ಲೋಕದರ್ಶನವರದಿ
ಮಹಾಲಿಂಗಪುರ೧೦: ವಿದ್ಯೆ ಎಂಬುವದು ಸಾಧಕನ ಸೊತ್ತು ಅದನ್ನು ಹಣದಿಂದ ಕೊಂಡುಕೊಳ್ಳಲು ಸಾಧ್ಯವಿಲ್ಲ. ಅದು ಪರಿಶ್ರಮ ಮತ್ತು ಶೃದ್ಧೆ ಭಕ್ತಿಯಿಂದ ಒಲಿಸಿಕೊಳ್ಳುವಂತಹದು ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಸಮೀಪದ ಮಧಭಾಂವಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ 2019-20ನೇ ಶೈಕ್ಷಣಿಕ ಸಾಲಿನ 8ನೇ ವರ್ಗದ ವಿದ್ಯಾಥರ್ಿಗಳಿಗೆ ಉಚಿತ ಸೈಕಲ್ ವಿತರಿಸಿ ಮಾತನಾಡಿದ ಅವರು ಸೈಕಲ್ ಉಚಿತ ಎಂದು ಭಾವಿಸಬಾರದು, ಇದರಲ್ಲಿ ಸಮಾಜದ, ತಂದೆ-ತಾಯಿಗಳ, ಶಿಕ್ಷಕರ ಋಣ ಅಡಗಿರುತ್ತದೆ. ಆದರ್ಶ ವಿದ್ಯಾಥರ್ಿಗಳಾಗಿ ಉತ್ತಮ ಶಿಕ್ಷಣ ಪಡೆದುಕೊಂಡು ಭವಿಷ್ಯದಲ್ಲಿ ಉತ್ತಮ ನಾಗರೀಕರಾಗಿ ಗ್ರಾಮದ, ದೇಶದ ಋಣ ತೀರಿಸಲು ಪ್ರಯತ್ನಿಸಬೇಕು ಎಂದು ವಿದ್ಯಾಥರ್ಿಗಳಿಗೆ ಕರೆ ನೀಡಿದರು.
ವಿದ್ಯಾಥರ್ಿಗಳು ಎಪಿಜೆ ಅಬ್ದುಲ್ ಕಲಾಂ, ಪ್ರಧಾನಿ ಮೋದಿ, ಅಂಬೇಡ್ಕರ, ಶಿವಾಜಿ, ಬಸವಣ್ಣನಂತಹ ಮಹಾನ್ ಪುರುಷರ ಆದರ್ಶಗಳನ್ನು ಅಳವಡಿಸಿಕೊಂಡು ದೇಶದ ಮಾದರಿ ನಾಗರಿಕರಾಗಿ ಬೆಳೆಯಬೇಕು. ಜೊತೆಗೆ ಶಾಲೆ ಮತ್ತು ಗ್ರಾಮದ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ಲಾಸ್ಟಿಕ್ ಬಳಕೆ ನಿಷೇಧಿಸಿ , ಎಲ್ಲರೂ ಕೈಜೋಡಿಸಿ ಶ್ರಮದಾನ ಮಾಡಿದರೇ ಸ್ವಚ್ಚ ಭಾರತದ ಕನಸು ನನಸಾಗಲು ಸಾಧ್ಯ ಎಂದರು.
ಗ್ರಾಪಂ ಅಧ್ಯಕ್ಷ ಗಣಪತಿ ಮಾದರ ಅಧ್ಯಕ್ಷತೆವಹಿಸಿದ್ದರು. ಶಾಲೆಯ ಮುಖ್ಯಗುರು ಕೆ.ಎಂ.ಬಿಜಾಪೂರ, ಎಸ್ಡಿಎಂಸಿ ಅಧ್ಯಕ್ಷ ರವಿ ಚಿಕ್ಕೋಡಿ, ಸದಾಶಿವ ಪಟ್ಟಣಶೆಟ್ಟಿ, ಸಂಜು ಮಾಳಿ, ಲಗಮಪ್ಪ ತಿಮ್ಮಾಪೂರ, ವಿಠ್ಠಲ ಮಾಂಗ, ವಿನೋದ ಉಳ್ಳಾಗಡ್ಡಿ, ಮಲ್ಲಪ್ಪ ಉರಭಿನವರ, ಬಸವರಾಜ ಹಾದಿಮನಿ, ಮಲ್ಲಪ್ಪ ಅರಭಾಂವಿ, ಸಂಗಪ್ಪ ಒಡರಟ್ಟಿ, ವಿಠ್ಠಲ ಮುಧೋಳ, ಪರಪ್ಪ ತಿಮ್ಮಾಪೂರ, ನಾರಾಯಣ ಪತ್ತಾರ, ಬಸವರಾಜ ಒಂಟಿ, ಶಿಕ್ಷಕರಾದ ಆಯ್. ಎಸ್.ಪಾಟೀಲ, ಸಂಗಮೇಶ ಮೂಕತರ್ಿಹಾಳ, ಡಾ. ಎಸ.ಬಿ.ಕುಂಬಾರ, ಆರ್.ಸಿ.ಗಾಳಿ, ಎಸ್. ಎಲ್. ಕುಂಬಾರ ಸೇರಿದಂತೆ ಹಲವರು ಇದ್ದರು.