ಗಂಗಾವತಿ:ಮತದಾರರು ಉತ್ಸುಕತೆಯಿಂದ ಮತ ಚಲಾಯಿಸಲು ಆಗಮಿಸಿದ್ದಾರೆ. ಇವರ ಹುಮ್ಮಸ್ಸು ನೋಡಿದರೆ ಬಿಜೆಪಿ ಗೆಲುವು ಖಚಿತ ಎಂದು ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ತಿಳಿಸಿದರು.
35 ವಾರ್ಡಗಳಿಗೆ ಶುಕ್ರವಾರ ನಡೆದ ನಗರಸಭೆ ಚುನಾವಣೆಯಲ್ಲಿ ಶಾಸಕರು 18ನೇ ನಂಬರಿನ ಮತಕೇಂದ್ರದಲ್ಲಿ ತಮ್ಮ ಮತ ಚಲಾಯಿಸಿ ಗೆಲುವಿನ ನಗೆ ಬೀರಿ ಮಾತನಾಡಿದರು. 35 ವಾರ್ಡಗಳಲ್ಲಿ ತಮ್ಮ ಪಕ್ಷ 25 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಇದೆ ಎಂದು ಹೇಳಿದರು.
ಇಕ್ಬಾಲ್ ಅನ್ಸಾರಿಯವರು ಶಾಸಕರಾಗಿದ್ದ ಸಂದರ್ಭದಲ್ಲಿ ನಗರಸಭೆ ಅವರ ಹಿಂಬಾಲಕರ ಹಿಡಿತದಲ್ಲಿತ್ತು. ಕೋಟಿ ಕೋಟಿ ಭ್ರಷ್ಟಾಚಾರ ನಡೆದಿದೆ. ಇದರಲ್ಲಿ ಶಾಸಕರಾಗಿದ್ದ ಅನ್ಸಾರಿಯವರು ಪಾಲುದಾರರಾಗಿದ್ದರು. ಮಹಿಳೆಯರ ಶೌಚಾಲಯಗಳನ್ನು ರಾತ್ರೋರಾತ್ರಿ ನೆಲಸಮ ಮಾಡಿ ಅವುಗಳನ್ನು ಮಾರಾಟ ಮಾಡಿರುವ ಉದಾಹರಣೆಗಳು ಸಾಕಷ್ಟಿವೆ.
ನಗರಸಭೆಯಲ್ಲಿ ನಡೆದ ಕರ್ಮಕಾಂಡ ಕುರಿತು ಗುಲ್ಬಾಗರ್ಾ ಪ್ರಾದೇಶಿಕ ಆಯುಕ್ತರು ಭ್ರಷ್ಟಾಚಾರ ಎಸಗಿರುವವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲು ಆದೇಶ ಹೊರಡಿಸಿದ್ದಾರೆ ಎಂದು ಹೇಳಿದರು.
ಈ ಭ್ರಷ್ಟಾಚಾರದಿಂದ ಮತದಾರ ತಮ್ಮ ಬಿಜೆಪಿ ಪಕ್ಷದ ಅಭ್ಯಥರ್ಿಗಳನ್ನು ಬೆಂಬಲಿಸಲು ನಿರ್ಧರಿಸಿದ್ದಾನೆ ಎಂದು ತಿಳಿಸಿದರು. ಬಿಜೆಪಿ ಮುಖಂಡ ಭಾವಕಟ್ಟಿ ಬಸವರಾಜ, ಅಕ್ಕಿ ಆನಂದ, ಅಕ್ಕಿ ಚಂದ್ರು ಇದ್ದರು.