ಜಿಲ್ಲಾ ಟೇಕ್ವಾಂಡೋ ಸಂಸ್ಥೆಗೆ 'ಸಮಗ್ರ ವೀರಾಗ್ರಣಿ' ಪ್ರಶಸ್ತಿ

ಧಾರವಾಡ 22: ಬೆಂಗಳೂರಿನ ಎಲ್.ಆರ್ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಜ. 11 ಮತ್ತು 12ರಂದು ನಡೆದ 3ನೇ ಪ್ರೀನ್ಸ್ ಕಪ್ ಸೌತ್ ಜೋನ್ ಟೇಕ್ವಾಂಡೋ ಚಾಂಪಿಯನ್ಶಿಪ್ -2020ರಲ್ಲಿ ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ವಿದ್ಯಾರ್ಥಿ ಗಳು ಭಾಗವಹಿಸಿ ಉತ್ತಮ ಸಾಧನೆ ಗೈಯುವ ಮೂಲಕ 'ಸಮಗ್ರ ವೀರಾಗ್ರಣಿ' ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬಾಲಕೀಯರ ವಿಭಾಗದಲ್ಲಿ ಅದಿಥಿ ಕ್ಷಾತ್ರತೇಜ (ಪವನ ಆಂಗ್ಲ ಮಾಧ್ಯಮ ಶಾಲೆ) ಬಂಗಾರದ ಪದಕದೊಂದಿಗೆ 5000 (ಐದು ಸಾವಿರ) ನಗದು ಬಹುಮಾನದೊಂದಿಗೆ ಉತ್ತಮ ಮಹಿಳಾ ಆಟಗಾರ್ತಿ ಎಂದು ಬಿರುದು ಪಡೆದಿರುತ್ತಾಳೆ. 

