ಐಕ್ಯತಾ ಹೋರಾಟಗಳು ತಾತ್ವಿಕವಾಗಿ ರಾಜೀ ಮಾಡಿಕೊಳ್ಳದಿದ್ದರೆ ಗೆಲುವು ಖಚಿತ; ರಾಜಶೇಖರ
ಕೊಪ್ಪಳ 24: ತಾವರಗೇರ ಬುದ್ಧ ವಿಹಾರದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ (ಯುವಪಡೆ) ನೇತೃತ್ವದಲ್ಲಿ ಜರುಗಿದ ಕೊಪ್ಪಳ ಜಿಲ್ಲಾ ಮಾಲಿನ್ಯಕಾರಿ ಕಾರ್ಖಾನೆ ಬಾಧಿತರ ಎರಡನೇ ದಿನದ ಪರಿಸರ ಜಾಗೃತಿ ಅಧ್ಯಯನ ಶಿಬಿರದ ’ಕಾರ್ಖಾನೆಗಳ ಬಾಧಿತ ಜನರ ಧ್ವನಿ’ ಈ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರೈತ ಸಂಘ (ಎ.ಐ.ಯು.ಕೆ.ಎಸ್) ರಾಜ್ಯ ಉಪಾಧ್ಯಕ್ಷರಾದ ಡಿ.ಎಚ್. ಪೂಜಾರ ಮಾತನಾಡಿ ಕೊಪ್ಪಳ ಜಿಲ್ಲೆಯ ಕಾರ್ಖಾನೆ ಬಾಧಿತರು ಎದುರಿಸುತ್ತಿರುವ ಸಮಸ್ಯೆ ರಾಜ್ಯದಾಧ್ಯಂತ, ರಾಷ್ಟ್ರದಾಧ್ಯಂತ ಗ್ರಾಮೀಣ ರೈತರು ಕೈಗಾರಿಕಾ ಅಭಿವೃದ್ಧಿ ಯೋಜನೆ ಹೆಸರಿನಲ್ಲಿ ಭೂ ವಂಚನೆಗೆ, ಕೃಷಿ ಬೆಳೆ ಹಾನಿಗೆ, ರೋಗಗಳ ಬಾಧನೆಗೆ ತುತ್ತಾಗಿದ್ದಾರೆ.ಎಲ್ಲಿ ರೈತರ ಹಿತವನ್ನು ಸರ್ಕಾರಗಳು ಕಾಪಾಡುವಲ್ಲಿ ವಿಫಲವಾಗಿವೆ ಅಲ್ಲಿ ಸರ್ಕಾರಗಳನ್ನು ಜನರು ಕಿತ್ತಾಕಿದ್ದಾರೆ. ಇದನ್ನು ಪಶ್ಚಿಮ ಬಂಗಾಳದ ಈ ಮಾದರಿಯನ್ನು ಇಟ್ಟು ಕೊಂಡು ಇಲ್ಲಿ ಹೋರಾಟ ಕಟ್ಟಬೇಕಾಗಿದೆ ಎಂದರು.
ವಿ.ಎನ್.ರಾಜಶೇಖರ ಅವರು ಮಾತನಾಡಿ ಐಕ್ಯತಾ ಹೋರಾಟಗಳು ತಾತ್ವಿಕವಾಗಿ ರಾಜೀ ಮಾಡಿಕೊಳ್ಳದಿದ್ದರೆ ಗೆಲುವು ಖಚಿತವಾಗಿ ದಕ್ಕುತ್ತದೆ. ಇಲ್ಲಿ ವೈಚಾರಿಕ ಭಿನ್ನಾಭಿಪ್ರಾಯಗಳಿದ್ದರೂ ಬಾಧಿತ ಜನರ ಹಿತಾಸಕ್ತಿಗಾಗಿ ಒಗ್ಗೂಡಿ ಕೆಲಸ ಮಾಡುವುದು ಅತ್ಯವಶ್ಯಕ ಎಂದರು. ಮತ್ತೊಂದು ಗೋಷ್ಠಿಯಲ್ಲಿ ವಿಷಯ ತಜ್ಞರಾದ ಧಾರವಾಡ ನಿವೃತ್ತ ಕೃಷಿ ವಿ.ವಿ. ಪ್ರಾಧ್ಯಾಪಕ ಡಾ. ರಾಜೇಂದ್ರ ಪೋತ್ದಾರ ಅವರು ಪರಿಸರ ಮಾಲಿನ್ಯಕಾರಿ ಕಾರ್ಖಾನೆಗಳ ಸುರಕ್ಷತೆ ಮತ್ತು ಉದ್ಯೋಗ ಸಾಧ್ಯತೆ ಎನ್ನುವ ವಿಷಯದಲ್ಲಿ ಮಾತನಾಡಿ ಕಾರ್ಖಾನೆಗಳು ಸಮುದಾಯ ಮುಖಿಯಾಗಿರಬೇಕು. ಜನರು ಜೀವದ, ಆರೋಗ್ಯ, ಕೃಷಿ, ಒಟ್ಟಾರೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಕಾರ್ಖಾನೆಗಳು ಬಂದ್ ಆಗಬೇಕೆಂದರು. ಶಿಬಿರದಲ್ಲಿ ಬಾಧಿತ ಹಿರೇಬಗನಾಳ, ಗಿಣಿಗೇರಿ, ಕುಣಿಕೇರಿ, ಇಂದಿರಾನಗರ, ಬೂದಗುಂಪಾ, ಹುಲಿಗಿ ಗ್ರಾಮಗಳ ಬಾಧಿತರು ತಮಗಾದ ಬಾಧನೆಯನ್ನು ತೋಡಿಕೊಂಡರು. ಈ ಆಂದೋಲನ ನಮ್ಮ ಸಮಸ್ಯೆಗೆ ಪರಿಹಾರ ಹುಡುಕಬೇಕು ಎಂದು ಮಾತನಾಡಿದರು.
