ಲೋಕದರ್ಶನ ವರದಿ
ರಾಣಿಬೆನ್ನೂರು04: ವಿದ್ಯೆ ಸಾಧಕನೇ ಸ್ವತ್ತೇ ಹೊರತು ಸೋಮಾರಿತನ ಸ್ವತ್ತಲ್ಲ. ಪ್ರತಿಯೊಬ್ಬ ವಿದ್ಯಾಥರ್ಿಗಳು ಗುರಿ ಸಾಧನೆಯೆಡೆಗೆ ಗಮನ ಹರಿಸಿದರೆ ಯಶಸ್ಸನ್ನು ಗಳಿಸಬಹುದು. ನಿಮ್ಮ ಬುದ್ಧಿಶಕ್ತಿಯನ್ನು ಕೇವಲ ಶಿಕ್ಷಣಕ್ಕೆ ಮಾತ್ರ ಬಳಸದೇ ಗುರು ಹಿರಿಯರಿಗೆ, ದೇಶದ ಅನ್ನದಾತ ರೈತ ಮತ್ತು ಸೈನಿಕನಿಗೆ ನೀಡುವ ಗೌರವದಿಂದ ನಿಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಿ ಎಂದು ಉಪನ್ಯಾಸಕಿ ಸುಮತಿ ಜಯಪ್ಪ ಹೇಳಿದರು.
ಸ್ಥಳೀಯ ಪ್ರತಿಷ್ಠಿತ ಆರ್ಟಿಈಎಸ್ ಕಾಲೇಜಿನಲ್ಲಿ 2018-19 ನೇ ಶೈಕ್ಷಣಿಕ ವರ್ಷದ ಪಠ್ಯೇತರ ಚಟುವಟಿಕೆ ಹಾಗೂ ವಿದ್ಯಾಥರ್ಿ ಒಕ್ಕೂಟದ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಇಂದಿನ ದಿನಮಾನಗಳಲ್ಲಿ ಕೇವಲ ಜಾತಿಗಷ್ಟೇ ಸೀಮಿತ ಮಾಡಿಕೊಂಡು ಪ್ರತಿಭಾ ಪುರಸ್ಕಾರ ಮಾಡುವುದು ಸಂಪ್ರದಾಯ ಆದರೆ ಆರ್ಟಿಈಎಸ್ ಸಂಸ್ಥೆ ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಸ್ಪೂತರ್ಿ ಸಿಗಲೆಂದು ಎಲ್ಲ ವಿದ್ಯಾಥರ್ಿಗಳಿಗೂ ವಿಷಯವಾರು ಹೆಚ್ಚು ಅಂಕಗಳಿಸಿದವರಿಗೆ ಪುರಸ್ಕಾರ ನೀಡುತ್ತಿರುವುದು ಹೆಮ್ಮೆ ಎನಿಸುತ್ತದೆ ಎಂದರು.
ವಿದ್ಯಾಥರ್ಿಗಳು ತಮ್ಮ ಅಮೂಲ್ಯವಾದ ವಿದ್ಯಾಥರ್ಿ ಜೀವನದಲ್ಲಿ ದುಶ್ಚಟಗಳಿಗೆ ದಾಸರಾಗದೇ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಸಜ್ಜನರ ಸಂಗ ಮಾಡಿ. ನಮ್ಮ ದೇಶದ ಸಂಪ್ರದಾಯ, ಸಂಸ್ಕೃತಿ, ಪರಂಪರೆ, ಗುರು ಹಿರಿಯರಿಗೆ ನೀಡುವ ಗೌರವ ನಿಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಆದರೆ ಕೇವಲ ಹಣ ಗಳಿಕೆಯೊಂದೇ ಗುರಿಯನ್ನಾಗಿಸಿಕೊಂಡು ಹೆತ್ತ ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ದೂಡುವ ಇಂದಿನ ದಿನಮಾನಗಳಲ್ಲಿ ಭಾವನಾತ್ಮಕತೆ ಸಂಬಂಧಗಳು ಮರೆಯಾಗುತ್ತಿರುವುದು ದುದರ್ೈವದ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ಪ್ರತಿಭೆ ಹುಟ್ಟುವುದು ಗುಡಿಸಲಲ್ಲಿ ಸಾಯುವುದು ಅರಮನೆಯಲ್ಲಿ. ಆದ್ದರಿಂದ ಪ್ರತೀ ವಿದ್ಯಾಥರ್ಿಗಳು ಕಷ್ಟ ಪಟ್ಟರೆ ಮಾತ್ರ ಪ್ರತಿಫಲ ಲಭಿಸುವುದು. ಆದರ್ಶಮಯ ಜೀವನ ಕಂಡುಕೊಂಡು ನಿಮ್ಮ ಬಯಕೆಗಳನ್ನು ಬದಿಗೊತ್ತಿ ಗುರುವಿನ ಮಾರ್ಗದರ್ಶನಲ್ಲಿ ಗುರಿ ಸಾಧನೆಯೆಡೆಗೆ ಮುಖ ಮಾಡಿ ಮುನ್ನಡೆದರೆ ಸಾಧನೆಯ ಶಿಖರ ಏರಬಹುದು. ಸಮಾಜದಲ್ಲಿ ಮಹಿಳೆಯರನ್ನು ಗೌರವ ಭಾವನೆಯಿಂದ ಕಂಡರೆ ನಮ್ಮ ದೇಶದ ಸಂಸ್ಕೃತಿಯನ್ನು ಉಳಿಸಿದಂತೆ. ಆದರೆ ಇಂದಿನ ದಿನಗಳಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ ನಾಗರಿಕ ಸಂಸ್ಕೃತಿ ಮೈದಳೆಯುಂತೆ ಮಾಡುವುದು ನಮ್ಮ ನಿಮ್ಮೆಲ್ಲರ ಗುರುತರವಾದ ಜವಾಬ್ಧಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆರ್ಟಿಈಎಸ್ ಸಂಸ್ಥೆಯ ಅಧ್ಯಕ್ಷ ಸುಭಾಸ ಸಾವಕಾರ, ಸೀತಾ ಎಸ್. ಸಾವಕಾರ, ಪ್ರಾಚಾರ್ಯ ಪಿ.ಬಿ.ಕಟಾವಕರ, ಉಪನ್ಯಾಸಕರಾದ ಶಂಭು ಕಡೂರ, ಎನ್.ಎಚ್.ಹೊಸಮನಿ, ಎಚ್.ಜಿ. ಬಸವರಾಜ, ಸಿ.ಪಿ.ಸಂಗಣ್ಣನವರ, ಇಜಾಜ್ ಅಹ್ಮದ್, ವಾಸಣ್ಣ ಕುಸಗೂರ, ವಿದ್ಯಾಥರ್ಿ ಪ್ರಧಾನ ಕಾರ್ಯದಶರ್ಿ ಪ್ರಕಾಶ ಕೊಟ್ಟದ, ವಿದ್ಯಾಥರ್ಿನಿ ಪ್ರಧಾನ ಕಾರ್ಯದಶರ್ಿ ಕಾವ್ಯ ನೀಲಪ್ಪನವರ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಾಧನೆಗೈದ ರ್ಯಾಂಕ್ ವಿದ್ಯಾಥರ್ಿ ಹರೀಶ ಮಿಳ್ಳಿ, ಅಂತರಾಷ್ಟ್ರೀಯ ಕ್ರೀಡಾಪಟು ಅಭಿಷೇಕ ಅಡ್ಡೇರವರನ್ನು ಸನ್ಮಾನಿಸಿ ಗೌರವಿಸಲಾಯಿತು.