ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

Variation in power supply today

ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ  

ಧಾರವಾಡ 07: ಕಲಘಟಗಿ ಉಪವಿಭಾಗ ವ್ಯಾಪಿಯಲ್ಲಿ ಬರುವ 110/33/11 ಕೆ.ವಿ ಕಾಡನಕೋಪ್ಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ 3 ನೇ ತ್ರೈಮಾಸಿಕ ಕೆಲಸದ ಸಲುವಾಗಿ ಕಾಡನಕೋಪ್ಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ದಿ. 8 ಶನಿವಾರದಂದು ಬೆಳಿಗ್ಗೆ 10ಘಂಟೆಯಿಂದ ಸಾಯಂಕಾಲ 6ಘಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.  33 ಕೆವಿ ಮಾರ್ಗಗಳಾದ  ದುಮ್ಮವಾಡ ಹಾಗೂ ಕಲಘಟಗಿ 11 ಕೆವಿ ಮಾರ್ಗಗಳಾದ ಕುರುವಿನಕೋಪ್ಪ, ಉಗ್ನಿಕೆರಿ, ನಾಗನುರ ಚಳಮಟ್ಟಿ. ಗುಡಿಹಾಳ ಗಂಜಿಗಟ್ಟಿ  ಮಿಶ್ರೀಕೋಟಿ ಕಾಡನಕೋಪ್ಪ ದಾಸನೂರ ಎ ವಿ ಎಮ್, ಎಮ್ ಎಲ್ ಸಿ ಟಿ ಬೊಗೆನೂರಕೊಪ್ಪ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಧಾರವಾಡ ಕಾಮಪಾ ಗ್ರಾಮೀಣ ವಿಭಾಗ ಹುವಿಸಕಂನಿ, ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಗೆ ತಿಳಿಸಿದ್ದಾರೆ.