ವಿವಿಧ ಬೇಡಿಕೆ, ಸಮಸ್ಯೆ ಸರಿಪಡಿಸದಿದ್ದರೆ ಉಗ್ರ ಹೋರಾಟ

ಲೋಕದರ್ಶನ ವರದಿ

ಶಿರಹಟ್ಟಿ 26: ಪಟ್ಟಣದ ತಾಲೂಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಮರ್ಪಕವಾಗಿ ಔಷಧಿಗಳನ್ನು ನೀಡದೇ ಅಲೆದಾಡಿಸುವ ಕ್ರಮದ ವಿರುದ್ಧ ಹಾಗೂ ಅರೆಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ಡಿ ದಜರ್ೆ ನೌಕರರನ್ನು ಸ್ಥಳಿಯರನ್ನೆ ಆಯ್ಕೆ ಮಾಡಬೇಕು ಹಾಗೂ ಅವರಿಗೆ ಪ್ರತಿ ತಿಂಗಳು ವೇತನ ಮಾಡದ ಕ್ರಮವನ್ನು ಆದಷ್ಟು ಬೇಗನೇ ಸರಿಪಡಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಕರವೇ ತಾಲೂಕಾಧ್ಯಕ್ಷ ಬಸವರಾಜ ವಡವಿ ಹೇಳಿದರು.

ಅವರು ಶಿರಹಟ್ಟಿಯ ಪಟ್ಟಣದಲ್ಲಿರುವ ತಾಲೂಕಾ ಆಸ್ಪತ್ರೆಯಲ್ಲಿ ಪ್ರತಿ ದಿನ ಗ್ರಾಮೀಣ ಪ್ರದೇಶದಿಂದ ನೂರಾರು ಜನರು ಆಗಮಿಸುತ್ತಾರೆ ಇಲ್ಲಿಯ ವೈದ್ಯಾಧಿಕಾರಿಗಳು ರೋಗಿಗಳಿಗೆ ಔಷಧಿಗಳನ್ನು ಸಮರ್ಪಕವಾಗಿ ನೀಡುತ್ತಿಲ್ಲ. ಅವರಿಗೆ ಸಕರ್ಾರಿ ಆಸ್ಪತ್ರೆಯಲ್ಲಿ ನೀಡುವ ಉಚಿತ ಔಷಧಿಗಳ ನೀಡದೇ ಹೊರ ಖಾಸಗಿ ಔಷಧಿ ಅಂಗಡಿಗಳಲ್ಲಿ ತೆಗೆದುಕೊಂಡು ಬರಲು ತಿಳಿಸುತ್ತಾರೆ ಅದರೆ ಸಕರ್ಾರಿ ಆಸ್ಪತ್ರೆಗೆ ಬಂದರೂ ಬಡ ಜನರು ಖಾಸಗಿ ಔಷಧಿ ಅಂಗಡಿಗಳಲ್ಲಿ ಔಷಧ ಖರೀದಿ ಮಾಡುವ ಅನಿವಾರ್ಯವಾಗಿದೆ. ಇದರಿಂದ ಗ್ರಾಮೀಣ ಬಡ ಜನರು ಅಥರ್ಿಕವಾಗಿ ಬಳಲುವಂತಹ ಪರಿಸ್ಥಿತಿ ಎದುರಾಗಿದೆ, ರೋಗಿಗಳು ಸಕರ್ಾರಿ ಆಸ್ಪತ್ರೆಯಲ್ಲಿ ಔಷಧಿಯನ್ನು ನೀಡುವಂತೆ ಕೇಳಿದರೆ ಮೇಲಾಧಿಕಾರಿಗಳು ನಮ್ಮ ಆಸ್ಪತ್ರೆಗೆ ಮೇಲಿನಿಂದನೇ ಬಂದಿಲ್ಲ ನಾವೇನು ಮಾಡಬೇಕು ಎಂದು ಹಾರಿಕೆ ಉತ್ತರ ಕೊಡುತ್ತಾರೆ. ಸಮರ್ಪಕವಾಗಿ ಔಷಧಿಗಳನ್ನು ಪೊರೈಕೆ ಮಾಡದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು, ಅರೆ ಗುತ್ತಿಗೆಯಲ್ಲಿ ಸುಮಾರು 21 ಜನರು ಕೆಲಸ ಮಾಡುತ್ತಿದ್ದು, ಅದರಲ್ಲಿ ಕೆಲವೇ ಕೆಲ ಜನರು ಸ್ಥಳೀಯರಿದ್ದು ಶಿರಹಟ್ಟಿ ನಗರದಲ್ಲಿ ಉದ್ಯೋಗವಿಲ್ಲದೆ ಯುವಕರು ಪರದಾಡುವ ಪರಿಸ್ಥಿತಿ ಇದೆ. ಗುತ್ತಿಗೆ ಆಧಾರದಲ್ಲಿ 21ಡಿ ದಜರ್ೆ ನೌಕರರನ್ನು ಸ್ಥಳೀಯರನ್ನೆ ನೇಮಕ ಮಾಡಬೇಕು. ಇದರಿಂದ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ ಮತ್ತು ಈಗಿರುವ ಡಿ ದಜರ್ೆ ನೌಕಕರಿಗೆ 7 ತಿಂಗಳಿನಿಂದ ವೇತನವಾಗದೇ ಅವರ ಜೀವನ ನಡೆಸಲು ತುಂಬಾ ಕಷ್ಟಕರವಾಗಿದೆ.

ಆದ್ದರಿಂದ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಪ್ರತಿ ತಿಂಗಳು ವೇತನ ಮಾಡುವಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಈ ಎಲ್ಲಾ ನಮ್ಮ ಬೇಡಿಕೆಗಳು ಮಾನ್ಯ ಜಿಲ್ಲಾಧಿಕಾರಿಗಳು ಪೂರೈಸಬೇಕು. ಇಲ್ಲವಾದರೆ ತಾಲೂಕ ಆಸ್ಪತ್ರೆಯ ಮುಂದೆ ಕನರ್ಾಟಕ ರಕ್ಷಣಾ ವೇದಿಕೆ ಅಡಿಯಲ್ಲಿ ಉಗ್ರ ಹೋರಾಟ ಮಾಡಲಾಗುವುದು. ನಮ್ಮ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮನವಿಯಲ್ಲಿ ತಿಳಿಸಿದ್ದಾರೆ. 

ಈ ಸಂದರ್ಭದಲ್ಲಿ ದೇವೆಂದ್ರ ಶಿಂಧೆ, ಪ್ರಕಾಶ ಬಡ್ಡಪ್ಪನವರ, ನೂರಅಹ್ಮದ ಮುಳಗುಂದ, ಮಾಬುಸಾಬ ಢಾಲಾಯತ್, ಗುಡುಸಾಬ್ ಚೋರಗಸ್ತಿ, ಮಂಜುನಾಥ ಕುಂದರಗಿ, ಹರೀಷ್ ದೇಸಾಯಿಪಟ್ಟಿ, ಚಿನ್ನು ನಡುಗೇರಿ, ಅಭಿಷೇಕ್ ದಶಮನಿ, ಫಿರಸಾಬ ಒಚಿಟಿ ಇನ್ನೂ ಅನೇಕರು ಉಪಸ್ಥಿತರಿದ್ದರು.