ಉಗ್ರ ಶಿಕ್ಷೆ ನೀಡಬೇಕು: ಗಡಿಪಾರು ಮಾಡಬೇಕು

ಉಗ್ರ ಶಿಕ್ಷೆ ನೀಡಬೇಕು: ಗಡಿಪಾರು ಮಾಡಬೇಕು  Severe punishment must be imposed; they must be deported


ಶಿಗ್ಗಾಂವಿ, ಆ.27: ಪಟ್ಟಣದ ಟೆಂಪೋ ಸ್ಟ್ಯಾಂಡ್ ಎದುರಿನ ಆಂಜನೇಯ ದೇವಸ್ಥಾನದ ಆವರಣದಲ್ಲಿ ಮೂತ್ರ ವಿಸರ್ಜನೆ ಮಾಡಿರುವ ಘಟನೆ ನಾಗರಿಕ ಸಮಾಜ ಒಪ್ಪುವಂತಹದ್ದಲ್ಲ. ಇದು ಕ್ಷಮಿಸಲಾರದ ಅಪರಾಧವಾಗಿದ್ದು, ತಪ್ಪಿತಸ್ಥ ಜಾಫರ್ ಎಂಬ ವ್ಯಕ್ತಿಗೆ ಕಠಿಣ ಶಿಕ್ಷೆ ವಿಧಿಸುವುದರ ಜೊತೆಗೆ ಗಡಿಪಾರು ಮಾಡಬೇಕು ಎಂದು ಮಂಜುನಾಥ್ ಮನ್ಮಠನವರ್ ಆಗ್ರಹಿಸಿದರು.  

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾಫರ್ ಎಂಬ ವ್ಯಕ್ತಿ ಮಾಡಿರುವ ಹೀನ ಕೃತ್ಯವನ್ನು ನಾಗರಿಕ ಸಮಾಜ ಸಂಪೂರ್ಣವಾಗಿ ಖಂಡಿಸಿದೆ. ಇದರ ವಿರುದ್ಧ ಪಟ್ಟಣದ ಅಂಗಡಿ-ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಪ್ರತಿಭಟನೆ ನಡೆಸಿರುವುದು ಜನರ ಆಕ್ರೋಶಕ್ಕೆ ಸಾಕ್ಷಿಯಾಗಿದೆ. ಇದನ್ನು ಯಾರೂ ಪರೀಕ್ಷಿಸುವ ಅಗತ್ಯವಿಲ್ಲ ಎಂದು ಹೇಳಿದರು.  

ಪಟ್ಟಣ ಹಾಗೂ ತಾಲೂಕಿನಲ್ಲಿ ಈ ರೀತಿಯ ಘಟನೆಗಳನ್ನು ಯಾವುದೇ ವ್ಯಕ್ತಿ ಅಥವಾ ಶಕ್ತಿ ನಡೆಸಿದರೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹ ಕೃತ್ಯಗಳು ಸೌಹಾರ್ದತೆಗೆ ಧಕ್ಕೆ ತರುವ ಜೊತೆಗೆ ಸಮಾಜಕ್ಕೆ ಅವಮಾನ ಉಂಟುಮಾಡುತ್ತವೆ. ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ, ಆರೋಪಿಯನ್ನು ಕಾನೂನಿನಡಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.  

ಕೆಲವು ಜನಪ್ರತಿನಿಧಿಗಳು ನೀಚ ಕೆಲಸ ಮಾಡಿದ ವ್ಯಕ್ತಿಗೆ ಮನೆಗಳ ಪಟ್ಟಾ ಕೊಡಿಸಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಇಂತಹ ರಾಜಕೀಯ ಹೇಳಿಕೆಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಮಂಜುನಾಥ್ ಮನವಿ ಮಾಡಿದರು.