ಗ್ರಾಮ ಪಂಚಾಯತ ನೌಕರರ ಜಿಲ್ಲಾ ಸಮ್ಮೇಳನ ಸಂಘಟಿತ ಹೋರಾಟದಿಂದ ಗೆಲವು ಸಾಧ್ಯ

. ಸಮ್ಮೇಳನ ಮುಂದಿನ ಮೂರು ವರ್ಷಗಳ ಅವದಿಗೆ ಪಧಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು

ಗ್ರಾಮ ಪಂಚಾಯತ ನೌಕರರ ಜಿಲ್ಲಾ ಸಮ್ಮೇಳನ ಸಂಘಟಿತ ಹೋರಾಟದಿಂದ ಗೆಲವು ಸಾಧ್ಯ 

ಧಾರವಾಡ 25 : ಯಾವುದೇ ಭ್ರಮೆ, ಅವೈಜ್ಞಾನಿಕ ಬೇಡಿಕೆಗಳಿಂದ ಯಶಸ್ಸು ಕಾಣಲು ಸಾಧ್ಯವಿಲ್ಲ. ಗ್ರಾಮ ಪಂಚಾಯತ ನೌಕರರು ಹತ್ತಾರು ವರ್ಷಗಳಿಂದ ನಡೆಸಿದ ಹೋರಾಟದಿಂದ ಹಲವು ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದರೋಂದಿಗೆ ಮಹತ್ವದ ಹಂತವನ್ನು ನಾವು ಸಾಧಿಸಿದ್ದೇವೆ. ಮುಂದಿನ ಹಂತಗಳು ಮಹತ್ವದ್ದು ಆಗಿವೆ. ಈ ಸಂದರ್ಭದಲ್ಲಿ ಒಗ್ಗಟ್ಟಿನ ಸಂಘಟಿತ ಹೋರಾಟವನ್ನು ನೌಕರರು ನಡೆಸಬೇಕಿದೆ. ನಮ್ಮ ಹಲವು ವರ್ಷಗಳ ಹೋರಾಟಕ್ಕೆ ತನ್ನೀರೆಚಲು ಕೆಲವು ಶಕ್ತಿಗಳು ಹುನ್ನಾರ ನಡೆಸಿವೆ. ಅವುಗಳಿಗೆ ಕಿವಿಗೊಡದೇ ನೌಕರರ ಹಿತಾಶಕ್ತಿ ಕಾಪಾಡಿಕೋಳ್ಳಲು ಎಲ್ಲರೂ ಒಂದಾಗಿ ಒಗ್ಗಟ್ಟು ಪ್ರದರ್ಶಿಸುವುದು ಅಗತ್ಯವಾಗಿದೆ. ಸಂಘಟನೆ ಹೋರಾಟದಿಂದ ಏನಾದರೂ ಸಾಧಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಎಂ.ಬಿ. ನಾಡಗೌಡ್ರ ಹೇಳಿದರು.ಇಂದು ಧಾರವಾಡದ ನಿವೃತ್ತ ನೌಕರರ ಭವನದಲ್ಲಿ ಗ್ರಾಮ ಪಂಚಾಯತ ನೌಕರರ ಧಾರವಾಡ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಹಲವು ಹಂತಗಳ ನಂತರ ಸರಕಾರಿ ನೌಕರರಾಗಲು ಮುಂದಾಗುತ್ತಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.ಮುಖ್ಯ ಅತಿಥಿಯಾಗಿ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ. ಗ್ರಾಮೀಣ ಪ್ರದೇಶದ ಆಡಳಿತ, ಜನರ ಬದುಕಿನ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರವಹಿಸುವ ಈ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸರಕಾರ ಮುಂದಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ನೌಕರರ ಹೋರಾಟವನ್ನು ಸರಕಾರ ಎದುರಿಸಬೇಕಾಗುತ್ತದೆ ಎಂದು ಸರಕಾರವನ್ನು ಎಚ್ಚರಿಸಿದರು.ಜಿಲ್ಲಾಧ್ಯಕ್ಷರಾದ ಬಿ.ಐ. ಈಳಿಗೇರ ಮಂಡಿಸಿದ ವರದಿ ಆಧಾರದಲ್ಲಿ ಚರ್ಚೆ ನಡೆಸಿದ ಸಮ್ಮೇಳನದ ವಿವಿದ ತಾಲೂಕಿನ ಪ್ರತಿನಿಧಿಗಳು ಮುಂದಿನ ಹೋರಾಟ ಕಾರ್ಯಕ್ರಮಗಳನ್ನು ಅಂತಿಮಗೋಳಿಸಿದರು. ಸಮ್ಮೇಳನ ಮುಂದಿನ ಮೂರು ವರ್ಷಗಳ ಅವದಿಗೆ ಪಧಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು.ನೂತನ ಪದಾಧಿಕಾರಿಗಳ ಆಯ್ಕೆ: ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘ (ಸಿಐಟಿಯು) ಧಾರವಾಡ ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಸಮ್ಮೇಳನ ಸರ್ವಾನುಮತದಿಂದ ಆಯ್ಕೆ ಮಾಡಿತುಗೌರವಾಧ್ಯಕ್ಷರಾಗಿ ಬಿ.ಐ.ಈಳಿಗೇರ, ಅಧ್ಯಕ್ಷರಾಗಿ ಚಂದ್ರಗೌಡ ಯಂಕನಗೌಡ್ರ, ಉಪಾಧ್ಯಕ್ಷರಾಗಿ ಗುರುನಾಥ ಹೂಗಾರ, ಚನ್ನಬಸಪ್ಪ ಹೆಬ್ಬಾಳ, ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ ಹುಲಗೋಡ ಕಾರ್ಯದರ್ಶಿಗಳಾಗಿ ಪರಶುರಾಮ ಪಾಟೀಲ, ಪದ್ಮರಾಜ ಚಂದಪ್ಪನವರ, ವೀರಭದ್ರಯ್ಯ ಬಣ್ಣದನೂಲಮಠ, ಖಜಾಂಚಿಯಾಗಿ ಈಶ್ವರ ಚಂದೂನವರ ಆಯ್ಕೆಯಾದರು.