ಬಳ್ಳಾರಿ 15:ಜ(15)ರಂದು ಕೋಮು ಸೌಹಾರ್ದತೆಯನ್ನು ಕಾಪಾಡುವ ಹಿನ್ನಲೆಯಲ್ಲಿ ಕಲ್ಬುರ್ಗಿಯಲ್ಲಿ ಕರ್ನಾಟಕ ಸೌಹಾರ್ದ ವೇದಿಕೆಯಿಂದ ವಿವಿಧ ಸಂಘಟನೆಗಳ ಸಹಕಾರದಿಂದ ಜ.19 ಕ್ಕೆ ಬಹುತ್ವ ಸಂಸ್ಕೃತಿ ಭಾರತೋತ್ಸವವನ್ನು ಹಮ್ಮಿಕೊಂಡಿದೆ.
ಇದರ ಹಿನ್ನಲೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಜಾಥಾಗಳ ಮೂಲಕ ತೆರಳಲಿದೆ. ಈ ಉತ್ಸವದ ಹಿನ್ನಲೆಯಲ್ಲಿ ಜ.17 ರಿಂದ ಮೂರು ದಿನಗಳ ಕಾಲ ಕೋಮು ದಳ್ಳುರಿಯ ಬಗ್ಗೆ ವಿಚಾರ ಮಂಥನ ನಡೆಯಲಿದೆಂದು ಹೈ ಕಾ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಸಿರಿಗೇರಿ ಪನ್ನರಾಜ್ ಹೇಳಿದ್ದಾರೆ.ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿದ ಅವರು. ಇದರ ಉದ್ದೇಶ ಸೌಹಾರ್ದ, ಸಹಬಾಳ್ವೆಯೇ ನಮ್ಮಗುರಿ ಸಂಘರ್ಷ ಅಲ್ಲ ಎಂಬುದನ್ನು ತೋರಿಸುವುದಾಗಿದೆ.ಕಲ್ಬುರ್ಗಿಯನ್ನು ಕೋಮುವಾದಿಗಳ ಅಡ್ಡೆ ಮಾಡಲು ಬಿಡುವುದಿಲ್ಲ ಎಂಬ ಎಚ್ಚರಿಕೆ ನೀಡಲು ಪ್ರಚೋದನೆ ಕಾರಣ ವಾಗುತ್ತಿರುವುದು ಧಾರ್ಮಿಕ ಮುಖಂಡರಲ್ಲದೆ ಜನಪ್ರತಿನಿಧಿಗಳಿಂದ ಆಗುತ್ತಿದೆ ಅಂತಹವರಿಗೂ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಅಂತಹ ಕಾರ್ಯ ಬಳ್ಳಾರಿಯಲ್ಲಿ ಹಮ್ಮಿಕೊಳ್ಳಲಿದೆ.ಉಗ್ರ ಹಿಂದುತ್ವವಾದಿಗಳು ಸಂಸ್ಕೃತಿ ಉತ್ಸವದ ನೆಪದಲ್ಲಿ ಏಕ ಸಂಸ್ಕೃತಿಯನ್ನು ಹೇರುತ್ತಾ ನಮ್ಮ ನಾಡಿನ ಭಾವೈಕ್ಯ ಪರಂಪರೆಯನ್ನು ಹಾಳು ಮಾಡಲು ಮುಂದಾಗುತ್ತಿದ್ದಾರೆ. ಇದಕ್ಕೆ ಉತ್ತರವೆಂಬಂತೆ ಕೆಲವು ಅಲ್ಪಸಂಖ್ಯಾತ ಮೂಲಭೂತವಾದಿಗಳು ಮತಾಂಧತೆಯಲ್ಲಿ ಮುಳುಗುತ್ತಿದ್ದಾರೆ. ಅತ್ಯಂತ ಅಪಾಯಕಾರಿ ಕೋಮು ಚಟುವಟಿಕೆಗಳು ಪ್ರಭುತ್ತ ಪ್ರೇರಿತ ಅಧಿಕಾರದ ಮೂಲಕ ನಡೆಯುತ್ತಿವೆ. ಈ ನಡೆಗಳು ನಮ್ಮ ಬದುಕನ್ನು ಇನ್ನಷ್ಟು ದುರ್ಬಲಗೊಳಿಸುತ್ತವೆ. ಈಗಾಗಲೇ ಬಡತನ, ಅಪೌಷ್ಟಿಕತೆ, ಅನಿಯಂತ್ರಿತ ವಲಸೆ, ನಿರುದ್ಯೋಗ, ಪ್ರಾದೇಶಿಕ ಅಸಮಾನತೆ, ಮೌಢಗಳಿಂದ ನಲುಗುತ್ತಿರುವ ಜನಸಮುದಾಯಗಳನ್ನು ಮತ್ತಷ್ಟು ಪ್ರಪಾತಕ್ಕೆ ತಳ್ಳುತ್ತಿವೆ. ಕೋಮುವಾದಿಗಳ ಆಕರ್ಷಕ ಮಾತುಗಳಿಗೆ ಮರುಳಾದ ನಮ್ಮ ಯುವಜನರು, ವಿಶೇಷವಾಗಿ ದಲಿತ, ಶೂದ್ರ ಮುಂತಾಗಿ ಹಿಂದುಳಿದ ಯುವಜನರು ಅವರು ತೋಡಿದ ಖೆಡ್ಡಾಗಳಿಗೆ ಬೀಳುತ್ತಿದ್ದಾರೆ.
