ಕೊಪ್ಪಳದ ವರ್ಷಾ ಹಿರೇಮಠ ಇವರಿಗೆ ರಾಜ್ಯ ಪ್ರಶಸ್ತಿ ಪ್ರಧಾನ

ಕೊಪ್ಪಳದ ವರ್ಷಾ ಹಿರೇಮಠ ಇವರಿಗೆ ರಾಜ್ಯ ಪ್ರಶಸ್ತಿ ಪ್ರಧಾನ Varsha Hiremath of Koppal to be conferred with State Award

ಕೊಪ್ಪಳ 30:   ಆರೈಕೆದಾರರಾದ ವರ್ಷಾ ಹಿರೇಮಠ ಇವರಿಗೆ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬೆಂಗಳೂರಿನ ಬಾಲ ಭವನದಲ್ಲಿ ಬುಧವಾರ ಜರುಗಿದ ವಿಶ್ವ ಆರೈಕೆದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಉತ್ತಮ ಆರೈಕೆದಾರರು ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ವಿಕಲಚೇತನ ವ್ಯಕ್ತಿಗಳು/ ಮಕ್ಕಳನ್ನು ಆರೈಕೆ ಮಾಡುವ ಉತ್ತಮ ಆರೈಕೆದಾರರಿಗೆ ಅವರ ಸೇವೆಯನ್ನು ಗುರುತಿಸಿ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದ್ದು, ವರ್ಷಾ ಇವರು ಕಳೆದ 12 ವರ್ಷಗಳಿಂದ ತಮ್ಮ ಬುದ್ಧಿಮಾಂಧ್ಯ ಪತಿಯ ಆರೈಕೆ ಮಾಡುತ್ತಾ ಸ್ವಯಂ ಉದ್ಯೋಗದಲ್ಲಿ ತೊಡಗಿ ಜೀವನದ ಎಲ್ಲಾ ಸಂಕಷ್ಟಗಳನ್ನು ಮೆಟ್ಟಿ ನಿಂತು ಮಾದರಿ ಜೀವನವನ್ನು ಸಾಗಿಸುತ್ತಿದ್ದಾರೆ. ಅಲ್ಲದೇ ಕೊಪ್ಪಳದ ವಿಶ್ವಚೇತನ ಆರೈಕೆದಾರರ ಸಂಸ್ಥೆಯ ಅಧ್ಯಕ್ಷರಾಗಿ ವಿಕಲಚೇತನರ ಮತ್ತು ಆರೈಕೆದಾರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇವರ ಸಾಧನೆಗೆ ರಾಜ್ಯ ಪ್ರಶಸ್ತಿ ಗೌರವ ಲಭಿಸಿರುವುದಕ್ಕೆ ವಿವಿಧ ಸಂಘ-ಸಂಸ್ಥೆಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.