ಅಥಣಿ: ರಾಜ್ಯದ ಉಪ ಮುಖ್ಯಮಂತ್ರಿಗಳು ಲಕ್ಷ್ಮಣ ಸವದಿ ಅವರು ಅನರ್ಹ ಶಾಸಕ ಮಹೇಶ ಕುಮಠಳ್ಳಿ ಅವರ ಬಗ್ಗೆ ಮೊಬೈಲನಲ್ಲಿ ಮಾತನಾಡುವಾಗ ಅವ್ಯಾಚ್ಯ ಶಬ್ದಗಳನ್ನು ಬಳಿಸಿದ್ದಾರೆ ಎಂಬ ವಿಡಿಯೋ ಸಖತ್ ವೈರಲ್ ಆದ ಹಿನ್ನಲೆಯಲ್ಲಿ ರಮೇಶ ಜಾರಕಿಹೊಳಿ ಅವರು ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ ಕಾರ್ಯಕರ್ತರ ಸಮಾವೇಶದ ನಂತರ ಈ ವಿಷಯ ಕುರಿತು ಮಾತನಾಡುತ್ತಾ ಅವರು ಅವರು ಉಪ ಮುಖ್ಯ ಮಂತ್ರಿಗಳಾಗುವ ಪೂರ್ವದಲ್ಲಿ ಮಾತನಾಡಿದ ಅದಕ್ಕೆ ಅಷ್ಟೇನೂ ಮಹತ್ವ ನೀಡುವ ಅವಶ್ಯಕತೆ ಇಲ್ಲ. ಯಾವುದೋ ಕೆಲಸದ ಒತ್ತಡದಲ್ಲಿ ಮಾತನಾಡಿರಬಹುದು ಎಂದು ಹೇಳಿದರು.
ಈ ಕುರಿತು ಅನರ್ಹ ಶಾಸಕ ಮಹೇಶ ಕುಮಠಳ್ಳಿ ಅವರು ಮಾತನಾಡಿ, ಯಾವ ಸಂಧರ್ಬದಲ್ಲಿ ಎಲ್ಲಿ ಮಾತನಾಡಿದ್ದಾರೋ ಗೊತ್ತಿಲ್ಲ. ಅದರೆ ದೇವರು ಅವರಿಗೂ ಮತ್ತು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಗದ್ಗರಿತರಾಗಿ ಮಾತನಾಡಿದರು. ಅದರ ಬಗ್ಗೆ ಯಾರ ಮೇಲೂ ಯಾವುದೇ ಆಪಾದನೆ ಮಾಡುವದಿಲ್ಲ ಎಂದು ಹೇಳಿದರು.
ಉಪಮುಖ್ಯ ಮಂತ್ರಿಗಳಾದ ಲಕ್ಷ್ಮಣ ಸಂಗಪ್ಪ ಸವದಿ ಅವರು ನಾನು ಮಹೇಶ ಕುಮಠಳ್ಳಿ ಅವರ ಕುರಿತು ಮಾತನಾಡಿಲ್ಲ. ಬೇರೆ ಕುಮಠಳ್ಳಿ ಅವರ ಬಗ್ಗೆ ಮಾತನಾಡಿದ್ದೇನೆ. ಆದರೆ ಕೆಲವರು ಸ್ವಾರ್ಥಕ್ಕಾಗಿ ನನ್ನ ಮತ್ತು ಮಹೇಶ ಕುಮಠಳ್ಳಿ ಅವರ ನಡುವೆ ಜಗಳ ತರುವದಕ್ಕೆ ಹಾಗೂ ಸಧ್ಯದಲ್ಲಿ ಬಂದಿರುವ ಚುನಾವಣೆಯಲ್ಲಿ ಲಾಭವನ್ನು ಪಡೆಯಲು ಮಾಡಿರುವ ಹುನ್ನಾರ ಎಂದು ಅವರು ಸ್ಪಷ್ಟಪಡಿಸಿದರು.