ಅನರ್ಹ ಕುಟುಂಬಗಳ ತೆರವಿಗೆ ಆಗ್ರಹಿಸಿ ಸಂತ್ರಸ್ತರ ಪ್ರತಿಭಟನೆ

ಲೋಕದರ್ಶನ ವರದಿ

ರಾಯಬಾಗ: ತಾಲೂಕಿನ ಭಿರಡಿ ಗ್ರಾಮದಲ್ಲಿ 2005 ರಲ್ಲಿ ಸಂಭವಿಸಿದ ಕೃಷ್ಣಾ ನದಿ ಪ್ರವಾಹ ಪೀಡಿತ ಸಂತ್ರಸ್ತರಿಗೆ ನಿಮರ್ಿಸಿದ ಮನೆಗಳಲ್ಲಿ ಅನರ್ಹ ಕುಟುಂಬಗಳು ವಾಸ ಮಾಡುತ್ತಿದ್ದು, ಅವರನ್ನು ತೆರವುಗೊಳಿಸಿ ಅರ್ಹ ಫಲಾನುಭವಿಗಳಿಗೆ ನೀಡುವಂತೆ ಆಗ್ರಹಿಸಿ ಪ್ರವಾಹ ಸಂತ್ರಸ್ತರು ಸೋಮವಾರ ಗ್ರಾ.ಪಂ.ಕಚೇರಿಗೆ ಬೀಗ ಜಡಿದು, ಧರಣಿ ಕುಳಿತು ಪ್ರತಿಭಟನೆ ನಡೆಸಿದರು. 

ಭಿರಡಿ ಗ್ರಾಮದಲ್ಲಿ 2005 ರಲ್ಲಿ ಕೃಷ್ಣಾ ನದಿ ಪ್ರವಾಹದಿಂದ ಸಂತ್ರಸ್ತರಾದ 132 ಕುಟುಂಬಗಳಿಗೆ ಗ್ರಾಮದ ರಿ.ಸ.ನಂ.21 ರಲ್ಲಿ ಮನೆಗಳನ್ನು ನಿಮರ್ಿಸಲಾಗಿತ್ತು. ಆದರೆಗ್ರಾ.ಪಂ.ಯವರು ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸುವ ಮೊದಲೇ ಭಿರಡಿ ಮತ್ತು ಬೇರೆಗ್ರಾಮದಅನರ್ಹ ಕುಟುಂಬಗಳು ಅನಧಿಕೃತವಾಗಿ ಅಲ್ಲಿ ವಾಸ ಮಾಡುತ್ತಿದ್ದಾರೆಂದುಧರಣಿ ನಿರತ ಸಂತ್ರಸ್ತರು ಆರೋಪಿಸಿದರು. 

2019ರಲ್ಲಿ ಮತ್ತೇಗ್ರಾಮದಲ್ಲಿ ಪ್ರವಾಹ ಬಂದರೂಕೂಡ ಅಧಿಕಾರಿಗಳು ಅರ್ಹಅಧಿಕೃತ ಸಂತ್ರಸ್ತ ಫಲಾನುಭವಿಗಳಿಗೆ ಗ್ರಾಮ ಪಂಚಾಯತಿಯವರು ಮನೆಗಳನ್ನು ಹಸ್ತಾಂತರಿಸಿ, ಕಬ್ಜಾ ನೀಡಿರುವುದಿಲ್ಲ ಎಂದುಆಕ್ರೋಶ ವ್ಯಕ್ತಪಡಿಸಿದರು.

2005ರಲ್ಲಿ ಕೃಷ್ಣಾ ನದಿ ಪ್ರವಾಹ ಪೀಡಿತ 132 ಕುಟುಂಬಗಳಿಗೆ ತಾ.ಪಂ.ಯವರು ಮನೆಗಳನ್ನು ನಿಮರ್ಿಸಿ, ಗ್ರಾ.ಪಂ.ಯವರಿಗೆ ಹಸ್ತಾಂತರಿಸಿದ್ದಾರೆ. ಆದರೆಗ್ರಾ.ಪಂ.ಯವರು ಅನಧಿಕೃತವಾಗಿ ಅತೀಕ್ರಮಣ ಮಾಡಿ ವಾಸ ಮಾಡುತ್ತಿರುವವರನ್ನು ತೆರವುಗೊಳಿಸಿ, ಗ್ರಾಮದ ನಿಜವಾದ ನೆರೆ ಸಂತ್ರಸ್ತರಿಗೆ ನೀಡುತ್ತಿಲ್ಲವೆಂದು ಆರೋಪಿಸಿದರು. 

