ವಿಶ್ವ ಪರಂಪರೆ ದಿನದ ಅಂಗವಾಗಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಶುಭಾಶಯ

ನವದೆಹಲಿ, ಏಪ್ರಿಲ್‍ 18, ವಿಶ್ವ ಪರಂಪರೆ ದಿನದ ಅಂಗವಾಗಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಜನತೆಗೆ ಶುಭಾಶಯ ಕೋರಿದ್ದಾರೆ.ಪರಂಪರೆ ಮಾನವೀಯತೆ ವಿನಿಮಯದ ಸಂಪತ್ತು ಎಂಬ ಅಂಶವನ್ನು ಜನತೆ ನೆನಪಿನಲ್ಲಿಡಬೇಕು. ನಮ್ಮ ಪರಂಪರೆ, ಸಂಸ್ಕೃತಿ ಮತ್ತು ಅದ್ಭುತ ಗತಕಾಲಕ್ಕೆ ಸಾಕ್ಷಿಯಾಗಿರುವ ಎಲ್ಲಾ ಸ್ಮಾರಕಗಳನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ಬಲವಾದ ಸಂಕಲ್ಪ ಮಾಡಬೇಕೆಂದು ಕರೆ ನೀಡಿದ್ದಾರೆ.ಭಾರತದ ಶ್ರೀಮಂತ ಪರಂಪರೆ, ಸಂಪ್ರದಾಯಗಳು ಮತ್ತು  ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದಿರುವ ಉಪರಾಷ್ಟ್ರಪತಿಯವರು ಭಾರತದ ಶ್ರೇಷ್ಠ ಪರಂಪರೆಯ ಬಗ್ಗೆ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಲಾಕ್‌ಡೌನ್ ಅವಧಿಯನ್ನು ಯುವಕರು ಇದಕ್ಕಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.  1982 ರಲ್ಲಿ ಅಂತಾರಾಷ್ಟ್ರೀಯ ಸ್ಮಾರಕಗಳು ಮತ್ತು ತಾಣಗಳ ಮಂಡಳಿ (ಐಸಿಒಎಂಒಎಸ್) ಏಪ್ರಿಲ್ 18 ದಿನವನ್ನು ವಿಶ್ವ ಪರಂಪರೆ ದಿನವೆಂದು ಘೋಷಿಸಿತ್ತು. ಸಾಂಸ್ಕೃತಿಕ ಪರಂಪರೆ ಮತ್ತು ಸ್ಮಾರಕಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಸ್ಮಾರಕಗಳ ಸಂರಕ್ಷಣೆ ಉದ್ದೇಶದಿಂದ ಈ ದಿನವನ್ನು 1983 ರಲ್ಲಿ ಯುನೆಸ್ಕೋದ ಸಾಮಾನ್ಯ ಸಭೆ ಅಂಗೀಕರಿಸಿತ್ತು.