ಲೋಕದರ್ಶನ ವರದಿ
ಕಾಗವಾಡ ಜುಲೈ 3: ಕಾಗವಾಡದ ಸುಪುತ್ರರು, ನಿವೃತ್ತ ನ್ಯಾಯಾಧೀಶ ಪ್ರಕಾಶ ಕಠಾರೆ ಗುರುವಾರ ರಾತ್ರಿ ನಿಧನ ಹೊಂದರು. ಇವರ ಅಂತ್ಯಸಂಸ್ಕಾರ ಶುಕ್ರವಾರ ಬೆಳಿಗ್ಗೆ ಕಾಗವಾಡದ ಸ್ಮಶಾನ ಭೂಮಿಯಲ್ಲಿ ಜರುಗಿತು.
ಅಂತ್ಯಸಂಸ್ಕಾರದಲ್ಲಿ ಅವರ ಸಹೋದರರಾದ ಖ್ಯಾತ ವೈದ್ಯರಾದ ಡಾ. ಪಿ.ಬಿ.ಮಗದುಮ್ಮ, ಸುಭಾಷ ಕಠಾರೆ, ಪತ್ನಿ, ಪುತ್ರರು, ಪುತ್ರಿಯರು, ಸೇರಿದಂತೆ ಅಪಾರ ಆಪ್ತರು ಪಾಲ್ಗೊಂಡಿದ್ದರು. ಮಾಜಿ ಇಂಧನ ಖಾತೆ ಸಚಿವ ವೀರಕುಮಾರ ಪಾಟೀಲ, ಜೈನ ಸಮಾಜದ ಮುಖಂಡರಾದ ಕಿರಣಕುಮಾರ ಪಾಟೀಲ ಭೇಟಿನೀಡಿ ಸಾಂತ್ವನ ಹೇಳಿದರು.