ಬೆಳಗಾವಿ : ಅಂದಿನ ರಾಷ್ಟ್ರೀಯ ಕಾಂಗ್ರೆಸ್ ರಾಜಕೀಯ ಪಕ್ಷವಾಗಿರಲಿಲ್ಲ. ಭಾರತದ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿತ್ತು. ಈಗೀನ ಹಾಗೂ ಆಗಿನ ಕಾಂಗ್ರೆಸ್ ಪಕ್ಷಕ್ಕೂ ಬಹಳಷ್ಟು ವ್ಯತ್ಯಾಸ ಇದೆ. ಈಗ ಬೆಳಗಾವಿಯಲ್ಲಿ ನಡೆಯುತ್ತಿರುವದು ನಕಲಿ ಗಾಂಧಿಗಳ ಸಮಾವೇಶ ಇದಾಗಿದೆ. 25 ಕೋಟಿ ರೂಪಾಯಿ ಮಂಜೂರು ಮಾಡಿ ಹಣ ದುರುಪಯೋಗ ಮಾಡೋ ಕೆಲಸ ಆಗಿದೆ ಎಂದು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ವ್ಯಂಗ್ಯ ವಾಡಿದ್ದಾರೆ.
ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಕಾಂಗ್ರೆಸ್ ಶತಮಾನೋತ್ಸವ ಕಾರ್ಯಕ್ರಮ ಹಿನ್ನೆಲೆ. ತನ್ನದೇ ಪಕ್ಷದ ರೀತಿಯಲ್ಲಿ ಕಾಂಗ್ರೆಸ್ ಪಕ್ಷ ಕಾರ್ಯಕ್ರಮ ಮಾಡುತ್ತಿದೆ. 39ನೇ ಅಧಿವೇಶನದ ಮಹಾತ್ಮ ಗಾಂಧಿ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷತೆ ವಹಿಸಿದ್ರು.ಹಲವು ಕಾರ್ಯಕ್ರಮ ಭಾಗವಹಿಸಿದ್ದರು. ಹುಬ್ಬಳ್ಳಿ ಸಿದ್ದಾರೂಢ ಮಠಕ್ಕೂ ಭೇಟಿ ನೀಡಿದ್ದರು. ಕಾಂಗ್ರೆಸ್ ಒಡೆದು ಅನೇಕ ಪಕ್ಷಗಳು ನಿರ್ಮಾಣವಾಗಿವೆ. ಕಾಂಗ್ರೆಸ್ ಅನೇಕ ಸಂದರ್ಭಗಳಲ್ಲಿ ವಿಭಜನೆ ಆಗಿದೆ ಎಂದರು.
ಬಿಜೆಪಿಯ ಅಭಯ ಪಾಟೀಲ್ ವಿಧಾನ ಸಭೆಯಲ್ಲಿ ಖಾಸಗಿ ಬಿಲ್ ಮಂಡನೆ ಮಾಡಿದ್ರು. ಮಹಾತ್ಮ ಗಾಂಧಿ ವಿಚಾರಧಾರೆಯನ್ನು ಹೆಚ್ಚು ಪ್ರಖರಗೊಳಿಸಬೇಕು ಎಂದು ಮನವಿ ಮಾಡಿದರು. ಮ್ಯೂಸಿಯಂ ಹಾಗೂ ಅನೇಕ ಕಾರ್ಯಕ್ರಮ ಆಗಬೇಕು. ರಾಜಕೀಯೇತರ ಕಾರ್ಯಕ್ರಮ ಆಗಬೇಕು ಎಂದು ಅಭಯ್ ಪಾಟೀಲ ಹೇಳಿದರು. ಆದರೆ ಬಗ್ಗೆ ಯಾರು ತಲೆ ಕೆಡಸಿಕೊಳ್ಳಲಿಲ್ಲ. ರಾಹುಲ್, ಇಂದಿರಾ ಗಾಂಧಿ ಕಾಂಗ್ರೆಸ್ ನವರು ಪಕ್ಷಕ್ಕೆ ಸಮಿತಿ ಮಾಡಿದ್ದಾರೆ.