ಧಾರ್ಮಿಕ ದ್ವೇಷಗಳಿಂದ ಕೋಮುದಂಗೆಗಳಲ್ಲಿ ನಿರತರಾಗಿ ಕೇಸು ಹಾಕಿಸಿಕೊಂಡು ಒದ್ದಾಡುತ್ತಿದ್ದಾರೆ. ಹಿಂದೂ ನಾವೆಲ್ಲ ಒಂದು ಎನ್ನುತ್ತ ದಲಿತಾದಿ ಶೂದ್ರ ಬಡಮಕ್ಕಳನ್ನು ಮತಾಂಧತೆಯಲ್ಲಿ ಕೆರಳಿಸಿ ಅವರೆಲ್ಲರನ್ನು ಕ್ರಿಮಿನಲ್‌ಗಳಾಗಿಸುತ್ತಿದ್ದಾರೆ. ನಮ್ಮ ತರುಣ ಪೀಳಿಗೆ ಕೋಮುದ್ವೇಷದ ದಳ್ಳುರಿಗೆ ಸಿಲುಕದಂತೆ ನೋಡಿಕೊಳ್ಳುವ ಜವಾಬ್ದಾರಿಯಿಂದ ಈ ಮೂರು ದಿನಗಳವರೆಗೆ ಕಲಬುರಗಿಯಲ್ಲಿ ರಾಜ್ಯ ಮಟ್ಟದ ಸೌಹಾರ್ದ ಸಮಾವೇಶ ಹಮ್ಮಿಕೊಂಡಿದೆಂದರು.ಜ. 17 ರಂದು ಸೌಹಾರ್ದ ಯಾತ್ರೆ ಕಲ್ಬುರ್ಗಿಯ ಶರಣಬಸವೇಶ್ವರ ದೇವಸ್ಥಾನದಿಂದ ಮಹಾತ್ಮ ಬಸವೇಶ್ವರ ಮತ್ತು ಬಾಬಾಸಾಹೇಬರ ಪುತ್ಥಳಿ ಮಾರ್ಗವಾಗಿ ಕ್ವಾಜಾ ಬಂದೇನವಾಜ್ ದರ್ಗಾದವರೆಗೆ "ನಮ್ಮ ನಡಿಗೆ ಶರಣ, ಸಂತ, ಸೂಫಿ ಪ್ರಜ್ಞೆಯೆಡೆಗೆ" ಘೋಷಣೆಯಡಿಯಲ್ಲಿ ವಾಹನ ಜಾಥಾ ನಡೆಯುತ್ತದೆ. ಜ.18 ರಂದು "ಭಾವೈಕ್ಯದ ಹೊನಲು: ಸಮನ್ವಯದ ಗಾಯನ ಗಮಲು" ಘೋಷಣೆಯಡಿ ದಿನವೀಡೀ ತತ್ವಪದ, ಸೂಫಿಪದ, ವಚನ ಗಾಯನ ಕಾರ್ಯಕ್ರಮ ನಡೆಯಲಿದೆ.ಜ.19 ರಂದು ದಿನವೀಡೀ "ಬಹುತ್ವ ಭಾರತದ ಜಾಗ್ರತ ಅಭಿಯಾನ" ನಾಡಿನೆಲ್ಲೆಡೆಯಿಂದ ಪರಮಪೂಜ್ಯರು, ಸರ್ವಧರ್ಮಗಳ ನೇತಾರರು, ವಿಚಾರವಾದಿಗಳು, ಸಾಮಾಜಿಕ ಕಾರ್ಯಕರ್ತರು, ಮಾನವಹಕ್ಕುಗಳ ಹೋರಾಟಗಾರರು, ಅಖಿಲ ಕರ್ನಾಟಕದ ದುಡಿಯುವ ಜನರು ಸಮಾವೇಶಗೊಂಡು ಸಮತೆ-ಮಮತೆಗಳ ಸಂದೇಶ ಸಾರಲಿದ್ದಾರೆ.ಜಾತಿ ಧರ್ಮ ವಿಲ್ಲದೆ ಎಲ್ಲಾ ರಾಜಕೀಯ ಪಕ್ಷಗಳು, ಸಾಹಿತಿಗಳು, ಪ್ರಗತಿಪರರು, ಬುದ್ದಿ ಜೀವಗಳು ಈ ಸಮಾವೇಶದಲ್ಲಿ ಸೇರಿ ಚಿತನೆ ನಡೆಸಲಿದೆ.ನಗರದ ಸಮಸ್ಯೆಗಳ ಬಗ್ಗೆಯೂ ಹೋರಾಟ ಮಾಡುವ ಪ್ರಕ್ರಿಯೆ ಮಾಡಲಿದೆಂದು ಜೆ.ಸತ್ಯಬಾಬು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ದಲಿತ ಮುಖಂಡರಾದ ಎ.ಮಾನಯ್ಯ, ನಿಷ್ಟಿರುದ್ರ್ಪ, ರಮೇಶ್ ಬುಜ್ಜಿ, ಜೆ.ವಿ.ಮಂಜುನಾಥ, ರಿಜ್ವಾನ್, ಬಿ.ಎಂ.ರಫಿ, ಗಂಗಣ್ಣ ಪತ್ತಾರ್, ವಿಜಯಕುಮಾರ್ ಸಂಗನಕಲ್ಲು ಮೊದಲಾದವರು ಉಪಸ್ಥಿತರಿದ್ದರು.