ಅರ್ಹ ನೆರೆ ಸಂತ್ರಸ್ತರಿಗೆ ನಿಮರ್ಿಸಿದ ಮನೆಗಳ ಕಬ್ಜಾ ನೀಡುವಂತೆ ಸಾಕಷ್ಟು ಬಾರಿ ತಹಶೀಲ್ದಾರ, ತಾ.ಪಂ. ಕಾರ್ಯನಿವರ್ಾಹಕಾಧಿಕಾರಿಗಳಿಗೆ ಮತ್ತುಗ್ರಾ.ಪಂ.ಯವರಿಗೆ ಮನವಿ ಮಾಡಿಕೊಂಡು, ನಮ್ಮ ಮನವಿಗೆ ಸ್ಪಂದಿಸದೇ ನಿರ್ಲಕ್ಷ ವಹಿಸುತ್ತಿದ್ದಾರೆ. ನಮ್ಮ ಬೇಡಿಕೆಈಡೇರುವವರೆಗೆಗ್ರಾ.ಪಂ.ಕಚೇರಿಗೆ ಬೀಗ ಜಡಿದುಧರಣಿ ಸತ್ಯಾಗ್ರಹ ನಡೆಸುವುದಾಗಿ ನೆರೆ ಸಂತ್ರಸ್ತರು ಎಚ್ಚರಿಸಿದರು. 

ವಿಷಯ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿದತಾ.ಪಂ.ಇಒ ಪ್ರಕಾಶ ವಡ್ಡರಅವರು ಡಿ.15 ಒಳಗೆ ತಹಶೀಲ್ದಾರ ಮತ್ತು ಸಂಬಂಧಿಸಿದ ಅಧಿಕಾರಿಗಳ ಸಭೆಯನ್ನುಕರೆದುತಮ್ಮ ಸಮಸ್ಯೆಯನ್ನು ಬಗೆಹರಿಸುವುದಾಗಿ ನೆರೆ ಸಂತ್ರಸ್ತರಿಗೆ ಭರವಸೆ ನೀಡಿದ ನಂತರಧರಣಿ ನಿರತ ನೆರೆ ಸಂತ್ರಸ್ತರುಧರಣಿಯನ್ನು ಹಿಂಪಡೆದರು. ಬೆಳಿಗ್ಗೆಯಿಂದ ಧರಣಿ ಕುಳಿತಿದ್ದ ಸಂತ್ರಸ್ತರು ಮಧ್ಯಾಹ್ನ ಗ್ರಾ.ಪಂ.ಹಳೆ ಕಚೇರಿ ಮುಂದೆಉಪಹಾರ ಮಾಡಿಕೊಂಡು ಸೇವಿಸಿದರು. 

ಪ್ರತಿಭಟನೆಯಲ್ಲಿ ಶಂಕರಗಡ್ಕರಿ, ಪಾಂಡು ಸಾವಂತ, ಅಶೋಕ ನಾವಿ, ಶಂಕರತೇಲಿ, ಸದಾಶಿವ ನಿಶಾಂದಾರ, ಹಸನ ಮುಲ್ಲಾ, ರಮಜಾನ ಮುಲ್ಲಾ, ನಿಂಗಪ್ಪದೇವಮುರೆ, ಲಕ್ಷ್ಮಣತೇಲಿ, ಲಕ್ಷ್ಮೀ ಬಸನಕೊಪ್ಪ, ಅಕ್ಷತಾ, ಅಕ್ಕಾತಾಯಿ ಹುಂಡೆಕರ, ಮಂಗಲ ಬುಸನಕೊಪ್ಪ ಸೇರಿದಂತೆಅನೇಕರು ಪಾಲ್ಗೊಂಡಿದ್ದರು.