ಕಾಗವಾಡ 03: ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ವಲಯದ ತಾಲೂಕಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾಥರ್ಿಗಳ ಕ್ರೀಡಾಕೂಟ ಜರುಗಿದವು. ಇದರಲ್ಲಿ ಸನ್ಮತಿ ವಿದ್ಯಾಲಯ ಶೇಡಬಾಳದ ಅಜಯ ಮುಜಾವರ, ಕುಮಾರ ಕೋಳಿ ಮತ್ತು ಮೋಳೆ ಸಿದ್ಧೇಶ್ವರ ಪ್ರೌಢಶಾಲೆಯ ಧನಶ್ರೀ ಯಾದವ ಇವರು ವೀರಾಗ್ರಣಿ ಪ್ರಶಸ್ತಿ ವಿಜೇತರಾದರು. ಇವರನ್ನು ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ವಲಯದ ದೈಹಿಕ ಶಿಕ್ಷಣಾಧಿಕಾರಿ ಸಿ.ಎಂ.ಸಾಂಗಲೆ ಪ್ರಶಸ್ತಿ ನೀಡಿ ಗೌರವಿಸಿದರು.
ಕಾಗವಾಡದ ವಿದ್ಯಾಸಾಗರ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ಕಳೆದ 2 ದಿನಗಳಿಂದ ತಾಲೂಕಾ ಮಟ್ಟದ ಕ್ರೀಡಾಕೂಟಗಳು ಜರುಗಿದವು. ಇದರ ಉದ್ಘಾಟನೆ ಶಾಸಕ ಶ್ರೀಮಂತ ಪಾಟೀಲ ನೆರವೇರಿಸಿದರು.
ಬಾಲಿಕೆಯರ: ಕ್ರೀಡಾಕೂಟದಲ್ಲಿ ತಂಡದ ಸಾಂಗಿಕ ಕಬ್ಬಡಿ ಆಟಗಳಲ್ಲಿ ಪ್ರಥಮಸಿದ್ಧೇಶ್ವರ ಪ್ರೌಢಶಾಲೆ ಶಿರಗುಪ್ಪಿ, ದ್ವೀತಿಯ ಕೆ.ಆರ್.ಇ.ಎಸ್. ಪ್ರೌಢಶಾಲೆ ಐನಾಪೂರ, ಖೋಖೋಪ್ರಥಮ ಲಕ್ಷ್ಮೀ ದೇವಿ ಪ್ರೌಢಶಾಲೆ ಕೃಷ್ಣಾ-ಕಿತ್ತುರ, ದ್ವೀತಿಯ ಸಿದ್ಧೇಶ್ವರ ಪ್ರೌಢಶಾಲೆ ಶಿರಗುಪ್ಪಿ, ಹಾಲಿಬಾಲ್ ಪ್ರಥಮ ಕುಂಜವನ ಪ್ರೌಢಶಾಲೆ ಕುಸನಾಳ, ದ್ವೀತಿಯ ಕೆ.ಆರ್.ಇ.ಎಸ್. ಪ್ರೌಢಶಾಲೆಲ ಐನಾಪೂರ, ಥ್ರೋಬಾಲ್ ಪ್ರಥಮ ಶಾಂತಿಸಾಗರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಐನಾಪುರ, ದ್ವೀತಿಯ ವಿದ್ಯಾಸಾಗರ ಪ್ರೌಢಶಾಲೆ ಕಾಗವಾಡ, ಫುಟ್ಬಾಲ್ ಮೋಳವಾಡ ಹೈಸ್ಕೂಲ್ ಮೋಳವಾಡ, ದ್ವೀತಿಯ ವಿದ್ಯಾಸಾಗರ ಪ್ರೌಢಶಾಲೆ ಕಾಗವಾಡ ತಂಡಗಳು ಯಶಸ್ವಿಯಾದವು.
ಬಾಲಕರ ವಿಭಾಗದಲ್ಲಿ: ಕಬ್ಬಡ್ಡಿಪ್ರಥಮ ಮಲ್ಲಿಕಾಜರ್ುನ ವಿದ್ಯಾಲಯ ಕಾಗವಾಡ, ದ್ವೀತಿಯ ಸನ್ಮತಿ ವಿದ್ಯಾಲಯ ಶೇಡಬಾಳ, ಖೋಖೋ ಪ್ರಥಮ ಜಿ.ಇ.ಟಿ. ಪ್ರೌಢಶಾಲೆ ಉಗಾರ ಬಿ.ಕೆ, ದ್ವೀತಿಯ ಕೆ.ಆರ್.ಇ.ಎಸ್. ಐನಾಪುರ, ಹಾಲಿಬಾಲ್ ಪ್ರಥಮ ಕೆ.ಆರ್.ಇ.ಎಸ್. ಐನಾಪುರ, ದ್ವೀತಿಯ ಪದ್ಮಾವತಿ ಶಿಕ್ಷಣ ಸಮಿತಿ ಉಗಾರ ಬಿ.ಕೆ, ಥ್ರೋಬಾಲ್ ಪ್ರಥಮ ಜೆ.ಇ.ಟಿ ಪ್ರೌಢಶಾಲೆ ಉಗಾರ ಬಿ.ಕೆ, ದ್ವೀತಿಯ ಕೆ.ಎಸ್.ಎಸ್. ಜುಗೂಳ, ಫೂಟ್ಬಾಲ್ ಪ್ರಥಮ ಶ್ರೀಹರಿ ವಿದ್ಯಾಲಯ ಉಗಾರ ಖುರ್ದ, ದ್ವೀತಿಯ ಮೋಳವಾಡ ಹೈಸ್ಕೂಲ್ ಮೋಳವಾಡ ಪ್ರಶಸ್ತಿ ಪಡೆದ ವಿದ್ಯಾಥರ್ಿಗಳಿಗೆ ಕಾಗವಾಡ ಬಿ.ಇ.ಒ ಎ.ಎಸ್.ಜೋಡಗೇರಿ, ದಹಿಕ ಶಿಕ್ಷಣಾಧಿಕಾರಿ ಸಿ.ಎಂ.ಸಾಂಗಲೆ ಆರ್.ಎಚ್.ಖಡಾಖಡಿ, ಮತ್ತು ಸ್ಪಧರ್ೆಗಳ ನಿಣರ್ಾಯಕರ ಉಪಸ್ಥಿತಿಯಲ್ಲಿ ಪ್ರಶಸ್ತಿ ನೀಡಿ ಗೌರವಿಸಿದರು.