ವಿದ್ಯಾಥರ್ಿ ಜೀವನ ಅಮೂಲ್ಯವಾದದ್ದು: ಕರಿಬಸವರಾಜ

ಲೋಕದರ್ಶನ ವರದಿ

ಮೂಡಲಗಿ 03: ವಿದ್ಯಾಥರ್ಿಗಳು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಚಿಂತಿಸುವುದು ಅವಶ್ಯವಿದ್ದು ಅನೇಕ ವಿದ್ಯಾಥರ್ಿಗಳು ಅಧ್ಯಯನದ ಬದಲಾಗಿ ಹೆಚ್ಚು ಸಮಯವನ್ನು ಅನಗತ್ಯವಾಗಿ ಕಳೆದುಕೊಂಡು ಸಾಮಾಜಿಕ ಮೌಲ್ಯಗಳಿಂದ ದೂರ ಉಳಿಯುವಂತಾಗಿದೆ ಅಲ್ಲದೇ ವಿದ್ಯಾಥರ್ಿಗಳು ಸಾಮಾಜಿಕ ಚಿಂತನೆಯ ಬದುಕು ನಿಮರ್ಿಸಿಕೊಳ್ಳುವ ಬಗ್ಗೆ ಆಲೋಚಿಸದೇ ಇರುವುದು ವಿಷಾದನೀಯ, ತಮ್ಮ ಅಮೂಲ್ಯವಾದ ವಿದ್ಯಾಥರ್ಿ ಜೀವನವನ್ನು ವ್ಯರ್ಥ ಮಾಡಿಕೊಳ್ಳುವ ಬದಲಾಗಿ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಜೀವನ ರೂಪಿಸಿಕೊಳ್ಳುವ ಬಗ್ಗೆ ಆಲೋಚಿಸಿ ಉತ್ತಮ ವಿದ್ಯಾರ್ಜನೆಯನ್ನು ಆದರ್ಶ ನಾಯಕರ ಜೀವನವನ್ನಾಧರಿಸಿ ತನ್ನ ಬದುಕು ರೂಪಿಸಿಕೊಳ್ಳುವುದು ಅವಶ್ಯವಿದೆ ಎಂದು ಮೂಡಲಗಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯರ್ಾಲಯದ ಇ.ಸಿ.ಓ ಟಿ.ಕರಿಬಸವರಾಜ ಹೇಳಿದರು.

ಸ್ಥಳೀಯ ರೂರಲ್ ಡೆವಲಪ್ಮೆಂಟ್ ಸೊಸೈಟಿಯ ಸಮಾಜಕಾರ್ಯ ಪದವಿ ಮಹಾವಿದ್ಯಾಲಯದಲ್ಲಿ ವಿದ್ಯಾಥರ್ಿಗಳ ಮಾರ್ಗದರ್ಶನ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿರುವ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ ವಿದ್ಯಾಥರ್ಿ ಜೀವನ ನಿಜವಾಗಿ ಅಮೂಲ್ಯವಾದದ್ದು ಅದನ್ನು ಸರಿಯಾಗಿ ಬಳಿಸಿಕೊಂಡ ವ್ಯಕ್ತಿಗಳು ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ ಅಂತಹ ಸಿದ್ಧಾಂತ ಇಂದಿನ ವಿದ್ಯಾಥರ್ಿಗಳಲ್ಲಿ ಅವಶ್ಯಕವಿದೆ ಎಂದರು.

ಅತಿಥಿ ಸಂಜೀವ ಒಡೆಯರ ಮಾತನಾಡಿ ವಿದ್ಯಾಥರ್ಿಗಳು ತಮ್ಮ ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತಾ ಹೆಚ್ಚಿನ ಆಧ್ಯತೆ ನೀಡಬೇಕಾಗುತ್ತದೆ ಸ್ವಾವಲಂಬನೆಯ ಬದುಕು ವಿದ್ಯಾಥರ್ಿಗಳ  ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಸತ್ಯಪ್ಪ ಗೋಟೂರ ವಹಿಸಿಕೊಂಡು ಮಾತನಾಡುತ್ತಾ ವಿದ್ಯಾಥರ್ಿಗಳು ಗುರುವನ್ನು ಮೀರಿಸುವಷ್ಟು ಸ್ವ-ಸಾಮರ್ಥವನ್ನು ಬೆಳಿಸಿಕೊಳ್ಳುವುದು ಅವಶ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕ ಸುನಂದಾ ಅಂಗಡಿ, ರಾಜು ಪತ್ತಾರ, ಮತ್ತಿತರರು ಭಾಗವಹಿಸಿದ್ದರು. ಘಟಕಾಧಿಕಾರಿ ಗುರುರಾಜ ಬೆಣಚಿನಮರಡಿ ಸ್ವಾಗತಿಸಿದರು ಕುಮಾರಿ ವಿದ್ಯಾ ಗಾಡವಿ ನಿರೂಪಿಸಿದರು  ಕುಮಾರಿ ಲಕ್ಷ್ಮೀ ಪಾಲಬಾಂವಿ ವಂದಿಸಿದರು.