ಜ್ಞಾನಾಮೃತ ಚಿಣ್ಣರ ಉತ್ಸವ*
ಯರಗಟ್ಟಿ 18: ಸಮೀಪದ ತೋರಣಗಟ್ಟಿ ಗ್ರಾಮದ ಜ್ಞಾನಾಮೃತ ಶಾಲೆಯಲ್ಲಿ ಚಿಣ್ಣರ ಉತ್ಸವ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನೆರವೇರಿತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಉಳುವಯ್ಯಾ ಹಿರೇಮಠ ತೋರಣಗಟ್ಟಿ, ಸಾನಿಧ್ಯವನ್ನು ತ್ರಿ.ದಾ.ಮೂ. ಶ್ರೀ ಅಭಿನವ ಸಿದ್ರಾಯಜ್ಜನವರು ಕಟಕೋಳ ಅಧ್ಯಕ್ಷತೆಯನ್ನು ಕಲ್ಲಪ್ಪ ಯ. ಹುಣಸಿಕಟ್ಟಿ, ಸಂಸ್ಥಾಪಕ ಅಧ್ಯಕ್ಷರು ಜ್ಞಾನಾಮೃತ ಆಶ್ರಮ ಹಿರಿಯ ಪ್ರಾಥಮಿಕ ಶಾಲೆ ತೋರಣಗಟ್ಟಿ ಇವರುಗಳು ವಹಿಸಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಸ್ಯಾಮ್ಯುವೆಲ್ ವರ್ಗೀಸ್ ಸೆಂಟ್ ಥಾಮಸ್ ಸ್ಕೂಲ್ ಶಿರಾಲಿ, ಭಟ್ಕಳ ಇವರು ಆಗಮಿಸಿ ಹರ್ಷ ವ್ಯಕ್ತಪಡಿಸಿದರು.ಈ ಕಾರ್ಯಕ್ರಮವನ್ನು ಪಿ.ಎಸ್.ಐ. ಕಟಕೋಳದ ಬಸವರಾಜ ಕೊಣ್ಣೂರ ಉದ್ಘಾಟಿಸಿದರು. ಚಿಣ್ಣರ ಉತ್ಸವ ಕಾರ್ಯಕ್ರಮದಲ್ಲಿ ಎಎಸ್‌ಐ ಯರಗಟ್ಟಿ ಶ್ರೀ ಬಸವರಾಜ ರಂಗಣ್ಣವರ ಜ್ಞಾನಾಮೃತ ಅಮೃತ ಬಿಂದು ಸ್ಮರಣ ಸಂಚಿಕೆ ಪುಸ್ತಕವನ್ನು ಎಲ್ಲ ಗಣ್ಯಮಾನ್ಯರು ಜೊತೆ ಸೇರಿ ಬಿಡುಗಡೆ ಮಾಡಿ ಮಾತನಾಡಿದರು. ಈ ಪುಸ್ತಕ ಕೇವಲ ಸಾಧಾರಣ ಪುಸ್ತಕವಾಗಿರದೆ ಹಲವು ವಿಷಯಗಳನ್ನೊಳಗೊಂಡ ಒಂದು ಪುಟ್ಟ ಗ್ರಂಥವಾಗಿದೆ ಎಂದರು. ನಮ್ಮ ಶಾಲೆ ಮತ್ತು ನಮ್ಮ ಸಂಸ್ಥೆಯ ಕುರಿತು ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಎಸ್. ಪಿ. ಕರಲಿಂಗಪ್ಪನವರು ಬಹಳ ಹರ್ಷ ವ್ಯಕ್ತಪಡಿಸಿದರು.
"ವೇರ್ ದೇರ್ ಇಸ್ ಅ ವಿಲ್, ದೇರ್ ಇಸ್ ವೇ" "ಮನಸಿದ್ದರೆ ಮಾರ್ಗವಿದೆ" ನಿಮ್ಮ ಪರಿಶ್ರಮ ನಿಮ್ಮ ಸಾಧನೆಯಲ್ಲಿ ಕಾಣುತ್ತಿದೆ. ಅಧ್ಯಕ್ಷರ ಮಾರ್ಗದರ್ಶನ, ಕಾರ್ಯದರ್ಶಿಗಳ ಕಾರ್ಯವೈಖರಿ, ಶಿಕ್ಷಕರ ಕಲಿಕೆ ಮತ್ತು ಮಕ್ಕಳ ಸಹಭಾಗಿತ್ವ ಇವೆಲ್ಲವುಗಳು ಸಮತೋಲನ ರೀತಿಯಲ್ಲಿ ಶಿಕ್ಷಣದಲ್ಲಿ ಅಳವಡಿಸಿದರೆ ಇಂತಹ ದೊಡ್ಡ ಸಂಸ್ಥೆ ಉದಯವಾಗಲು ಸಾಧ್ಯ. ಎರಡು ಕೈ ಸೇರಿದರೆ ಚಪ್ಪಾಳೆ ಎಂಬಂತೆ ಎಲ್ಲರ ಸಹಕಾರದಿಂದ ಇಂತಹ ಸಂಸ್ಥೆ ದೊಡ್ಡ ಮಟ್ಟದಲ್ಲಿ ಬೆಳೆಯುವುದಕ್ಕೆ ಸಾಧ್ಯ ಎಂದರು. ಉಪನ್ಯಾಸಕರಾಗಿ ಕುಶಾಲರೆಡ್ಡಿ ಗಣಿ ಮೇಧಾ ಸಂಸ್ಥೆ ಧಾರವಾಡ ಇವರು ಮಾತನಾಡಿ ಕನಸು ಕಾಣುವುದು ದೊಡ್ಡದಲ್ಲ, ಕಂಡ ಕನಸು ನನಸು ಮಾಡುವವರೆಗೆ ಕಣ್ಣು ಮುಚ್ಚದೆ ಇರುವ ಹಾಗೆ ಮಾಡುವುದೇ ನಿಜವಾದ ಕನಸು ಎಂದು ಬಹಳ ಅರ್ಥಪೂರ್ಣವಾಗಿ ನಮಗೆ ಮಾರ್ಗದರ್ಶನದೊಂದಿಗೆ ಹಿತ್ತ ನುಡಿಗಳನ್ನು ಹೇಳಿದರು.
