ವರಮಹಾಲಕ್ಷ್ಮೀ ಉಡಿ ತುಂಬುವ ಧಾರ್ಮಿಕ ಕಾರ್ಯಕ್ರಮ

ಲೋಕದರ್ಶನ ವರದಿ

ಶೇಡಬಾಳ 16: ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಮಾತೋಶ್ರೀ ಹೇಮಾವತಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಕರ್ನಾಟಕದಲ್ಲಿನ ಮಹಿಳೆಯರನ್ನು ಕ್ರೀಯಾಶೀಲರನ್ನಾಗಿ ಮಾಡುವುದರ ಜತೆಗೆ ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಅವರನ್ನು ಸಬಲರನ್ನಾಗಿ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಕಾಗವಾಡ ಗುರುದೇವಾಶ್ರಮದ ಪ.ಪೂ. ಅವರು ಬುಧವಾರ ದಿ. 16 ರಂದು ಶೇಡಬಾಳ ಪಟ್ಟಣದ ಬಸವೇಶ್ವರ ದೇವಾಲಯದ ಸಭಾಂಗಣದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಅಥಣಿ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಶೇಡಬಾಳ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವರಮಹಾಲಕ್ಷ್ಮೀ ಪೂಜಾ ಮತ್ತು ಉಡಿ ತುಂಬುವ ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.   

ಅವರು ಮುಂದೆ ಮಾತನಾಡಿ ಪ್ರತಿಯೊಬ್ಬರು ಜೀವನದಲ್ಲಿ ಭವ್ಯ ಭಾರತೀಯ ಸಂಸ್ಕೃತಿಯನ್ನು ಹಾಗೂ  ಸಂಸ್ಕಾರವನ್ನು ಅಳವಡಿಸಿಕೊಂಡಾಗ ಮಾತ್ರ ಬದುಕಿನಲ್ಲಿ ನೆಮ್ಮದಿ ಸಿಗಲು ಸಾಧ್ಯವೆಂದು ಹೇಳಿದರು. ಭಾರತೀಯ ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿ, ಬೆಳೆಸುವ ಕಾರ್ಯವನ್ನು ಮಹಿಳೆಯರು ಮಾಡುತ್ತಿದ್ದು, ಅವರಿಗೆ ಪ್ರೇರಕರಾಗಿ ಕ್ಷೇತ್ರ ಧರ್ಮಸ್ಥಳ ಸಂಘ ನಿಂತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು. 

ಅಥಣಿ ಎ.ಪಿ.ಎಂ.ಸಿ. ಅಧ್ಯಕ್ಷರಾದ ರವೀಂದ್ರ ದತ್ತು ಪೂಜಾರಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಯಾವುದೇ ಸರ್ಕಾರ ಮಾಡದೇ ಇರುವ ಕಾರ್ಯವನ್ನು ಧರ್ಮಸ್ಥಳದ ಸಂಘಟನೆ ಮಾಡುತ್ತಿರುವುದು ಪ್ರಶಂಸನೀಯ. ಮುತ್ತೈದೆಯರ ಬದುಕಿನಲ್ಲಿ ವರಮಹಾಲಕ್ಷ್ಮೀ ಪೂಜೆ ಹಾಗೂ ಉಡಿ ತುಂಬುವ ಕಾರ್ಯಕ್ರಮ ಅತ್ಯಂತ ಮಹತ್ವದ ಸ್ಥಾನ ಹೊಂದಿದ್ದು, ಮಹಿಳೆಯರು ಶ್ರೀ ಮಹಾಲಕ್ಷ್ಮೀ ದೇವಿಯ ಆದರ್ಶ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ದೇವಿಯ ಕೃಪಾ ಕಟಾಕ್ಷಕ್ಕೆ ಪಾತ್ರರಾಗುವಂತೆ ಮನವಿ ಮಾಡಿಕೊಂಡರು. ಪುರುಷರಿಗಿಂತ ಮಹಿಳೆಯರ ಬಳಿ ಮಹಾಲಕ್ಷ್ಮೀ ವಾಸವಾಗಿದ್ದಾಳೆಂದು ಬಣ್ಣಿಸಿದರು. ಕ್ಷೇತ್ರ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟನ ಚಿಕ್ಕೋಡಿ ಜಿಲ್ಲಾ ನಿರ್ದೇಶಕರಾದ ಟಿ. ಕೃಷ್ಣ ಸಂಸ್ಥೆ ನಡೆದು ಬಂದ ದಾರಿಯನ್ನು ವಿವರಿಸಿದರು. ಮುಖ್ಯ ಅತಿಥಿಗಳಾಗಿ ಶೇಡಬಾಳ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ವಿವೇಕ ಬನ್ನೆ, ಗ್ರಾಮಾಧಿಕಾರಿ ಸಂತೋಷ ಬಾಯನಾಯ್ಕ, ಸುನೀಲ ಪಾಟೀಲ, ಬಸಗೌಡ ಪಾಟೀಲ ಆಗಮಿಸಿದ್ದರು. 

