23 ರಂದು ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ

 ಲೋಕದರ್ಶನ ವರದಿ

ಗಂಗಾವತಿ 19: ದೇಶದಿಂದ ಬ್ರಿಟಿಷರನ್ನು ಒದ್ದೋಡಿಸಿದ ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮನವರ 195ನೇ ವಿಜಯೋತ್ಸವ ಮತ್ತು ಜಯಂತಿಯನ್ನು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದಿಂದ ಅದ್ದೂರಿಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಎಪಿಎಂಸಿ ನಿದರ್ೇಶಕ, ಪಂಚಮಸಾಲಿ ಸಮಾಜದ ಮುಖಂಡ ಮತ್ತು ಮಾಜಿ ಸಂಸದ ಶಿವರಾಮೇಗೌಡರ ಪುತ್ರ ಶಿವರಾಜಗೌಡ ತಿಳಿಸಿದರು.

                ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಅವರು ಮಾತನಾಡಿದರು. ಭಾರತ ದೇಶದ ಇತಿಹಾಸದಲ್ಲಿ ಮರೆಯಲಾಗದ ಮಾಣಿಕ್ಯ ನಮ್ಮ ಕಿತ್ತೂರು ಚೆನ್ನಮ್ಮ ಎಂದು ಹೇಳಲು ನಮ್ಮ ಸಮಾಜಕ್ಕೆ ಹೆಮ್ಮೆ ಎನ್ನಿಸುತ್ತದೆ ಎಂದು ಗೌಡರು ತಿಳಿಸಿದರು.

                ಜಯಂತಿಯಲ್ಲಿ ಶಾಸಕ ಪರಣ್ಣ ಮುನವಳ್ಳಿ, ಸಂಸದ ಸಂಗಣ್ಣ ಕರಡಿ, ಪಂಚಮಸಾಲಿ ಸಮಾಜದ ಪೀಠಾಧ್ಯಕ್ಷರು, ನಾಡಿನ ಗಣ್ಯರು ಪಾಲ್ಗೊಳ್ಳುವರು ಎಂದು ಹೇಳಿದರು. ಅಂದು ರಾಜ ಬೀದಿಗಳಲ್ಲಿ ವೀರಮಾತೆಯ ಭಾವಚಿತ್ರವನ್ನು ಮೆರವಣಿಗೆ ಮಾಡಲಾಗುವದು. ಸಂದರ್ಭದಲ್ಲಿ ಮಹಿಳೆಯವರು ಪೂರ್ಣಕುಂಭದೊಂದಿಗೆ ಪಾಲ್ಗೊಳ್ಳುವರು. ವೀರಗಾಸೆ, ಕರಡಿ ಮಜಲು, ನಂದಿ ಕೋಲು, ಡೊಳ್ಳು ಕುಣಿತ ಮತ್ತು ಸ್ಥಬ್ಧ ಚಿತ್ರಗಳ ತಂಡಗಳು ವಿಶೇಷವಾಗಿ ಪಾಲ್ಗೊಳ್ಳುವರು.

                ಆರಾಧ್ಯ ದೈವ ಚನ್ನಬಸವಸ್ವಾಮಿಗಳ ಮಠದಿಂದ ಆರಂಭಗೊಳ್ಳುವ ಮೆರವಣಿಗೆ ನೀಲಕಂಠೇಶ್ವರ ವೃತ್ತದಲ್ಲಿರುವ ಬಾಲಕಿಯರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊನೆಗೊಳ್ಳುತ್ತದೆ. ಸುಮಾರು 50 ಸಾವಿರ ಜನರು ಜಯಂತಿಯಲ್ಲಿ ಪಾಲ್ಗೊಳ್ಳುವರು

ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಪ್ರತಿಭಾವಂತ ವಿದ್ಯಾಥರ್ಿಗಳನ್ನು ಮತ್ತು ವಿಶೇಷ ಸಾಧನೆ ಮಾಡಿರುವ ಗಣ್ಯರನ್ನು ಸನ್ಮಾನಿಸಲಾಗುವದು. ನಂತರ ಅನ್ನ ಸಂತರ್ಪಣೆ ಇರುತ್ತದೆ ಎಂದು ಅವರು ತಿಳಿಸಿದರು. ಸಮಾಜದ ಮುಖಂಡರಾದ ಕಳಕನಗೌಡ, ಶಿವಾನಂದ ಮೇಟಿ, ಚನ್ನವೀರನಗೌಡ ಕೋರಿ, ಶರಣೇಗೌಡ ಮಾಲೀಪಾಟೀಲ್, ವಿನಯಪಾಟೀಲ್, .ಕೆ.ಮಹೇಶ ಮತ್ತು ರಾಮತ್ನಾಳ ಬಸವರಾಜ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಜಯಂತಿ ಕುರಿತು ಹೆಚ್ಚಿನ ಮಾಹಿತಿಗೆ ಮೊಬೈಲ್ ನಂ. 998219208, 9880931065, 9449689469,9986211991,9448173216. ಸಂಪಕರ್ಿಸಬಹುದು.