ಲೋಕದರ್ಶನ ವರದಿ
ಬೆಳಗಾವಿ 27: ಭಾರತೀಯ ಜನತಾ ಪಾಟರ್ಿಯ ರಾಷ್ಟ್ರೀಯ ಅಧ್ಯಕ್ಷ ಅಮೀತ ಶಾ ಜೀ ಹಾಗೂ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ಕರೆಕೊಟ್ಟಂತಹ "ನಮ್ಮ ಪರಿವಾರ ಬಿಜೆಪಿ ಪರಿವಾರ" ಈ ಕಾರ್ಯಕ್ರಮದಡಿ ದಿ:26ರಂದು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಮೋದಗಾ ಹಾಗೂ ಖನಗಾಂವ ಗ್ರಾಮಗಳಲ್ಲಿ ಸಂಸದ ಸುರೇಶ ಅಂಗಡಿ ಹಾಗೂ ಮಾಜಿ ಶಾಸಕರಾದ ಸಂಜಯ ಪಾಟೀಲ ಇವರುಗಳ ನೇತ್ರತ್ವದಲ್ಲಿ "ಕಮಲ ಜ್ಯೋತಿ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಫಲಾನುಭವಿಗಳು ಪ್ರತಿ ಮನೆಗಳ ಮುಂದೆ ಸಾರಿಸಿ ರಂಗೋಲಿ ಹಾಕಿ ತಳಿರು ತೋರಣ ಕಟ್ಟಿ, ಜಿಜೆಪಿಯ ದ್ವಜವನ್ನು ಹಾರಿಸಿ ಒಳ್ಳಯೆ ಸಂಭ್ರಮದಿಂದ ವಾದ್ಯ ಮೇಳದೊಂದಿಗೆ ಮೆರವಣಿಗೆ ಮಾಡಿ ಒಂದು ಕಡೆ ಸೇರಿ ಕಮಲ ಜ್ಯೋತಿ ಯನ್ನು ಬೆಳಗಿಸಿ ಹರ್ಷವ್ಯಕ್ತಪಡಿಸಿದರು. ಮಾಜಿ ಶಾಸಕ ಸಂಜಯ ಪಾಟೀಲ ಇವರು ಈ ಸಂದರ್ಭದಲ್ಲಿ ಮಾತನಾಡುತ್ತಾ ಪ್ರಧಾನ ಮಂತ್ರಿಯವರನ್ನು ಮುಂಬರವು ಚುನಾವಣೆಯಲ್ಲಿ ಗೆಲ್ಲಿಸಿ ಇನ್ನೊಮ್ಮೆ ಪ್ರಧಾನ ಮಂತ್ರಿಯನ್ನಾಗಿ ಚುನಾಯಿಸಲು ಎಲ್ಲರೂ ಕಾರ್ಯಪ್ರವತ್ತರಾಗಬೇಕೆಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ನಿನ್ನೆ ನಡೆದಂತಹ ಭಾರತೀಯ ವಾಯುಸೇನೆಯು ಉಗ್ರರ ಅಡುಗುದಾಣಗಳನ್ನು ದ್ವಂಸಗೊಳಿಸಿ ಸುಮಾರು 300 ಕ್ಕೂ ಹೆಚ್ಚು ಉಗ್ರರನ್ನು ಸದೆಬಡೆದದ್ದಕ್ಕಾಗಿ ಪಟಾಕಿ ಸಿಡಿಸಿ, ಸಿಹಿ ಹಂಚುವುದರ ಮೂಲಕ ವಿಜಯೋತ್ಸವ ಆಚರಿಸಲಾಯಿತು.
ಮಹೇಶ ಮೋಹಿತೆ, ಯುವರಾಜ ಜಾಧವ, ಉಮೇಶ ಪುರಿ, ಭಾವು ಪಾಟೀಲ, ಶಂಕರ ಜತ್ರಾಟಿ, ರಾಜು ದೇಸಾಯಿ, ಮಲ್ಲಪ್ಪಾ ಕಾಂಬಳೆ, ಮಾರುತಿ ಜೋಗಾಣಿ, ವಿಲಾಸ ಖನಗಾಂವಕರ, ವಿಜಯ ಜಾಧವ, ರಾಜದೀಪ ಜಾಧವ, ಸಿದ್ದಯ್ಯಾ ಪೂಜೇರಿ, ವೀರಭದ್ರ ಪುಜೇರಿ, ಯಲ್ಲಪ್ಪಾ ಅಷ್ಟೇಕರ, ಸಂಜು ಅಷ್ಟೇಕರ, ರಾಹುಲ ಪಾಟೀಲ, ಅಭಯ ಅವಲಕ್ಕಿ, ಓಮಣ್ಣಾ ಅಷ್ಟೇಕರ, ಖೇಸರಖಾನ ಮುಲ್ಲಾ, ಬಾಬು ಕಾಳೆ, ಶಿವಾ ಅಷ್ಟೇಕರ, ರಾಮನಗೌಡ ಪಾಟೀಲ, ಸಂಜಯ ಅಷ್ಟೇಕರ, ವೀರಭದ್ರ ನೇಸರಗಿ, ಸಾಗರ ಶೇರೆಕರ, ಭಾರತೀಯ ಜನತಾ ಪಾಟರ್ಿಯ ಕಾರ್ಯಕರ್ತರು, ಗ್ರಾಮ ಪಂಚಾಯತ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.