ದಿವಂಗತ ನಟ ಉದಯಕುಮಾರ್ ಪತ್ನಿ ವಿಧಿವಶ

ಬೆಂಗಳೂರು, ೧೧ ಕನ್ನಡ ಚಲನಚಿತ್ರರಂಗದ ’ಕಲಾಕೇಸರಿ’ ಬಿರುದಾಂಕಿತ ನಟ ದಿವಂಗತ ಉದಯ ಕುಮಾರ್ ಅವರ ಪತ್ನಿ ಕಮಲಮ್ಮ ವಿಧಿವಶವರಾಗಿದ್ದಾರೆ. ಬೆಂಗಳೂರಿನ ಗ್ರಾಮಾಂತರ ಪ್ರದೇಶದ ಅನೇಕಲ್‌ನಲ್ಲಿ ಇಂದು ಬೆಳಗ್ಗೆ ಕಮಲಮ್ಮನವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ

ಪತಿ ಉದಯಕುಮಾರ್ ಅವರ ಬಹುಮಖ ಪ್ರತಿಭಯ ಪೋಷಣೆಯಲ್ಲಿ ಕಮಲಮ್ಮನವರ ಪಾತ್ರ ಮಹತ್ವದ್ದು ಎಂದು ಹೇಳಬಹುದಾಗಿದೆ ಕನ್ನಡ ಚಿತ್ರರಂಗದ ಮೂತ್ರಿ ತ್ರಯರಲ್ಲಿ ಒಬ್ಬರಾಗಿದ್ದ ನಟ ಉದಯ್ ಕುಮಾರ್ ಅವರು ೧೯೮೫ ಡಿಸೆಂಬರ್ ೨೬ರಂದು ಇಹಲೋಕ ತ್ಯಜಿಸಿದ್ದರು.