ಮುಂದಿನ ಹೋರಾಟದ ರೂಪುರೇಷೆಗಳು ಎನ್ನುವ ಗೋಷ್ಠಿಯಲ್ಲಿ ಮಾನವ ಬಂಧುತ್ವ ವೇದಿಕೆಯ ಟಿ.ರತ್ನಾಕರ ಮಾತನಾಡಿ ನಮ್ಮ ಮಾ.ಬಂ.ವೇ.ಸಂಸ್ಥೆ ದಲಿತ, ಬಡವ, ಶೋಷಿತ, ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಬೆನ್ನೆಲುಬಾಗಿ ನಿಲ್ಲುತ್ತೇವೆ. ನಾನು ಯಾವಾಗಲೂ ಚಳುವಳಿ ಪರವಾಗಿ ಸಹಾಯಹಸ್ತ ಚಾಚಿ ನಡೆಯುತ್ತೇನೆ ಎಂದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷರಾದ ಹನುಮಂತಪ್ಪ ಹೊಳೆಯಾಚೆ ಇವರು ಮಾತನಾಡಿ ಕೊಪ್ಪಳದ ಕಾರ್ಖಾನೆಗಳು ರೈತರ ಕೃಷಿ, ಸಂಪೂರ್ಣ ಬದುಕು ಕಸಿದುಕೊಂಡಿವೆ. ನಾವು ಕಾಲಕಾಲಕ್ಕೆ ಹೋರಾಟಕ್ಕೆ ಧುಮುಕಿ ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ ಎಂದರು. ರೈತ ಸಂಘ ಯಾವಾಗಲೂ ಈ ಚಳವಳಿ ಜೊತೆಗೆ ನಿಲ್ಲುತ್ತದೆ ಎಂದರು. ಸಂಚಾಲಕ ಶರಣು ಗಡ್ಡಿ, ಗವಿಸಿದ್ದಪ್ಪ ವಿ. ಕುಣಿಕೇರಿ, ಕಾಶಪ್ಪ ಚಲವಾದದಿ, ತಿರುಪತಿ ಇಂದಿರಾನಗರ ಬಾಧಿತರಾಗಿ ಮತ್ತು ಚಳವಳಿ ಕಟ್ಟುವ ರೂಪುರೇಷೆಯ ಭಾಗವಾಗಿ ಮಾತನಾಡಿದರು. ಸಮಾರೋಪ ಗೋಷ್ಠಿಯಲ್ಲಿ ಲಡಾಯಿ ಪ್ರಕಾಶನದ ಬಸವರಾಜ ಸೂಳಿಬಾವಿ ಮಾತನಾಡಿದರು. ಸಮಾರೋಪದ ಅಧ್ಯಕ್ಷತೆಯನ್ನು ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರುವಹಿಸಿದ್ಧರು. ಕೊಜಿಬಆಂದೋಲನದ ಸಂಚಾಲಕ ಎಂಕೆ.ಸಾಹೇಬ್ವಂದನಾರೆ್ಣಯನ್ನು ಮಾಡಿದರು. ಆಂದೋಲನ ಅತೀ ಶೀಘ್ರದಲ್ಲಿ ಸಭೆ ಸೇರಿ ಮುಂದಿನ ಹೋರಾಟದ ರೂಪುರೇಷೆ ತಯಾರಿಸಿಕೊಳ್ಳಲು ತೀರ್ಮಾನ ಕೈಗೊಳ್ಳಲಾಗಿದೆ.ಶರಣುಶೆಟ್ಟರ್, ಶರಣುಪಾಟೀಲ, ಮುರುಗೇಶ್ ಬರಗೂರಇದ್ದರು.