ಗದಗ 03: ಜನರು ಪಶುಗಳ ಆರೋಗ್ಯ ಸೇವೆಯನ್ನು ಮಾಡುವುದು ಸಮಾಜ ಸೇವೆಯನ್ನು ಮಾಡಿದಂತೆ ಎಂದು ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ರವರಾದ ಡಾ. ಆರ್. ನಾಗರಾಜ ತಿಳಿಸಿದರು.
ದಿ. 23ರಿಂದ 29ರವರೆಗೆ ಪಶುವೈದ್ಯಕೀಯ ಮಹಾವಿದ್ಯಾಲಯ, ಗದಗ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್) ಘಟಕದ ವತಿಯಿಂದ ಸ್ವಚ್ಛ ಗ್ರಾಮ ಆರೋಗ್ಯಕರ ಗ್ರಾಮ ಎಂಬ ಧ್ಯೇಯದಡಿಯಲ್ಲಿ ಗದಗ ತಾಲ್ಲೂಕಿನ ಸಂಭಾಪೂರ ಗ್ರಾಮದಲ್ಲಿ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಏಳು ದಿನಗಳ ವಾಷರ್ಿಕ ವಿಶೇಷ ಶಿಬಿರದ ಕಾರ್ಯಕ್ರಮದಲ್ಲಿ ಪಶು ಆರೋಗ್ಯ ಶಿಬಿರ, ವೈದ್ಯಕೀಯ ಶಿಬಿರ, ಗ್ರಾಮ ಸ್ವಚ್ಛತಾ, ರೈತರ ಜೊತೆಗೆ ಸಂವಾದ ಮತ್ತು ಸಸಿನೆಡುವ ಕಾರ್ಯಕ್ರಮದ ಜೊತೆಗೆ ಪ್ರತಿ ದಿನ ಸಂಜೆ 6-30 ಕ್ಕೆ ಮಹಾವಿದ್ಯಾಲಯದ ಉಪನ್ಯಾಸಕರಿಂದ ಉಪನ್ಯಾಸ ಮತ್ತು ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು.
ಮಹಾವಿದ್ಯಾಲಯದ ಸಹಾಯಕ ಪ್ರಾದ್ಯಾಪಕರಾದ ಡಾ. ಶಿವಕುಮಾರ ಕೆ. ರೆಡ್ಡರ್., ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ಡಾ. ಕೆ. ಬಿ ನಾಗನೂರು., ನಿವೃತ್ತ ಆರ್.ಟಿ.ಓ ಅಧಿಕಾರಿ ಎ. ಪಿ. ಕುರಹಟ್ಟಿ, ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ ಸುಭಾಷ್ ದೇವರೆಡ್ಡಿ ಬೆಳ್ಳಿಕೊಪ್ಪ ಹಾಗೂ ಪಶುವೈದ್ಯಕೀಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯೋಜಕರಾದ ಡಾ. ಸತೀಶ. ಚಂದ್ರ. ಬಿರಾದಾರ್, ವಿದ್ಯಾರ್ಥಿ -ವಿದ್ಯಾರ್ಥಿನಿಯರು ಮತ್ತು ಗ್ರಾಮಸ್ಥರು ಇದ್ದರು.