ಗದಗ 22: ಗದಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಳಗಾನೂರ ಗ್ರಾಮದಲ್ಲಿ ರಿಲಾಯನ್ಸ್ ಫೌಂಡೇಶನ್ ಹಾಗೂ ಸ್ತ್ರೀ ಶಕ್ತಿ ಗುಂಪುಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಬಳಗಾನೂರ ಗ್ರಾಮ ಪಂಚಾಯತ್ ಸಂಯುಕ್ತ ಅಶ್ರಯದಲ್ಲಿ ದಿ. 17ರಂದು ಶನಿವಾರ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಬೆಳಿಗ್ಗೆ ರಿಲಾಯನ್ಸ್ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೀಜ ನೆಡುವ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕತರ್ೆಯರು ಮತ್ತು ಆಶಾ ಕಾರ್ಯಕತರ್ೆಯರು ಸ್ತ್ರೀ ಶಕ್ತಿ ಗುಂಪಿನ ಮಹಿಳೆಯರಿಗೆ ಪ್ರಾತ್ಯಕ್ಷತೆ ಏರ್ಪಡಿಸಲಾಗಿತ್ತು. ನಂತರ ಮಕ್ಕಳ ದಿನಾಚರಣೆ ಅಂಗವಾಗಿ ಒಟ್ಟಾಗಿ 29 ಅಂಗನವಾಡಿ ಕೇಂದ್ರಗಳ ಮಕ್ಕಳಿಗಾಗಿ ವಿವಿದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಕ್ಕಳೆಲ್ಲರೂ ವಿವಿಧ ಮಹನೀಯರ ವೇಷ ಭೂಷಣ ತೊಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ಮಾಜಿ ಪ್ರಧಾನಿ ನೆಹರೂಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗಿತ್ತು. ಇದೇ ವೇಳೆ ಮಕ್ಕಳ ಹುಟ್ಟು ಹಬ್ಬದ ಆಚರಣೆ ಹಾಗೂ ಗಭರ್ಿಣಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಸಲಾಯಿತು. ಮತ್ತು ಸ್ತ್ರೀ ಶಕ್ತಿ ಮಹಿಳೆಯರಿಗೆ ಹಾಗೂ ಕಿಶೋರಿಯರಿಗೆ ರಂಗೋಲಿ ಸ್ಪಧರ್ೆ, ಮ್ಯೂಜಿಕಲ್ ಚೇರ್ ಸ್ಪಧರ್ೆ ಏರ್ಪಡಿಸಲಾಗಿತ್ತು. ಅನೇಕ ಮನರಂಜನಾ ಕ್ರೀಡೆಗಳು ಜರುಗಿದವು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿಗಳು ಅಕ್ಕಮಹಾದೇವಿ, ಶಿಶು ಅಭಿವೃದ್ಧಿ ಯೋಜನಾದಿಕಾರಿಗಳು ಮೃತ್ಯುಂಜಯ ಗುಡ್ಡದಾನ್ವೇರಿ, ಮೇಲ್ವಿಚಾರಕಿ ಭುವನೇಶ್ವರಿ ಕುಂಬಾರ, ಗ್ರಾ. ಪಂ. ಅಧ್ಯಕ್ಷರಾದ ರೇಖಾ ದೊಡ್ಡಮನಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಶ್ವನಿ ಕುರಡಗಿ, ಪಂಚಾಯತ್ ಕಾರ್ಯದಶರ್ಿ ಡಿ.ಸಿ. ಬಿಳಿಬಾಳೆ, ಪಂಚಾಯತ್ ಸರ್ವ ಸಿಬ್ಬಂದಿ ಹಾಗೂ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಪ್ರಧಾನ ಗುರುಗಳು ಹಾದಿಮನಿ, ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಗ್ರಾಮಸ್ಥರು ಪಾಲ್ಗೊಂಡಿದ್ದರು.