ಇದನ್ನು ಜಾತ್ಯಾತೀತ, ರಾಜಕೀಯೇತವಾಗಿ ಕಾರ್ಯಕ್ರಮ ಮಾಡಬೇಕಿತ್ತು. ಮೂಲ ಪ್ರಸ್ತಾಪಕ್ಕೆ ವಿರುದ್ಧ ಸಮಾವೇಶ ಮಾಡಲು ಹೋರಾಟಿದೆ. 25 ಕೋಟಿ ಸಾರ್ವಜನಿಕರ ಹಣ ದುರುಪಯೋಗ ಆಗಿದೆ. ಯಲ್ಲಮ್ಮ ಜಾತ್ರೆಯಲ್ಲಿ ಉಂಡವನೇ ಜಾಣ ಎನ್ನುವಂತೆ ಆಗಿದೆ ಎಂದು ನುಡಿದರು. ಇಲ್ಲಿಂದ ನಕಲಿ ಕಾಂಗ್ರೆಸ್ ನ ಅಧ್ಯಾಯ ಮುಕ್ತಾಯವಾಗಲಿದೆ. ಹೊಸ ಅಧ್ಯಾಯ ಆರಂಭವಲ್ಲ ಅಂತ್ಯವಾಗಲಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಸಿಕ್ಕ ಬಳಿಕ ಕಾಂಗ್ರೆಸ್ ವಿಸರ್ಜನೆ ಮಾಡಲು ಮಹಾತ್ಮ ಗಾಂಧಿ ಹೇಳಿದ್ರು. ನೆಹರು, ಗಾಂದಿ ಸ್ವಾತಂತ್ರ್ಯ ಹೆಸರು ದುರುಪಯೋಗ ಮಾಡಿ ಅಧಿಕಾರ ಹಿಡಿದರು. ಗಾಂಧಿಯ ರಕ್ತ ಸಂಬಂಧಿಗಳು ನೆಹರು ಅಲ್ಲ. ಅದನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ.ಮೂಲ ಪ್ರಸ್ತಾಪಕ್ಕೆ ವಿರುದ್ಧವಾಗಿ ಕೆಲಸ ಮಾಡಬೇಕಿತ್ತು. ರಾಜಕೀಯ ಏತರ ಕಾರ್ಯಕ್ರಮ ಆಗಬೇಕಿತ್ತು ಎಂದರು.
ಇದೇ ವೇಳೆ ಶಾಸಕ ಅಭಯ ಪಾಟೀಲ್ ಮಾತನಾಡಿ, ನಕಲಿ ಗಾಂಧಿಗಳ ಸಮಾವೇಶ ನೂರಕ್ಕೆ ನೂರು ಸತ್ಯ. ಅಧಿವೇಶನದಲ್ಲಿ ಖಾಸಗಿ ನಿರ್ಣಯ ಮಾಡಿದೆ.ಮಹಾತ್ಮ ಗಾಂಧೀ ಅಧ್ಯಕ್ಷೆ ವಹಿಸಿದ ಏಕೈಕ ಅಧಿವೇಶನ. ಸ್ಮಾರಕ, ಚರ್ಚಾಗೋಷ್ಠಿ ಮಾಡಬೇಕು ಎನ್ನುವುದು ನಮ್ಮ ಉದ್ದೇಶ ಇತ್ತು.
ಇದಕ್ಕಾಗಿ 500 ಕೋಟಿ ರೂಪಾಯಿ ಯೋಜನೆ ಸಿದ್ದಪಡಿಸಿ. ಕೇಂದ್ರ, ರಾಜ್ಯ ಸರ್ಕಾರದ ಸಹಾಭಾಗಿತ್ವದಲ್ಲಿ ಅಭಿವೃದ್ಧಿ ಮಾಡಬೇಕು.ಜನರ ಕಾರ್ಯಕ್ರಮ ಆಗಬೇಕು, ಕಾಂಗ್ರೆಸ್ ಕಾರ್ಯಕ್ರಮ ಆಗಬಾರದ. ಇದು ಪಕ್ಷದ ಕಾರ್ಯಕ್ರಮ ಎಂದು ಕಾಂಗ್ರೆಸ್ ಮಾಡುತ್ತಿದ್ದಾರೆ. ಬ್ಯಾನರ್ ನಲ್ಲಿ ಗಾಂಧಿಗಿಂದ ಇನ್ನೂಳಿದವರ ಫೋಟೋಗಳು ದೊಡ್ಡದಾಗಿ ಹಾಕಲಾಗಿದೆ.ಸರ್ಕಾರಿ ಹಣದಲ್ಲಿ ಪಕ್ಷದ ಕಾರ್ಯಕ್ರಮ.ನಾವೇ ಹೇಳಿದ ಬಳಿಕ ಕಾಂಗ್ರೆಸ್ ನವರು ಜಾಗೃತರಾಗಿದ್ದಾರೆ. ಗಾಂಧಿ ಬದಲಾಗಿ, ತಮ್ಮ ವಿಚಾರ ತಿಳಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಅಭಯ್ ಪಾಟೀಲ ಹೇಳಿದ್ದಾರೆ.
ಡಿ. 26,27ರಂದು ಸಿ ಟಿ ರವಿ ಪ್ರಕರಣ ಖಂಡಿಸಿ ಹೋರಾಟ ವಿಚಾರ. ಪ್ರತಿಭಟನೆ ಬಗ್ಗೆ ಇನ್ನೂ ರಾಜ್ಯ ಮಟ್ಟದಿಂದ ಯಾವುದೇ ಅನುಮತಿ ಸಿಕ್ಕಿಲ್ಲ. ಸಿಕ್ಕ ಬಳಿಕ ಹೋರಾಟದ ಬಗ್ಗೆ ಮಾಹಿತಿ ಕೊಡುತ್ತೇವೆ ಎಂದು ಅಭಯ್ ಪಾಟೀಲ ಹೇಳಿದರು.