ಮನುವಾದ ಸಮಾಜ ಪರಿವರ್ತನಾ ಸಮಾವೇಶ | ಮೂಢ ನಂಬಿಕೆ, ಕಂದಾಚಾರದಿಂದ ಹೊರಬರಬೇಕು ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭ

ಬೆಳಗಾವಿ: ಮೂಢ ನಂಬಿಕೆ, ಕಂದಾಚಾರ ಹಾಗೂ ಮಾನವೀಯ ವಿರೋಧಿ ಸಂಪ್ರದಾಯಗಳಿಂದ ನಮ್ಮ ಜನ ಹೊರಬರಬೇಕು. ವೈಚಾರಿಕ ಚಿಂತನೆಗಳನ್ನು ಗಟ್ಟಿಯಾಗಿ ಅಳವಡಿಸಿಕೊಳ್ಳಬೇಕು ಎಂದು ಭಾರತೀಯ ಕೃಷಿಕ ಸಮಾಜ(ಸಂ) ದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಹೇಳಿದ್ದಾರೆ.

ಬಸವ ಭೀಮ ಸೇನೆಯ ವತಿಯಿಂದ ಭಾನುವಾರದಂದು  ನಗರದ ಕನ್ನಡ ಸಾಹಿತ್ಯ ಭವನದಲ್ಲಿ  ಆಯೋಜಿಸಲಾಗಿದ್ದ ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಜನ್ಮ ದಿನ, ಮನುವಾದ ಸಮಾಜ ಪರಿವರ್ತನಾ ಸಮಾವೇಶ ಹಾಗೂ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮ ಮತ್ತು ಸಂಪ್ರದಾಯಗಳ ಹೆಸರಿನಲ್ಲಿ ಮಹಿಳೆಯರು, ಮಕ್ಕಳು ಮತ್ತು ಯುವಕರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ನಿಲ್ಲಬೇಕು.  ಮಹಿಳೆಯರು, ಮಕ್ಕಳು, ಯುವಕರು ಬಸವಾದಿ ಶರಣರು ತೋರಿದ ಸಮಾನತೆಯ ಮಾರ್ಗದಲ್ಲಿ ನಡೆಯುವ ಮೂಲಕ ಸಶಕ್ತ ಸಮಾಜ ಕಟ್ಟಬೇಕು ಎಂದರು.

ಬಸವಣ್ಣನವರು ಕಟ್ಟಿದ ಅನುಭವ ಮಂಟಪ ನಮ್ಮೆಲ್ಲರಿಗೆ ಮಾದರಿ ಮತ್ತು ಪ್ರೇರಣೆಯಾಗಿದೆ. ಬಸವಾದಿ ಶರಣರು ತೋರಿದ ಮಾರ್ಗದಲ್ಲಿ ರೈತ ಸಂಘಟನೆಯನ್ನು ಬಲ ಪಡಿಸಲಾಗುತ್ತಿದೆ. ಎಲ್ಲ ಕಾಯಕ ಜೀವಿಗಳೊಂದಿಗೆ ಸೇರಿ ರೈತ ಹೋರಾಟಕ್ಕೆ ಹೊಸ ಆಯಾಮ ನೀಡುವ ಚಿಂತನೆ ನಡೆದಿದೆ ಎಂದರು. 

