ಲೋಕದರ್ಶನ ವರದಿ
ಬೆಳಗಾವಿ, 29: ಸನಾತನ ಧರ್ಮ ರಕ್ಷಣೆಯ ಸಲುವಾಗಿ ಶೃಂಗೇರಿಯ ಶಾರದ ಪೀಠವು ಹೆಮ್ಮಕೊಂಡಿರುವ ವಿಜಯಯಾತ್ರೆಯ ನಿಮಿತ್ತ ದಿನಾಂಕ 29 ಗುರುವಾರದಂದು ಭಾಗ್ಯ ನಗರದ ಸಿಟಿಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಿಗ್ಗೆ 8 ಘಂಟೆಗೆ ಶ್ರೀಮಠದ ಅರ್ಚಕರಿಂದ ಶಾರದಾಚಂದ್ರಮೌಳೀಶ್ವರ ಪೊಜೆ, ಬೆಳಿಗ್ಗೆ 10 ಘಂಟೆಯಿಂದ ಮಹಾಸ್ವಮಿಗಳವರ ದರ್ಶನ, ಪಾದುಕಪೊಜೆ, ಭಿಕ್ಷಾವಂದನೆ ಇತ್ಯಾದಿ ಗುರುಸೇವೆಗಳು ನಡೆಯಿತು.
ಸಂಜೆ ಭಾಗ್ಯನಗರದ ರಾಮನಾಥ ಮಂಗಲ ಕಾಯರ್ಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಗಾವಿ ಮಹಾ ಜನತೆ ಪರವಾಗಿ ಗುರುಗಳವರಿಗೆ ಅಭಿನಂದನ ಪತ್ರ, ಗುರುಕಾಣಿಕೆ ಹಾಗು ಫಲಪುಷ್ಪ ಸಮರ್ಪಣೆ, ಶ್ರೀ ಶಂಕರ ತತ್ವ ಪ್ರಸಾರ ಅಭಿಯಾನ ಸಮಿತಿಯಿಂದ ಉಪನ್ಯಾಸ, ಕೃತಜ್ಞತಾ ಸಮರ್ಪಣೆ ಹಾಗು ಗುರುಗಳಿಂದ ಆಶರ್ಿವಚನ, ಪ್ರಸಾದ ವಿತರಣೆ
ನಡೆಯಿತು.