ಲೋಕದರ್ಶನ ವರದಿ
ಶಿರಹಟ್ಟಿ 10: ಪಟ್ಟಣದ ಜ್ಞಾನಜೋತಿ ನವೋದಯ ಕೋಚಿಂಗ ಸೆಂಟರ್ ಮತ್ತು ನಂದಗೋಕುಲ ಪೂರ್ವಪ್ರಾಥಮಿಕ ಶಾಲೆ ಇವರ ಸಂಯುಕ್ತಾಶ್ರಯದಲ್ಲಿ ಗಜಾನೋತ್ಸವದ ನಿಮಿತ್ಯ ಶಾಲಾ ಮಕ್ಕಳು ಮತ್ತು ಪಾಲಕರಿಂದ ವಿವಿಧ ಬಗೆಯ ಭಕ್ತಿಸುಧೇಯ ಕಾರ್ಯಕ್ರಮಗಳು ಜರುಗಿದವು.
ಗಣೇಶ ಹಬ್ಬದ ಆಚರಣೆಯು ಜಾತಿ ಭೇದವನ್ನು ಮಿರಿದ ಆಚರಣೆಯಾಗಿದೆ. ಶಾಂತಿ ನೆಮ್ಮದಿಯಿಂದ ಮತ್ತು ಸಹೋಧರ ಮನೋಭಾವನೆಯಿಂದ ನಾವೇಲ್ಲ ಸೇರಿ ಹಬ್ಬಗಳನ್ನು ಆಚರಿಸಬೇಕು. ಒಂದು ಕಾಲದಲ್ಲಿ ಸ್ವಾತಂತ್ರ ಹೋರಾಟಕ್ಕಾಗಿ ಜನರೆನ್ನೆಲ್ಲ ಒಂದೆಡೆ ಸೇರುವಂತೆ ಮಾಡಿ ತಮ್ಮ ವಿಚಾರ ಧಾರೆಗಳನ್ನು ಹಂಚಿಕೊಳ್ಳಲು ಅಂದಿನ ಹಿರಿಯರು ಪ್ರಾರಂಭಿಸಿದ ಸಾರ್ವಜನಿಕ ಗಣೇಶೋತ್ಸವ ಇಂದು ತನ್ನ ದಿಕ್ಕನ್ನೆ ಬದಲಿಸಿದಂತೆ ಕಾಣುತ್ತಿದೆ. ಕಾರಣ ಇಂದಿನ ಯುವ ಪೀಳಿಗೆಗೆ ಇಂತಹ ವಿಚಾರಗಳನ್ನು ತಿಳಿ ಹೇಳುವುದು ಅತ್ಯವಶ್ಯವಾಗಿದೆ ಎಂದು ಹಿರಿಯರಾದ ಪ್ರಕಾಶ ನರಗುಂದೆ ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಗಾಯತ್ರಿ ಮಹಿಳಾ ಮಂಡಳದಿಂದ ಲಕ್ಷ್ಮಿ ಶೋಭಾನೆ ಹಾಡಲಾಯಿತು. ಪ್ರೋ. ವಿಶಾಲಾಕ್ಷಿ ದೇಶಪಾಂಡೆ, ಪರಿಮಳಾ ಕುಬೇರ, ರಾಜೇಶ್ವರಿ ಕುಲಕಣರ್ಿ, ಸಂಗೀತಾ ಪದಕಿ, ಪ್ರೀಯಾ ಉಮರ್ಜಿ, ವಿನುತಾ ನರಗುಂದೆ, ಭಾತಖಂಡೆ, ಸುಜಾತಾ ಜಮಖಂಡಿ, ರವಿ ಬೇಂದ್ರೆ, ಸಂಗಮೇಶ ಮಡಿವಾಳರ, ಮುಂತಾದವರು ಉಪಸ್ಥಿತರಿದ್ದರು. ರಾಜೇಶ್ವರಿ ಬೇಂದ್ರೆ ನಿರೂಪಿಸಿದರು.