ವೀಣಾ ಶಾಂತೇಶ್ವರ ಸಾಧನೆ ಪರಿಗಣಿಸಿ ಸಾಧನೆ
Veena Shanteshwar's achievement considering the achievement
ಲೋಕದರ್ಶನ ವರದಿ
ಧಾರವಾಡ 01: ಸುಶಿಕ್ಷಿತ ಪರಿಸರದಲ್ಲಿ ಹುಟ್ಟಿ ಬೆಳೆದ ವೀಣಾ ಅವರು ಬಾಲ್ಯದಿಂದಲೇ ಆಧುನಿಕ ಪ್ರಗತಿಪರ ವಿಚಾರಗಳಿಂದ ಪ್ರೇರಣೆ ಪಡೆದುಕೊಂಡವರು. ಇವರು ಶಿಕ್ಷಣ ತಜ್ಞರೂ ಹೌದು. ಕರ್ನಾಟಕ ಕಾಲೇಜಿನ ವಿದ್ಯಾರ್ಥಿಯಾಗಿ, ಅದೇ ಕಾಲೇಜಿನಲ್ಲಿ ಅಧ್ಯಾಪಕರಾಗಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿರುವರು. ಪ್ರಾಚಾರ್ಯರಾಗಿ ಕರ್ನಾಟಕ ಕಾಲೇಜನ್ನು ಉಚ್ಚಾಯ ಸ್ಥಿತಿಗೆ ತಂದರು. ಅನನ್ಯ ಲೇಖಕಿಯಾಗಿ ಡಾ. ವೀಣಾ ಶಾಂತೇಶ್ವರ ಅವರು ತಮ್ಮ ಪ್ರಖರ ವೈಚಾರಿಕತೆ ಮತ್ತು ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧದ ನಿಷ್ಠುರ ವಿಮರ್ಶೆಯ ಮೂಲಕ ಕಥೆ, ಕಾದಂಬರಿಗಳನ್ನು ರಚಿಸಿ ವಿಭಿನ್ನರೆನಿಸಿಕೊಂಡರು.
ಜನಪ್ರೀಯತೆಗೆ ಮಾರು ಹೋಗದೇ ಅನುಭವದ ಪ್ರಾಮಾಣಿಕತೆ, ಹೊಸದೃಷ್ಟಿಕೋನ, ಸಾಹಿತ್ಯದಲ್ಲಿ ವಿನೂತನ ತಾಂತ್ರಿಕತೆ, ಸ್ತ್ರೀವಾದಿ ಚಿಂತನೆ ಹಾಗೂ ಅಭಿವ್ಯಕ್ತಿಯಲ್ಲಿ ಸ್ಪೋಪಜ್ಞತೆ ಮರೆದ ಡಾ. ವೀಣಾ ಶಾಂತೇಶ್ವರ ಅವರು ಬಂಡಾಯದ ಧ್ವನಿಯನ್ನು ಮೊಳಗಿಸಿದವರು. ಕನ್ನಡದಲ್ಲಿ ಸ್ತ್ರೀ ವ್ಯಕ್ತಿತ್ವ ಮತ್ತು ಅಸ್ಮಿತೆಯನ್ನು ಶೋಧನಕ್ಕೊಳಪಡಿಸಿದ ಸಂಘರ್ಷಾತ್ಮಕ ವಿಧಾನವನ್ನು ಪ್ರಾರಂಭಿಸಿದ ಮೊದಲಿಗರಲ್ಲಿ ಅವರು ಒಬ್ಬರು.
ಇಂಥ ಲೇಖಕಿ ಒಳ್ಳೆಯ ಅಧ್ಯಾಪಕಿಯಾಗಿ ಹಾಗೂ ಸಮರ್ಥ ಆಡಳಿತಗಾರರಾಗಿ ಸೇವೆ ಸಲ್ಲಿಸಿರುವುದು ಗಮನಾರ್ಹ ಸಂಗತಿಯಾಗಿದೆ. ಪ್ರೊ. (ಡಾ) ವೀಣಾ ಶಾಂತೇಶ್ವರ ಅವರ ಈ ಸಾಹಿತ್ಯಿಕ ಸಾಧನೆಯನ್ನು ಪರಿಗಣಿಸಿ, ಅವರಿಗೆ ರೂ. 25,000/- ನಗದು ಪುರಸ್ಕಾರದೊಂದಿಗೆ 2026ನೆಯ ಸಾಲಿನ 'ಡಾ. ಗುರುಲಿಂಗ ಕಾಪಸೆ ಸಾಹಿತ್ಯ ಪ್ರಶಸ್ತಿ'ಯನ್ನು ದಿ. 2-4-2026 ರಂದು ನೀಡಿ ಗೌರವಿಸಲಾಗುತ್ತಿದೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 