ಕೊರೊನಾ ಕುರಿತು ವಿವಿಧೆಡೆ ಜಾಗೃತಿ

ಬಳ್ಳಾರಿ, ಏ. 04: ಕೊರೋನಾ ವೈರಸ್ ಕುರಿತು ಸಾಮಾಜಿಕ ಅಂತರ ಕಾಪಾಡುವುದು, ಮೇಲಿಂದ ಮೇಲೆ ಸೋಪಿನಿಂದ ಕೈಗಳನ್ನು ತೊಳೆದುಕೊಳ್ಳುವುದು, ಮುಂತಾದವುಗಳ ಕುರಿತು ನಗರದ ನಿಗದಿಪಡಿಸಿದ ಸ್ಥಳಗಳಲ್ಲಿ ಇರುವ ತರಕಾರಿ ಮಾರಾಟ ಸ್ಥಳಗಳಲ್ಲಿ ಜಾಗೃತಿ ನೀಡಲಾಯಿತು ಹಾಗೂ ಖಚಿತ ಪ್ರಕರಣ ಕಂಡುಬಂದ ಸಿರಗುಪ್ಪ ತಾಲೂಕಿನ ಹೆಚ್.ಹೊಸಳ್ಳಿ ಗ್ರಾಮದಲ್ಲಿ ಕೊರೊನಾ ವೈರಸ್ ಕುರಿತು ಜಾಗೃತಿ ನೀಡಲಾಯಿತು.

      ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ಹಾಗೂ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಕೊರೊನಾ ವೈರಸ್ ಕುರಿತು ಶನಿವಾರ ವಿವಿಧೆಡೆ ಜಾಗೃತಿ ಮೂಡಿಸಲಾಯಿತು. 

ಈ ವೇಳೆ ತಹಶೀಲ್ದಾರ, ಕಾರ್ಯನಿವರ್ಾಹಕ ಅಧಿಕಾರಿಗಳು, ಜಿಲ್ಲಾ ಕ್ಷಯರೋಗ ನಿಮರ್ೂಲನಾ ಅಧಿಕಾರಿಗಳು, ವಿಶ್ವಸಂಸ್ಥೆ ಬಳ್ಳಾರಿ ವಲಯ ಅಧಿಕಾರಿ, ತಾಲೂಕಾ ಆರೋಗ್ಯ ಅಧಿಕಾರಿಗಳು, ವೈಧ್ಯಾಧಿಕಾರಿಗಳು, ಪಿಡಿಓ, ಕಂದಾಯ ನಿರೀಕ್ಷಕರು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ , ಬಿಲ್ಲ ಕಲೆಕ್ಟರ್, ಕಿರಿಯ ಮಹಿಳಾ ಆರೋಗ್ಯ ಸಹಾಯಕ, ಆಶಾ, ಅಂಗನವಾಡಿ ಕಾರ್ಯಕತರ್ೆಯರು ಸೇರಿದಂತೆ ಇತತರು ಹಾಜರಿದ್ದರು.