ಕಾರ್ಯಕ್ರಮದ ಅಂಗವಾಗಿ ಜೈ ಜಿನೇಂದ್ರ ಮಹಿಳಾ ಸಂಘದ ಸದಸ್ಯೆಯರಾದ ಕಮಲ ಜಾಯಗೌಡರ, ಭಾರತಿ ಪದ್ಮನ್ನವರ, ಕವಿತಾ ಇರಾಜ, ಜಯಶ್ರೀ ಅವತಾಡೆ, ರಾಜಶ್ರೀ ಪಾಟೀಲ, ಭಾರತಿ ಪಾಯಪ್ರಪ, ಅನಿತಾ ಗಡಿಗೆ, ಶೋಭಾ ಗಡಿಗೆ, ಸುನಂದಾ ಇರಾಜ, ಅಶ್ವಿನಿ ಸಾಳುಂಕೆ ವರಮಹಾಲಕ್ಷ್ಮೀ ಪೂಜೆ ಹಾಗೂ ಉಡಿ ತುಂಬುವ ಕಾರ್ಯವನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಿದರು. ರಾಣಿ ಚೆನ್ನಮ್ಮ ಮಹಿಳಾ ಸಂಘ ಸದಸ್ಯೆಯರು ಮಂಜುನಾಥ ಭಾವಚಿತ್ರ ಪೂಜೆ ನೆರವೇರಿಸಿದರು. 

ಈ ಸಮಯದಲ್ಲಿ ಅಥಣಿ ತಾಲೂಕಾ ಯೋಜನಾಧಿಕಾರಿ ರಾಜು ನಾಯಿಕ, ಮಂಗಸೂಳಿ ವಲಯ ಮೇಲ್ವಿಚಾರಕ ಯಲ್ಲಪ್ಪ, ಶೇಡಬಾಳ ಪಪಂ ಸದಸ್ಯ ಪ್ರಕಾಶ ಮಾಳಿ, ವೃಷಭ ಚೌಗಲೆ, ಮಹಾದೇವಿ ಮಾಕನ್ನವರ, ಸಂತೋಷ ಮುಜಾವರ, ಶಾಂತಿನಾಥ ಉಪಾಧ್ಯೆ, ಶಾಂತಿನಾಥ ಮಾಲಗಾಂವೆ, ಕಾಶಿಬಾಯಿ ಚೋಳಕೆ, ಸುರೇಖಾ ಕವಟಗೆ, ವಂದನಾ ಸಗರೆ, ಲತಾ ರತ್ನಪ್ಪಗೋಳ, ಸುನೀಲ ಸೊಟ್ರಾಯಿ, ಸುನೀತಾ ಘೋರ್ಪಡೆ,ಸೇವಾ ಪ್ರತಿನಿಧಿಗಳಾದ ಮಂಜುಳಾ, ಭಾಗ್ಯಶ್ರೀ, ಶರಾವತಿ, ಗಜಾನನ, ನಾನಪ್ಪ, ಸುರೇಖಾ, ಪ್ರಗತಿಬಂಧು, ಸ್ವಸಹಾಯ ಸಂಘಗಳ ಒಕ್ಕೂಟ ಮಂಗಸೂಳಿ ವಲಯದ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.  

ಯಲ್ಲಪ್ಪ ಸ್ವಾಗತಿಸಿದರು. ಸುಷ್ಮಾ ವಂದಿಸಿದರು. ಚಂದ್ರು ಕಾರ್ಯಕ್ರಮ ನಿರೂಪಿಸಿದರು.