ಬಾಗಲಕೋಟೆ: ಕಾರ್ಮಿಕರು ಮತ್ತು ದುಡಿಯುವ ಜನರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಕರೆಯ ಮೇರೆಗೆ ಬಾಗಲಕೋಟೆ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಎಐಯುಟಿಯುಸಿ ನೇತೃತ್ವದಲ್ಲಿ ಬುಧವಾರ ಪ್ರತಿಭಟಿನೆ ನಡೆಸಲಾಯಿತು.
ಮೆರವಣಿಗೆಯ ಮೂಲಕ ಜಿಲ್ಲಾಡಳಿತಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿಯವರಿಗೆ ಮನವಿ ಪತ್ರ ಸಲ್ಲಿಸಿ ನಂತರ ಪ್ರತಿಭಟಣೆ ಉದ್ದೇಶಿಸಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಮಾತನಾಡುತ್ತಾ ಕಾರ್ಮಿಕ ಕಾಯ್ದೆಗಳನ್ನು ಮಾಲಿಕರ ಪರವಾಗಿ ಬದಲಿಸಲಾಗುತ್ತಿದೆ.ಕಾಯ್ದೆಗಳನ್ನು ಸಂಹಿತೆಗಳನ್ನಾಗಿ ಬದಲಿಸಲಾಗುತ್ತಿದೆ. ನಿಧರ್ಿಷ್ಠ ಅವಧಿಗೆ ಮಾತ್ರ ಕಾರ್ಮಿಕರನ್ನು ನೇಮಿಸಿಕೊಳ್ಳುವ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ. ರೈಲ್ವೆ, ಗಣಿ, ರಕ್ಷಣೆ, ಕಲ್ಲಿದ್ದಲು ಸೇರಿದಂತೆ ಸಾರ್ವಜನಿಕ ಉದ್ದಿಮೆಗಳಲ್ಲಿ ಶೇ.100% ವಿದೇಶಿ ಬಂಡವಾಳಕ್ಕೆ ಅವಕಾಶ ಮಾಡಿಕೊಟ್ಟು ಖಾಸಗೀಕರಣಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.
ಆಶಾ ಸಂಘಟನೆ ಮುಖಂಡರಾದ ಅಂಜನಾ ಕುಂಬಾರ ಮಾತನಾಡಿ ಗ್ರಾಮೀಣ ಬಡವರು ಮತ್ತು ಕೃಷಿಕೂಲಿಕಾರರು ಉದ್ಯೋಗಗಳನ್ನು ಹುಡುಕಿಕೊಂಡು ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ನಗರದ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ದುಡಿಯುವ ಜನರ ಪರಿಸ್ಥಿತಿಯಂತೂ ಶೋಚನೀಯವಾಗಿದೆ. ಮೇಟ್ರೀಕ್ ಮತ್ತು ಅದರ ನಂತರದ ಉನ್ನತ ವ್ಯಾಸಂಗಮಾಡಿರುವ ವಿದ್ಯಾವಂತ ಯುವಕ-ಯುವತಿಯರು ಉದ್ಯೋಗಗಳಿಗಾಗಿ ಬೀದಿಯಲ್ಲಿ ಅಲೆಯುತ್ತಿದ್ದಾರೆ. ದುರ್ವೆಸನಗಳಿಗೆ ಬಲಿಯಾದ ಯುವಕ-ಯುತಿಯರ ಸಂಖ್ಯೆಯೂ ಹೆಚ್ಚುತ್ತಿದೆ ಎಂದರು.
ಇತ್ತೀಚಿನ ಆಥರ್ಿಕ ಬಿಕ್ಕಟ್ಟಿನಿಂದಾಗಿ ಲಕ್ಷೊಪಲಕ್ಷ ಜನರು ಕೆಲಸ ಕಳೆಕೊಂಡು ಬೀದಿಗೆ ಬಿದ್ದಿದ್ದಾರೆ. ನಿರಂತರವಾಗಿ ಕೆಲಸಗಳು ಇರುವಂತಹ ಖಾಸಗಿ ವಲಯ ಮತ್ತು ಕೇಂದ್ರ ಹಾಗೂ ರಾಜ್ಯ ಸಕರ್ಾರಗಳ ಎಲ್ಲಾ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳಿಗೆ ಖಾಯಂ ಉದ್ಯೋಗಿಗಳನ್ನು ಭತರ್ಿ ಮಾಡದೆ ಗುತ್ತಿಗೆ-ಹೊರಗುತ್ತಿಗೆ ಆಧಾರದಲ್ಲಿ ಉದ್ಯೋಗಗಳ ಭತರ್ಿಮಾಡಲಾಗುತ್ತಿದೆ. ಅವರನ್ನು ಆಧುನಿಕ ಜೀತದಾಳುಗಳೆಂದು ಕರೆಯುವಷ್ಠರಮಟ್ಟಿಗೆ ಅವರ ಹಕ್ಕುಗಳನ್ನು ಕಸಿದುಕೊಂಡು ಜೀತದಾಳಿನಂತೆ ದುಡಿಸಿಕೊಳ್ಳಲಾಗುತ್ತಿದೆ. ಇದಕ್ಕೆ ಹಾಸ್ಟೆಲ್ ಹೊರಗುತ್ತಿಗೆ ನೌಕರರು ಮತ್ತು ಗ್ರಾಮ ಪಂಚಾಯತಿಯ ಹೊರಗುತ್ತಿಗೆ ನೌಕರರೇ ನಿದರ್ಶನವಾಗಿದ್ದಾರೆ ಎಂದರು.
