ವಿಜಯಪುರ, ಡಿಸೆಂಬರ್ 20: ಜಿಲ್ಲೆಯ ನಿಡಗುಂದಿ ತಾಲೂಕಿನ ಉಪ ಕೇಂದ್ರಗಳಾದ 110/11ಕೆವ್ಹಿ ನಿಡಗುಂದಿ ಹಾಗೂ ಮುಕರ್ತಿಹಾಳ 110ಕೆವ್ಹಿ, 33ಕೆವ್ಹಿ ಮತ್ತು 11 ಕೆವ್ಹಿ ಬೇಗಳ ಮೂರನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳುವುದರಿಂದ 110/11ಕೆವ್ಹಿ ನಿಡಗುಂದಿ ಹಾಗೂ ಮುಖರ್ತಿಹಾಳ ಉಪಕೇಂದ್ರದಿಂದ ಹೊರಹೋಗುವ ಎಲ್ಲ 110ಕೆವ್ಹಿ, 33ಕೆವ್ಹಿ ಹಾಗೂ 11 ಕೆವ್ಹಿ ಮಾರ್ಗಗಳಲ್ಲಿ ಡಿ.21ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಉಪಕೇಂದ್ರದಿಮದ ಹೊರಹೋಗುವ ಎಲ್ಲ 11ಕೆವ್ಹಿ ಮಾರ್ಗಗಳಲ್ಲಿನ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಕೃಷಿ ನೀರಾವರಿ ಮಾರ್ಗಗಳಿಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಬಸವನಬಾಗೇವಾಡಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.