪರೀಕ್ಷೆ ನಡೆಸುವಂತೆ ಎಬಿವಿಪಿ ಅಗ್ರಹಿಸುತ್ತಾ ಮಾನ್ಯ ಜಿಲ್ಲಾಧಿಕಾರಿಗಳು, ಬಳ್ಳಾರಿ ರವರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸಹಕಾರ್ಯದರ್ಶಿಯಾದ ವಿನೋದ್, ನಗರ ಕಾರ್ಯದರ್ಶಿಯಾದ ನವೀನ್ ಹೂಗಾರ್, ನಗರ ಸಂಘಟನಾ ಕಾರ್ಯದರ್ಶಿಯಾದ ಭರತ್ ತಳವಾರ, ಕಾರ್ಯಕರ್ತರಾದ ವರೂಣ್, ಬಸವನಗೌಡ, ಸಾಗರ್ ಹಾಗೂ ಇನ್ನಿತರೆ ಕಾರ್ಯಕರ್ತರು ಉಪಸ್ಥಿತರಿದ್ದರು. ಸದರಿ ವಿಷಯವನ್ನು ತಮ್ಮ ಅಮೂಲ್ಯ ದಿನಪತ್ರಿಕೆಯಲ್ಲಿ ಪ್ರಕಟಿಸಲು ಕೋರಲಾಗಿದೆ.