ಬೆಂಗಳೂರು, ಜ.9 ಲಯನ್ಸ್ ಕ್ಲಬ್ ಹಾಗೂ ಸಾಯಿ ಲಕ್ಷ್ಮಣ್ ಫಿಲ್ಮ್ ಇನಸ್ಟಿಟ್ಯೂಟ್ ನಿಂದ ಜ.12ರಂದು ವಿದ್ಯಾರಣ್ಯಪುರ ಪರಿಸರ ಉತ್ಸವವನ್ನು ವಿದ್ಯಾರಣ್ಯಪುರದ ಎನ್ ಟಿಐ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಲಯನ್ಸ್ ಕ್ಲಬ್ ಸಂಚಾಲಕ ರವಿ ನಾಯ್ಡು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರಣ್ಯಪುರ ದಲ್ಲಿರುವ ಎನ್ ಟಿ ಐ ಕ್ರೀಡಾಂಗಣದಲ್ಲಿ ಬೆ.10ರಿಂದ ರಾತ್ರಿ 10ರ ವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಉತ್ಸವಕ್ಕೆ ಪರಿಸರ ವಾದಿಗಳು, ಪರಿಸರ ಚಿಂತಕರು, ರಾಜಕಾರಣಿಗಳು, ಚಲನಚಿತ್ರ ನಟ- ನಟಿಯರು, ನಿರ್ಮಾಪಕರು ಹಾಗೂ ಭಜರಂಗಿ 2 ಚಿತ್ರತಂಡ ಭಾಗವಹಿಸಲಿದೆ ಎಂದು ಹೇಳಿದರು.
ಈ ಪರಿಸರ ಉತ್ಸವದಲ್ಲಿ ಉಚಿತ ಆರೋಗ್ಯ ಶಿಬಿರ ಏರ್ಪಡಿಸಿದ್ದು, ಅಪೋಲೊ ಆಸ್ಪತ್ರೆ, ಡಾ.ಸೋಲಂಕಿ ನೇತ್ರಾಲಯ ಮತ್ತು ಶಿರಡಿ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಆರೋಗ್ಯ ತಪಾಸಣೆ ನಡೆಯಲಿದ್ದು, 16 ವರ್ಷದ ಒಳಗಿನ ಮಕ್ಕಳಿಗೆ ಕಣ್ಣಿನ ತಪಾಸಣೆ ನಡೆಸಿ ಅವಶ್ಯವಿದ್ದಲ್ಲಿ ಕನ್ನಡಕ ವಿತರಿಸಲಾಗುತ್ತದೆ ಎಂದು ಅವರು ವಿವರಿಸಿದರು.