ಕಮಲವ್ವ ತೇಲಿ ಮಾತನಾಡಿ ಅರ್ಧ ಶತಮಾನದಿಂದ ಇಲಾಖೆಯಲ್ಲಿ ಸೇವೆಸಲ್ಲಿಸುತ್ತಿದ್ದು, ನಿರಂತರ ಹೋರಾಟಗಳನ್ನು ನಡೆಸುತ್ತಿರುವ ಅಂಗನವಾಡಿ ಕಾರ್ಯಕತರ್ೆಯರು ಮತ್ತು ಸಹಾಯಕೀಯರನ್ನು ಸಕರ್ಾರಿ ನೌಕರರೆಂದು ಅಥವಾ ಕಾಮರ್ಿಕರೆಂದು ಪರಿಗಣಿಸುತ್ತಿಲ್ಲ ಮತ್ತು ಅಂತಹ ಯಾವುದೇ ವೇತನ, ಭತ್ಯೆ ಇತ್ಯಾಧಿಗಳನ್ನು ನೀಡುತ್ತಿಲ್ಲ. ಕಳೆದ 10 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಸೇವೆಸಲ್ಲಿಸುತ್ತಿರುವ ಆಶಾ ಕಾರ್ಯಕತರ್ೆಯರನ್ನೂ ಸಹ ಆರೋಗ್ಯ ಇಲಾಖೆಯ ನೌಕರರೆಂದು ಪರಿಗಣಿಸದೆ ಪ್ರೋತ್ಸಾಹಧನದ ಕಾರ್ಯಕತರ್ೆಯೆಂದು ಮಾಸಿಕ ನಿಗಧಿತ ವೇತನವನ್ನು ನಿರಾಕರಿಸಿ ಅವರನ್ನು ಶೋಷಣೆ ಮಾಡಲಾಗುತ್ತಿದೆ ಎಂದರು.
ಇಂತಹ ನೌಕರರನ್ನು, ಕಾರ್ಮಿಕ ರನ್ನು ಮತ್ತು ಸ್ಕೀಮ್ ಕಾರ್ಯಕತರ್ೆಯರನ್ನು ಪೂರ್ಣವಧಿಯ ನೌಕರರೆಂದು ಅಥವಾ ಕಾಮರ್ಿಕರೆಂದು ಪರಿಗಣಿಸಿ ಅವರಿಗೆ ಜೀವನಯೋಗ್ಯವಾದ ಮಾಸಿಕ ವೇತನ, ಭತ್ಯೆ, ಬಡ್ತಿ, ಪಿಂಚಣಿ ಇತ್ಯಾಧಿಗಳನ್ನು ನೀಡಬೇಕಾಗಿತ್ತು. ಆದರೆ ಕೆಲಸದ ಭದ್ರತೆ ಮತ್ತು ಜೀವನಯೋಗ್ಯ ವೇತನ ಮತ್ತು ನಿವೃತ್ತಿಯ ಪಿಂಚಣಿಯನ್ನು ಖಾತ್ರಿ ಮಾಡದಿರುವುದರಿಂದ ತೀವ್ರವಾದ ಆದಾಯ ಕುಸಿತದಿಂದ ಉತ್ತಮವಾದ ಆಹಾರ, ಆರೋಗ್ಯ, ಶಿಕ್ಷಣಗಳು ಸಿಗದೆ ಈ ವರ್ಗದ ದುಡಿಯುವ ಜನರ ಕುಟುಂಬಗಳಲ್ಲಿನ ಸದಸ್ಯರು, ಮಕ್ಕಳು-ಮಹಿಳೆಯರು-ವೃದ್ದರು ತೀವ್ರವಾದ ಅಪೌಷ್ಠಿಕತೆ ಮತ್ತು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆಂದು ತಿಳಿಸಿದರು.