ರಕ್ಷಾ ಬಂಧನ, ಪರಸ್ಪರ ಸ್ನೇಹ ಮತ್ತು ಸಹೋದರತ್ವದ ಪವಿತ್ರ ಭಾವನೆ ಮೂಡಿಸುತ್ತದೆ : ಯೋಗಿನಿ ಅಕ್ಕ
Raksha Bandhan fosters a sacred sense of mutual friendship and brotherhood: Yogini Akka
ಲೋಕದರ್ಶನ ವರದಿ
ಕೊಪ್ಪಳ 27: ರಕ್ಷಾ ಬಂಧನ ಹಬ್ಬ ಪರಸ್ಪರರಲ್ಲಿ ಸ್ನೇಹ ಸೌಹಾರ್ದತೆ ಸಹೋದರತ್ವದ ಪವಿತ್ರ ಭಾವನೆಯನ್ನು ಒಡಮೂಡಿಸುವ ಹಬ್ಬ ಎಂದು ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ಯೋಗಿನಿ ಅಕ್ಕ ತಿಳಿಸಿದರು, ಅವರು ನಗರದ ಹೊರವಲಯದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಪ್ರಜಾ ಪಿತಾ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ವತಿಯಿಂದ ಏರಿ್ಡಸಿದ ರಕ್ಷಾ ಬಂಧನ ಮತ್ತು ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು, ಮುಂದುವರೆದು ಕೈದಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ತಪ್ಪು ಮಾಡುವುದು ಮನುಷ್ಯನ ಸಹಜ ಗುಣ, ಆದರೆ ತಪ್ಪಿನ ಅರಿವನ್ನು ಮಾಡಿಕೊಂಡು ಸಕರಾತ್ಮಕ ಪರಿವರ್ತನೆಯನ್ನು ತಂದುಕೊಂಡಾಗ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದರು. ಮನುಷ್ಯನ ಮನಸ್ಸಿನಲ್ಲಿ ಏಳುವ ಕೆಟ್ಟ ವಿಚಾರಗಳು ಅವನಿಂದ ಕೆಟ್ಟ ಕರ್ಮಗಳನ್ನು ಮಾಡಿಸುತ್ತವೆ ಇದರ ಫಲವಾಗಿ ಮನುಷ್ಯ ಜೀವನದಲ್ಲಿ ದುಃಖ ಮತ್ತು ಅಶಾಂತಿಯನ್ನು ಅನುಭವಿಸುತ್ತಾನೆ ,ಶ್ರಾವಣ ಮಾಸ ವಿಷ ನಿವಾರಕ ಪರ್ವ ಅಂದರೆ ಒಳ್ಳೆಯ ವಿಚಾರಗಳನ್ನು ಶ್ರವಣ ಮಾಡುತ್ತಾ ಕೇಳುತ್ತಾ ಕೆಟ್ಟದ್ದನ್ನು ಹೊರ ಹಾಕುವುದು.
ನಮ್ಮ ವಿಚಾರಗಳು ಪರಿವರ್ತನೆ ಆದಾಗಲೇ ನಮ್ಮ ಆಚಾರ ವ್ಯವಹಾರ ವರ್ತನೆ ಪರಿವರ್ತನೆ ಯಾಗಲು ಸಾಧ್ಯ ಆದ್ದರಿಂದ ವಿಚಾರಗಳು ಸಕರಾತ್ಮಕ ಮಾಡಿಕೊಳ್ಳಲು ಆಧ್ಯಾತ್ಮ ವಿಚಾರಗಳನ್ನು ಹೆಚ್ಚು ಹೆಚ್ಚು ಕೇಳಬೇಕು ಒಳ್ಳೆಯ ವಿಚಾರಗಳನ್ನು ತುಂಬಿ ಕೊಳ್ಳಬೇಕು ಎಂದು ಕರೆ ನೀಡಿದರು ,ಹುಟ್ಟುತ್ತಲೇ ಯಾವ ವ್ಯಕ್ತಿಯೂ ಕೆಟ್ಟವನಲ್ಲ ಯಾವುದೋ ಸಂಗ ಪರಿಸ್ಥಿತಿಗೆ ವಶನಾಗಿ ತಪ್ಪು ಮಾಡುತ್ತಾನೆ ವಿಕಾರಗಳಿಗೆ ವಶನಾಗಿ ಪಾಪ ಮಾಡುತ್ತಾನೆ, ತಪ್ಪಿನ ಅರಿವೇ ನಿಜವಾದ ಶಿಕ್ಷೆ, ನಾವೆಲ್ಲ ಆತ್ಮಗಳು ಪರಮಾತ್ಮನ ಮಕ್ಕಳು ಭಗವಂತನ ನೆನಪಿನಲ್ಲಿದ್ದು ಶ್ರೇಷ್ಠ ಕಾರ್ಯವನ್ನು ಮಾಡುತ್ತಾ ಜೀವನದಲ್ಲಿ ಸತ್ಯವಾದ ನೆಮ್ಮದಿಯನ್ನ ಪಡೆಯೋಣ ಎಂದು ಪ್ರಜಾಪಿತ ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ಯೋಗಿನಿ ಅಕ್ಕನವರು ಅಭಿಪ್ರಾಯಪಟ್ಟರು,ಜಿಲ್ಲಾ ಕಾರಾಗೃಹದ ಅಧಿಕ್ಷಕರಾದ ಅಂಬರೀಶ್ ಪೂಜಾರ್ ಉಪಸ್ಥಿತರಿದ್ದರು . ಕೈದಿಗಳಿಗೆ ಮತ್ತು ಸಿಬ್ಬಂದಿಯವರಿಗೆ ಬ್ರಹ್ಮಕುಮಾರಿ ಯೋಗಿನಿ ಅಕ್ಕ ಮತ್ತು ಬ್ರಹ್ಮಕುಮಾರಿ ಸ್ನೇಹಕ್ಕನವರು ರಾಖಿ ಕಟ್ಟಿ ಸಿಹಿ ಹಂಚಿದರು . ಇದೇ ಸಂದರ್ಭದಲ್ಲಿ ನಶಾ ಮುಕ್ತ ಭಾರತ ಅಭಿಯಾನದ ಪ್ರತಿಜ್ಞಾವಿಧಿ ಭೋದಿಸಲಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 