ವೀರೇಂದ್ರ ಹೆಗ್ಗಡೆಯವರು ರೈತ, ಕೂಲಿ ಕಾರ್ಮಿಕರ ಕಲ್ಯಾಣಕ್ಕಾಗಿಯೇ ಹುಟ್ಟಿದ ಮಹಾನ್ ವ್ಯಕ್ತಿ

ಲೋಕದರ್ಶನ ವರದಿ

ಶಿರಹಟ್ಟಿ 25: ಧರ್ಮಸ್ಥಳ ಧರ್ಮಧಿಕಾರಿ ವೀರೇಂದ್ರ ಹೆಗ್ಗಡೆಯವರು ಸಾಮಾನ್ಯ ಕೂಲಿಕಾರ್ಮಿಕರು, ರೈತರ ಬಗ್ಗೆ ಮತ್ತು ರೈತರ ಆಥರ್ಿಕ ಅಭಿವೃದ್ಧಿ ಬಗ್ಗೆ ಪ್ರತಿನಿತ್ಯ ಯೋಚನೆ ಮತ್ತು ಯೋಜನೆಗಳನ್ನು ಹಾಕಿಕೊಳ್ಳುವ ಮಹಾನ್ ವ್ಯಕ್ತಿಯಲ್ಲಿ ಒಬ್ಬರಾಗಿದ್ದಾರೆ ಎಂದು ಎಲ್.ಆಯ್.ಸಿ ಧಾರವಾಡ ವಿಭಾಗೀಯ ಹಿರಿಯ ಅಧಿಕಾರಿ ರವಿಕಿರಣ ಅವರು ಅಭಿಪ್ರಾಯ ಪಟ್ಟರು. 

ಅವರು ಬೆಳ್ಳಟ್ಟಿ ಗ್ರಾಮದಲ್ಲಿ ನಡೆದ ಮೈಕ್ರೋ ಬಜತ್ ಮರಣ ಸಾಂತ್ವನ ರೂ.1,50,000 ರೂಗಳ ಚೆಕ್ ವಿತರಿಸಿ ಮಾತನಾಡಿದರು. ವೀರೇಂದ್ರ ಹೆಗ್ಗಡೆಯವರು ಮೈಕ್ರೋಬಜತ್ಗಳ ಸಣ್ಣ ಪಾಲಿಸಿಗಳ ಮುಖಾಂತರ ಜನರ ಉಳಿತಾಯ ಮತ್ತು ಭದ್ರತೆಯ ಬಗ್ಗೆ ಯೋಜನೆಗಳನ್ನು ಹಾಕಿಕೊಳ್ಳುತ್ತಿವುದು ಇಡೀ ದೇಶದಲ್ಲಿಯೇ ಮಾದರಿ ಕೆಲಸವಾಗಿದೆ ಎಂದು ತಿಳಿಸಿದರು. 

ಯೋಜನಾಧಿಕಾರಿ ಶಿವಣ್ಣ ಎಸ್. ಮಾತನಾಡಿ ತಾಲೂಕಿನಲ್ಲಿ ಸುಮಾರು 1350 ಮೈಕ್ರೋಬಜತ್ ಪಾಲಿಸಿ ಮಾಡಿದ್ದು, ಒಂದು ಕೋಟಿ ನಾಲ್ಕು ಲಕ್ಷ ಉಳಿತಾಯವಾಗಿದೆ. ಕಡಿಮೆ ವಾರದ ಕಂತಿನಲ್ಲಿ ಮೈಕ್ರೋಬಜತ್ ಪಾಲಿಸಿಯನ್ನು ಮಾಡುತ್ತಿದ್ದು, ಪ್ರಸ್ತುತ 10 ಗ್ರಾಮಗಳನ್ನು ವಿಮಾ ಗ್ರಾಮಗಳನ್ನಾಗಿ ಗುರಿಯನ್ನು ಇಟ್ಟು ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ್ ಮಾತನಾಡಿ, ಬೆಳ್ಳಟ್ಟಿ ಗ್ರಾಮದಲ್ಲಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ದೇವಸ್ಥಾನದ ಅಭಿವೃದ್ಧಿಗಳಿಗೆ, ಕೆರೆ ಅಭಿವೃದ್ಧಿಗಳಿಗೆ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಳಿಗೆ 10 ವರ್ಷದಿಂದ ನೀಡಿರುವ ಸೇವೆ ಯೋಜನೆಯ ಮುಖಾಂತರ ನೀಡಿರುವ ಕೊಡುಗೆಗಳು ಅಪಾರವಾಗಿದೆ. ಧರ್ಮಸ್ಥಳದ ಧಮರ್ಾಧಿಕಾರಿಗಳು ಇಡೀ ದೇಶದ ಏಳಿಗೆಗೆ ಶ್ರಮಿಸುತ್ತಿರುವುದು ಎಲ್ಲಾ ಧರ್ಮಕ್ಷೇತ್ರಗಳಿಗೆ ಮಾದರಿಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಮನ್ವಯಾಧಿಕಾರಿಯಾದ ಶ್ರೀಧರ, ವಲಯದ ಮೇಲ್ವಿಚಾರಕ ಕಲ್ಲನಗೌಡ, ಜ್ಞಾನವಿಕಾಸ ಸಮನ್ವಯಾಧಿಕಾರಿ ಚಂದ್ರಕಲಾ, ಸೇವಾ ಪ್ರತಿನಿಧಿ ಲಕ್ಷ್ಮೀದೇವಿ ಭಾಗಿಯಾಗಿದ್ದರು. ಮೈಕ್ರೋಬಜತ್ ಪಾಲಿಸಿಯ ಬಗ್ಗೆ  ಮೈಕ್ರೋಬಜತ್ ಮ್ಯಾನೆಜರ್ ಮಂಗಳೂರಕರ ಅವರು ಸಮಗ್ರ ಮಾಹಿತಿ ನೀಡಿದರು. 

ಈ ಸಂದರ್ಭದಲ್ಲಿ 150 ಕ್ಕೂ ಹೆಚ್ಚು ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು