ಮಟಿಹಾಳದಲ್ಲಿ ಸೆ.19, 20ರಂದು ವೀರಲಿಂಗೇಶ್ವರ ಜಾತ್ರಾ ಮಹೋತ್ಸವ

ಮಟಿಹಾಳದಲ್ಲಿ ಸೆ.19, 20ರಂದು ವೀರಲಿಂಗೇಶ್ವರ ಜಾತ್ರಾ ಮಹೋತ್ಸವ  Veeralingeshwara Jatra Mahotsava in Matihal on September 19 and 20


ಕೊಲ್ಹಾರ ಸೆ.18: ತಾಲೂಕಿನ ಮಟಿಹಾಳ ಗ್ರಾಮದಲ್ಲಿ ಶ್ರೀ ವೀರಲಿಂಗೇಶ್ವರ ಜಾತ್ರಾ ಮಹೋತ್ಸವ ಸೆ.19 ಮತ್ತು 20ರಂದು ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.  

ಸೆ.19ರಂದು ಬೆಳಗ್ಗೆ 8ಕ್ಕೆ ಗಣಗೂರು, ನಾಗರಾಳ, ಚಿಕ್ಕಆಸಂಗಿ, ಅರಷಣಗಿ, ಬಾಳೂತಿ, ಕುರಬರದಿನ್ನಿ, ವಂದಾಲ, ಹಣಮಾಪುರ, ಕೂಡಗಿ ಹಾಗೂ ಗೋಳಸಂಗಿ ಗ್ರಾಮಗಳಿಂದ ವೀರಲಿಂಗೇಶ್ವರ ದೇವರ ಪಲ್ಲಕ್ಕಿಗಳು ಆಗಮಿಸಲಿವೆ. ಬೆಳಗ್ಗೆ 10ಕ್ಕೆ ಶ್ರೀ ಚಿಂಚಲಿ ಮಾಯಮ್ಮನ ಹಬ್ಬದ ಕಾರ್ಯಕ್ರಮ ನಡೆಯಲಿದೆ.  

ಅದೇ ದಿನ ಬೆಳಗ್ಗೆ 7ಕ್ಕೆ ಮನುಷ್ಯ ಎತ್ತು ಹಿಡಿದು ಓಡುವ ಸ್ಪರ್ಧೆ, ಸಂಜೆ 6ಕ್ಕೆ ಎರಡು ಹಳ್ಳಿಯ ಟಗರಿನ ಕಾಳಗ ಹಾಗೂ ರಾತ್ರಿ 7ಕ್ಕೆ ನಾಲ್ಕು ಹಳ್ಳಿಯ ಟಗರಿನ ಕಾಳಗ ನಡೆಯಲಿದೆ.  ಸೆ.20ರಂದು ಬೆಳಗ್ಗೆ 6.30ಕ್ಕೆ ರಂಗೋಲಿ ಸ್ಪರ್ಧೆ ಹಾಗೂ 8ಕ್ಕೆ ಗಂಗೇಶಿತಾಳ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ 2ಕ್ಕೆ ಒಂದು ಎತ್ತು ಎತ್ತುವ ಸ್ಪರ್ಧೆ ಮತ್ತು ಅಂಗಾರಣಿ ಕಲ್ಲು ಎತ್ತುವ ಸ್ಪರ್ಧೆ, ಮಧ್ಯಾಹ್ನ 3ಕ್ಕೆ ಜೋಡು ಎತ್ತಿನ ಗಾಡಿ ಹಾಗೂ ಗುಂಡು ಎತ್ತುವ ಸ್ಪರ್ಧೆಗಳು ನಡೆಯಲಿವೆ. ರಾತ್ರಿ 10ಕ್ಕೆ ಜಿದ್ದಾಜಿದ್ದಿನ ಪ್ರಸಿದ್ಧ ಡೊಳ್ಳಿನ ಪದಗಳ ಕಾರ್ಯಕ್ರಮ ಆಯೋಜಿಸಲಾಗಿದೆ.  

ಜಾತ್ರೆಯ ಅಂಗವಾಗಿ ಎರಡು ದಿನಗಳ ಕಾಲ ಅನ್ನಸಂತರೆ​‍್ಣ ಏರಿ​‍್ಡಸಲಾಗಿದೆ. ವಿವಿಧ ಜಿಲ್ಲೆಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವೀರಲಿಂಗೇಶ್ವರ ದೇವರ ದರ್ಶನ ಪಡೆದು ಜಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸದ್ಭಕ್ತ ದೈವ ಮಂಡಳಿ ಮನವಿ ಮಾಡಿದೆ.