ಸಚಿವ ಸಂತೋಷ್ ಲಾಡ್ ಸಮಾಜ ಮುಖಿ ಕಾರ್ಯಕ್ಕೆ ಉಪಪಸಭಾಪತಿ ರುದ್ರ​‍್ಪ ಲಮಾಣಿ ಮೆಚ್ಚುಗೆ

Vice President Rudrapa Lamani appreciates Minister Santosh Lad for his social work

ಲೋಕದರ್ಶನ ವರದಿ 

ಸಚಿವ ಸಂತೋಷ್ ಲಾಡ್ ಸಮಾಜ ಮುಖಿ ಕಾರ್ಯಕ್ಕೆ ಉಪಪಸಭಾಪತಿ ರುದ್ರ​‍್ಪ ಲಮಾಣಿ ಮೆಚ್ಚುಗೆ 

ಹಾವೇರಿ 28: ಸಾಕಷ್ಟು ಸ್ಥಿತಿವಂತ ಕುಟುಂಬದಿಂದ ಬಂದಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಸದಾ ಶೋಷಿತರ, ನೊಂದು-ಬೆಂದವರ, ಬಡವರಪರವಾಗಿ ಅವರ ನೆರವಿಗೆ ನಿಲ್ಲುವ ಅವರ ಮಾನವೀಯ ಗುಣದಿಂದಾಗಿ ಅವರು ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ. ಲಾಡ ಅವರ ಸಮಾಜಮುಖಿ ಕಾರ್ಯಗಳು ಅಭಿನಂದನಾರ್ಹ ಎಂದು ವಿಧಾನಸಭೆಯ ಉಪಸಭಾಪತಿ ರುದ್ರ​‍್ಪ ಲಮಾಣಿ ಹೇಳಿದರು. 

  ಫೆ.27ರಂದು ಗುರುವಾರ ನಗರದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್‌ ವತಿಯಿಂದ ಸಚಿವ ಸಂತೋಷ್ ಲಾಡ್ ಅವರ 50 ನೇ ಹುಟ್ಟು ಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ ಅಪತ್‌ರಕ್ಷಕ ದಿನಾಚರಣೆಯಲ್ಲಿ ವಿವಿಧ ರಂಗದಲ್ಲಿನ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.   

ಸಚಿವ ಸಂತೋಷ್ ಲಾಡ್ ಅವರು ಓರಿಸ್ಸಾದ ರೈಲು ದುರಂತ, ಕೇರಳದ ಗುಡ್ಡ ಕುಸಿತ, ಕೇದಾರನಾಥದಲ್ಲಿ ಪ್ರವಾಹ ಸೇರಿದಂತೆ ಹಲವಾರು ಬಾರಿ ಅಪಘಾತ ನಡೆದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಾರ್ವಜನಿಕರ ನೆರವಿಗೆ ನಿಂತು ಸಾವಿರಾರು ಜನರ ರಕ್ಷಣೆ0ುನ್ನು ಮಾಡಿರುವುದು ನಿಜಕ್ಕೂ ಸಮಾಜ ಮೆಚ್ಚುವ ಕೆಲಸ ಎಂದು ಅವರು ಬಣ್ಣಿಸಿದರು.ತಾವು ಈ ಹಿಂದೆ ತಮ್ಮ ಊರು ಖಂಡೆರಾಯನಹಳ್ಳಿಯಲ್ಲಿ ಸಿದ್ದಾರೂಢರ ದೇವಸ್ಥಾನ ನಿರ್ಮಿಸಿ ಕಳಸಾರೋಹಣ ಸಂದರ್ಭ ಹೆಲಕಾಪ್ಟರ್ ಕಳಿಸಿ ಕಳಸಕ್ಕೆ ಪುಷ್ಟ ವೃಷ್ಟಿಗೆ ಸಂತೋಷ ಲಾಡ್ ಅವರು ನೆರವಾದ ಸಂದರ್ಭವನ್ನು ಉಪಸಭಾಪತಿಗಳು ಇದೇ ಸಂದರ್ಭದಲ್ಲಿ ಸ್ಮರಿಸಿದರು. 

  ಈ ಕಾರ್ಯಕ್ರಮದಲ್ಲಿ ಅನಾತಶವಗಳ ಅಂತ್ಯಕ್ರಿಯೆ ನೆರವೇರಿಸುವ ಅಬ್ದುಲ್‌ಖಾದರ್ ಧಾರವಾಡ, ಮಹಿಳ ಸಾಂತ್ವನಕೇಂದ್ರ ಪರಿಮಳ ಜೈನ್, ಪರಿಸರ ಕ್ಷೇತ್ರದ ಮಾಲತೇಶ ಅಂಗೂರ, ಸಮಾಜಸೇವೆಯ ಸಂಜಯ ಗಾಂಧಿ ಸಂಜೀವಣ್ಣನವ, ಪತ್ರಕರ್ತ ನಿಂಗಪ್ಪ ಚಾವಡಿ, ಮನೋಹರ ಹಾದಿಮನಿ, ಗುತ್ತೆಮ್ಮ ಸುಣಗಾರ, ಪ್ರಸನ್ ಹಿರೇಮಠ, ದುರಗಪ್ಪ ಕೆಂಗನಿಂಗಪ್ಪನವರ,ವಸಂತಮ್ಮ ಮುಚ್ಚಿಕ್ಕಪ್ಪನವರ, ನರೇಶ ಮಂತಟ್ಟಿ, ಪ್ರಕಾಶ ಬಣಕಾರ,ಉದಯ ಕರಿಯಮ್ಮನವರ,ಮಂಜುರೆಡ್ಡಿ ಮಾಗಡಿ,ಹನುಮಂತ ಬಮ್ಮಲಾಪುರ, ಸುಮಂಗಲ ಇಪ್ಪಿಕೊಪ್ಪ, ಹನುಮಂತ ತಳವಾರ, ಜಮೀರ ಜೀಗರಿ, ನೂರಹ್ಮದ ಕರ್ಜಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 

  ವೇದಿಕೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಎಫ್‌.ಎನ್‌.ಗಾಜಿಗೌಡ್ರ, ನ್ಯಾಯವಾದಿ ಎಮ್‌.ಎಮ್‌. ಮೈದೂರ,  ಎಸ್‌ಸಿ-ಎಸ್ಟಿ ದೌರ್ಜನ್ಯ ಸಮಿತಿಯ ಸದಸ್ಯ ರಮೇಶ ಆನವಟ್ಟಿ, ಅಂಜುಮನ್ ಅಧ್ಯಕ್ಷ ಇರ್ಫಾನ ಪಠಾಣ ಮತ್ತಿತರರು ಇದ್ದರು.  

  ಸಂಜೀವಿನಿ ಜೀವ ರಕ್ಷಕ ಟ್ರಸ್ಟ್‌ ಟ್ರಸ್ಟ್‌ ಜಿಲ್ಲಾ ಅಧ್ಯಕ್ಷ ಆನಂದ ಬೆಂಡಿಗೇರಿ ಪ್ರಸ್ಥಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಬೂದಗಟ್ಟಿ ನಿರೂಪಿಸಿದರು. ಸುರೇಶ ಹಳ್ಳಳ್ಳಿ ವಂದಿಸಿದರು.