ಕೊನೆಯಲ್ಲಿ ಶ್ರೀ ಸಿದ್ರಾಯಜ್ಜನವರ ಕಟಕೋಳ ಇವರು ಮಾತನಾಡಿ ಅನ್ನದಾನ ಜೊತೆಗೆ ವಿದ್ಯಾದಾನವು ಶ್ರೇಷ್ಟವಾದದ್ದು, ಗ್ರಾಮೀಣ ಭಾಗದಲ್ಲಿರುವ ಎಲ್ಲಾ ಮಕ್ಕಳಿಗೆ ಈ ಸಂಸ್ಥೆ ಶೈಕ್ಷಣಿಕವಾಗಿ ಕಲಿಯಲು ಬಹಳ ಸಹಾಯವಾಗಿದೆ ಹಾಗೂ ನನ್ನ ಮಠದಿಂದ ಈ ಶಾಲೆಯಲ್ಲಿ ಕಲಿಯುವ ಬಡ ಮಕ್ಕಳಿಗೆ ಸಹಾಯ ಮಾಡುವದಾಗಿ ಹೇಳಿದರು. ಮಕ್ಕಳ ಸಂಸ್ಕೃತಿಕ ಕಾರ್ಯಕ್ರಮಗಳು ಒಂದಕ್ಕಿಂತ ಒಂದು ಬಹಳ ವಿಭಿನ್ನ ಪಾತ್ರಗಳಲ್ಲಿ ಉತ್ತಮ ರೀತಿಯಲ್ಲಿ ಮೂಡಿ ಬಂದವು. ಈ ಕಾರ್ಯಕ್ರಮವನ್ನು ಕುಮಾರಿ ಭಾರತಿ ಪಟಗಾರ ಮಾತಾಜಿ ನಿರೂಪಿಸಿದರು. ನಮ್ಮ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳಾದ ಪ್ರಕಾಶ ಕೊಪ್ಪದ ಗುರುಗಳು ಎಲ್ಲ ಗಣ್ಯಮಾನ್ಯರನ್ನು, ಪಾಲಕರನ್ನು ಮತ್ತು ಮಕ್ಕಳನ್ನು ಸ್ವಾಗತಿಸಿದರು. ಸವಿತಾ ಎಂ. ಕಡಬಿ ಮಾತಾಜಿ ನಮ್ಮ ಶಾಲೆಯಿಂದ ವಿವಿಧ ವಸತಿ ಶಾಲೆಗೆ ಆಯ್ಕೆಯಾದ ಮಕ್ಕಳಿಗೆ ಮತ್ತು ಪಾಲಕರ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಲಕ್ಷ್ಮಿ ಮುದಗೊಂಡ-ಗ್ರಾಮ ಪಂಚಾಯತ ಅಧ್ಯಕ್ಷರು ತೋರಣಗಟ್ಟಿ . ಪಾರ್ವತಿ ಮ. ಪಾಟೋಳಿ ಗ್ರಾಮ ಪಂಚಾಯತ ಅಧ್ಯಕ್ಷರು ಕಟಕೋಳ. ಎಸ್. ಪಿ. ಕರಲಿಂಗಪ್ಪನವರ-ಶಿಕ್ಷಣ ಸಂಯೋಜಕರು, ರಾಮದುರ್ಗ. ಸಂಗಮೇಶ ಈ ಅಡ್ಡಣಗಿ-ಕನಿಕಾ ಟ್ರೇಡರ್ಸ್ ಕಟಕೋಳ. ಚೇತನ ಬಿಜ್ಜಳ-ಸಿ. ಇ. ಓ. ಜೆಎಂ. ಬಿಲ್ಡರ್ಸ್ ಇಳಕಲ್. ಎಸ್. ವಿ. ದಿವಟಗಿ-ಸಿ. ಆರ್. ಸಿ. ಕಟಕೋಳ. ಲಕ್ಶ್ಮಣ ಕಾಮಣ್ಣವ ಯುವ ನಾಯಕರು ರಾಮದುರ್ಗ, ರಮೇಶ್ ಕಾಡೇಶನವರ ಪಂಚಾಯತ ಸದಸ್ಯರು, ಆರ್. ಜಿ. ಸಿಂಗಾರಗೋಪ್ಪ ಮತ್ತು ಅಶ್ವಿನಿ ಆರ್. ಹುಣಸಿಕಟ್ಟಿ ಮಾತಾಜಿ ನಮ್ಮ ಶಾಲೆಯ ವಾರ್ಷಿಕ ವರದಿ ವಾಚನ ಮಾಡಿದರು. ಪ್ರಧಾನ ಗುರುಗಳು ಆಡಳಿತ ಮಂಡಳಿ, ಎಲ್ಲ ಸಿಬ್ಬಂದಿ ವರ್ಗದವರು, ಪಾಲಕರು ಮತ್ತು ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಾಗೂ ಬಿ. ಎಂ. ಕಟ್ಟಿಮನಿ ಪ್ರಧಾನಗುರುಗಳು ವಂದಿಸಿದರು.