ಸೇನೆಯ ಅಧ್ಯಕ್ಷ ಆರ್.ಎಸ್.ದಗರ್ೆ ಮಾತನಾಡಿ, ಕಲ್ಪಿತ ದೇವರುಗಳ ಜಾಗದಲ್ಲಿ ಸಮಾಜ ದೇವರುಗಳ ಪ್ರತಿಷ್ಠಾಪನೆಯಾಗಬೇಕು. ಬಸವ ಸಮಾಜದ ಮನೆ ಮನೆಗಳಲ್ಲಿ ಸರಸ್ವತಿ-ಲಕ್ಷ್ಮೀಯರ ಜಾಗದಲ್ಲಿ ವಿಶ್ವದ ಪ್ರಪ್ರಥಮ ಸಾಕ್ಷರ ಮಹಿಳೆ ಅಕ್ಕಮಹಾದೇವಿ ಹಾಗೂ ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಫುಲೆಯವರ ಪ್ರತಿಷ್ಠಾಪನೆಯಾಗಬೇಕು. ದೇವರುಗಳ ಮತ್ತು ಸಂಪ್ರದಾಯದ ಭಯದಿಂದ ಮುಕ್ತವಾದ ಸಮಾಜದ ನಿಮರ್ಾಣ ಆಗಬೇಕು. ಅಕ್ಕಮಹಾದೇವಿಯವರನ್ನು ನಾಡ ದೇವತೆಯೆಂದು ಸರಕಾರ ಘೋಷಿಸಬೇಕು ಎಂದರು. 

ನೂರಾರು ಜಾತಿ. ನೂರಾರು ಜನಾಂಗ, ನೂರಾರು ಉಪ ಜಾತಿಗಳಿಂದ ಕೂಡಿರುವ ಲಿಂಗಾಯತ ಧರ್ಮಕ್ಕೆ ಸಂವಿಧಾನದ ಮಾನ್ಯತೆ ಸಿಗಲೇಬೇಕು. ಬಸವಣ್ಣನವರ ಈ ಧರ್ಮಕ್ಕಾಗಿ ಬಲಿಕೊಟ್ಟ ಶೋಷಿತ ಸಮುದಾಯಗಳ ಲಕ್ಷಾಂತರ ಶರಣರ ಬಲಿದಾನಕ್ಕೆ ನ್ಯಾಯ ಸಿಗಲೇಬೇಕು. ಧರ್ಮದ ಹೋರಾಟದಲ್ಲಿ ಎಷ್ಟೆ ತೊಂದರೆಗಳು ಎದುರಾದರೋ ಧರ್ಮದ ಹೋರಾಟ ಮುಂದುವರೆಯಲಿದೆ ಎಂದರು.

ಶೋಭಾ ಕ್ಷೀರಸಾಗರ, ಜಯಶ್ರೀ ಕಡಗೋಳ, ಉಮಾ ಅಂಗಡಿ, ಮಹಾದೇವಿ ಪಾಟೀಲ, ವಿಜಯಪುರ ಮತ್ತು ಜ್ಯೋತಿ ಬದಾಮಿ ಅವರುಗಳಿಗೆ ಅಕ್ಷರ ತಾಯಿ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ,    

ನಾಗರತ್ನ ರಾಮನಗೌಡ ಮತ್ತು ರೂಪಾ ಕೂಡಲಗಿಮಠ ಅವರುಗಳಿಗೆ ನಾರಿಕುಲ ಚೇತನ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಹಾಗೂ ಸುಶೀಲಾ ಲಕ್ಷ್ಮೀಕಾಂತ ಗುರವ ದಂಪತಿಗಳಿಗೆ ಸಾವಿತ್ರಿಬಾಯಿ ಜ್ಯೋತಿಭಾ ಫುಲೆ ಆದರ್ಶ ದಂಪತಿಗಳು ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶಕುಂತಲಾ ಹೂಗಾರ, ರೇಖಾ ಅಂಗಡಿ,  ವಿಜಯ ತಳವಾರ, ಕರೆಪ್ಪ ಗುಡೆನ್ನವರ, ಬಾಳಾಸಾಹೇಬ ಉದಗಟ್ಟಿ, ಎಚ್.ಎಂ.ಲಮಾಣಿ, ಶಿವಪ್ಪ ಶಮರಂತ, ಲಕ್ಷ್ಮೀಕಾಂತ ಗುರವ, ಸುರೇಶ ಮರಲಿಂಗಣ್ಣವರ, ಕೆ.ಬಿ.ಮಾದಾರ ಮುಂತಾದವರು ಉಪಸ್ಥಿತರಿದ್ದರು.