ಬಾಲಕರ ವಿಭಾಗದಲ್ಲಿ ಪ್ರಸಾದ ಲಿಂಗನಗೌಡರ (ಸೆಂಟ್ ಜೋಸೆಫ್ ಶಾಲೆ) ಸ್ಪಾರಿಂಗ್ನಲ್ಲಿ ಬಂಗಾರದ ಪದಕ ಪುಮ್ಸೆಯಲ್ಲಿ ಕಂಚಿನ ಪದಕ, ಭಾಗ್ಯರಾಜ ಪ್ರತಾಪುರೆ (ಸೆಂಟ್ ಜೋಸೆಫ್ ಶಾಲೆ) ಸ್ಪಾರಿಂಗ್ನಲ್ಲಿ ಬೆಳ್ಳಿ ಪದಕ ಪುಮ್ಸೆಯಲ್ಲಿ ಕಂಚಿನ ಪದಕ, ಶ್ರೀಕಾಂತ ಗುಂಜಿಕರ್ (ಕೆ.ಪಿ.ಇ.ಎಸ್ ಶಾಲೆ) ಸ್ಪಾರಿಂಗ್ನಲ್ಲಿ ಬೆಳ್ಳಿ ಪದಕ ಪುಮ್ಸೆಯಲ್ಲಿ ಕಂಚಿನ ಪದಕ, ವಿಕಾಸ್ ಆರ್.ಮಳಲಿ ಸ್ಪಾರಿಂಗ್ನಲ್ಲಿ ಕಂಚಿನ ಪದಕ ಪುಮ್ಸೆಯಲ್ಲಿ ಕಂಚಿನ ಪದಕ, ವಿಶಾಲ ಎ. ದೊಡಮನಿ (ಧಾರವಾಡ ಇಂಟರ್ನ್ಯಾಷನಲ್ ಸ್ಕೂಲ) ಸ್ಪಾರಿಂಗ್ನಲ್ಲಿ ಬಂಗಾರದ ಪದಕ ಪುಮ್ಸೆಯಲ್ಲಿ ಬೆಳ್ಳಿ ಪದಕ, ಮಾಬುಸುಬಾನಿ ದೊಡ್ಡಮನಿ (ಧಾರವಾಡ ಇಂಟರ್ನ್ಯಾಷನಲ್ ಸ್ಕೂಲ) ಸ್ಪಾರಿಂಗ್ನಲ್ಲಿ ಬಂಗಾರದ ಪದಕ ಪುಮ್ಸೆಯಲ್ಲಿ ಕಂಚಿನ ಪದಕ, ಅಬ್ದುಲ್ ರಜಾಕ್ ತೊರಗಲ್ (ಧಾರವಾಡ ಇಂಟರ್ನ್ಯಾಷನಲ್ ಸ್ಕೂಲ) ಸ್ಪಾರಿಂಗ್ನಲ್ಲಿ ಬಂಗಾರದ ಪದಕ ಪುಮ್ಸೆಯಲ್ಲಿ ಕಂಚಿನ  ಪದಕ, ವಿನಾಯಕ ಟಿ. (ಧಾರವಾಡ ಇಂಟರ್ನ್ಯಾಷನಲ್ ಸ್ಕೂಲ) ಸ್ಪಾರಿಂಗ್ನಲ್ಲಿ ಬಂಗಾರದ ಪದಕ ಪುಮ್ಸೆಯಲ್ಲಿ ಕಂಚಿನ ಪದಕ, ಅಭಿಶೇಕ ಹಡಪದ (ಧಾರವಾಡ ಇಂಟರ್ನ್ಯಾಷನಲ್ ಸ್ಕೂಲ) ಸ್ಪಾರಿಂಗ್ನಲ್ಲಿ ಬಂಗಾರದ ಪದಕ ಪುಮ್ಸೆಯಲ್ಲಿ ಕಂಚಿನ ಪದಕ, ಶಾಹಿದ್ ಮುಲ್ಲಾ (ಧಾರವಾಡ ಇಂಟರ್ನ್ಯಾಷನಲ್ ಸ್ಕೂಲ) ಸ್ಪಾರಿಂಗ್ನಲ್ಲಿ ಬೆಳ್ಳಿ ಪದಕ ಪುಮ್ಸೆಯಲ್ಲಿ ಕಂಚಿನ ಪದಕ, ಆದಿತ್ಯಾ ಶೆತ್ವಾಲೆ (ಧಾರವಾಡ ಇಂಟರ್ನ್ಯಾಷನಲ್ ಸ್ಕೂಲ) ಸ್ಪಾರಿಂಗ್ನಲ್ಲಿ ಬೆಳ್ಳಿ ಪದಕ ಪುಮ್ಸೆಯಲ್ಲಿ ಕಂಚಿನ ಪದಕ, ಯಲ್ಲಪ್ಪ ಕಲ್ವಡ್ಡರ್ (ಧಾರವಾಡ ಇಂಟರ್ನ್ಯಾಷನಲ್ ಸ್ಕೂಲ) ಸ್ಪಾರಿಂಗ್ನಲ್ಲಿ ಕಂಚಿನ ಪದಕ ಪುಮ್ಸೆಯಲ್ಲಿ ಕಂಚಿನ ಪದಕ, ನಂದಿಶ್ ತೇಗೂರ (ಧಾರವಾಡ ಇಂಟರ್ನ್ಯಾಷನಲ್ ಸ್ಕೂಲ) ಸ್ಪಾರಿಂಗ್ನಲ್ಲಿ ಕಂಚಿನ ಪದಕ ಪುಮ್ಸೆಯಲ್ಲಿ ಕಂಚಿನ ಪದಕ, ಮಿಲನ ಎಸ್ ಭಟ್ (ಧಾರವಾಡ ಇಂಟರ್ನ್ಯಾಷನಲ್ ಸ್ಕೂಲ) ಸ್ಪಾರಿಂಗ್ನಲ್ಲಿ ಕಂಚಿನ ಪದಕ ಪುಮ್ಸೆಯಲ್ಲಿ ಕಂಚಿನ ಪದಕ ಪಡೆದಿರುತ್ತಾರೆ.

ಪುರುಷರ ವಿಭಾಗದಲ್ಲಿ ವಿಭಾಗದಲ್ಲಿ ಹೆಚ್ಚಿನ ಅಂಕ ಪಡೆದು ಸಮಗ್ರ ವಿರಾಗ್ರಣಿಯನ್ನು ಪಡೆದಿರುತ್ತಾರೆ. ಇವರೊಂದಿಗೆ ತಂಡದ ತರಬೇತುದಾರರಾಗಿ ಆನಂದ  ಕಿಟದಾಳ ಪ್ರಯಾಣಿಸಿದ್ದರು. 

ಸಾಧನೆಗೆ ಜಿಲ್ಲಾ  ಟೇಕ್ವಾಂಡೋ ಸಂಸ್ಥೆಯ ಅಧ್ಯಕ್ಷ ಆನಂದ ಕುಲಕರ್ಣಿ , ಜಿಲ್ಲಾ ಟೆಕ್ವಾಂಡೊ ಸಂಸ್ಥೆಯ ಹಿರಿಯ ತರಬೇತುದಾರ ಹಾಗೂ ಕಾರ್ಯದಶರ್ಿ ಅಂಜಲಿ ಪರಪ್ಪ, ರಾಷ್ಟ್ರೀಯ ತರಬೇತುದಾರ ಪರಪ್ಪ ಎಸ್. ಕೆ, ಜಿಲ್ಲಾ ಟೆಕ್ವಾಂಡೊ ಸಂಸ್ಥೆಯ ಸದಸ್ಯರುಗಳಾದ ಸತೀಶ ತೀಟೆ, ರವಿಂದ್ರ ಪಾಟೀಲ್, ಪೋಷಕರು ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.