ವಿದ್ಯಾರ್ಥಿ ಗಳಿಗಾಗಿ ವಿವಿಧ ಸ್ಪರ್ಧೆ

ಬೆಳಗಾವಿ.ಡಿ.3: ಎಸ್. ಎಸ್ಎಸ್ ಸಮಿತಿಯ ಜೆ. ಎ. ಸವದತ್ತಿ ಪ. ಪೂ. ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇತ್ತಿಚಿಗೆ ಲೇಡಿಸ ಯೂನಿಯನ ವತಿಯಿಂದ ವಿದ್ಯಾರ್ಥಿ ಗಳಲ್ಲಿರುವ ಕಲೆ, ಪ್ರತಿಬೆ, ಮತ್ತು ಸ್ರಜನಶೀಲತೆಯನ್ನು ಹೊರಗೆಳೆಯಲು  ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.  ಕಸದಲ್ಲಿ ರಸ ತಗೆಯುವೆಕೆ ಮತ್ತು ಮೆಹಂದಿ ಸ್ಪರ್ಧೆ, ಗಿಫ್ಟ್ ರ್ಯಾಪಿಂಗ್ ಹಾಗೂ ರಂಗೋಲಿ ಆಭಣಗಳ ತಯಾರಿಕೆ ಮತ್ತು  ಕೇಶವಿನ್ಯಾಸ, ಮೆಕಫ್ ,ಡ್ರಾಯಿಂಗ್& ಪೆಪರ್ಆರ್ಟ ಹಾಗೂ ಅಡುಗೆ ಪದಾರ್ಥಗಳ ತಯಹಾರಿಕೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಳಾಗಿತ್ತು. 

ಈ ಸ್ಪರ್ಧೆಗಳಲ್ಲಿ ವಿದ್ಯಾರ್ಥಿ ಗಳು ಅತೀ ಉತ್ಸಾಹದಿಂದ ಭಾಗವಹಿಸಿದ್ದರು. ಮ ಹಾವಿದ್ಯಾಲಯದ ಪ್ರಾಚಾರ್ಯರಾದ ವಿ. ಬಿ. ತುರಮರಿಯವರು ವಿದ್ಯಾರ್ಥಿ ಗಳನ್ನು ಉದ್ದೇಶಿಸಿ ಅವರಲ್ಲಿರುವ ಪ್ರತಿಭೆ, ಸೃಜನಶೀಲತೆ ಕುರಿತು ಮಾತನಾಡಿ ಸ್ಪರ್ಧೆಗಳನ್ನು ವಿಕ್ಷಿಸಿ ವಿದ್ಯಾರ್ಥಿ ಗಳಲ್ಲಿ ಉತ್ಸಾಹತುಂಬಿದರು. ಎಸ್.ಎಸ್.ಎಸ್. ಸಮಿತಿಯ ಚೇರಮನರಾದ  ಜಗಧೀಶ ಎ. ಸವದತ್ತಿಯವರು ಎಲ್ಲ ಸ್ಪರ್ಧೆಗಳನ್ನು ವಿಕ್ಷಿಸಿ, ವಿದ್ಯಾರ್ಥಿಗಳನ್ನು ಪ್ರಶಂಸಿಸಿ, ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆ ಬೆಳಕಿಗೆ ಬರಲು ಇಂತಹ ಸ್ಪರ್ಧೆಗಳು ತುಂಬಾ ಮಹತ್ವದ ಪಾತ್ರ ನಿರ್ವಹಿಸುತ್ತವೆ ಎಂದು ಹೇಳಿದರು.