ಬೆಂಗಳೂರು, ಜ 18 ,ಚಿತ್ರೀಕರಣ ಮುಗಿಸಿ ಬಹುದಿನಗಳೇ ಕಳೆದ ನಂತರ ‘ಕಾಣದಂತೆ ಮಾಯವಾದನು’ ಚಿತ್ರ ರಿಲೀಸ್‍ಗೆ ಸಿದ್ಧವಾಗಿದ್ದು, ಇದೇ 31ರಂದು ತೆರೆಕಾಣಲಿದೆ.ಚಿತ್ರದ ಮುಖ್ಯಪಾತ್ರ ದೆವ್ವ ಖಳನಾಯಕನ ದ್ವೇಷಕ್ಕೆ ಪ್ರಾಣ ಕಳೆದುಕೊಳ್ಳುವ ನಾಯಕ ತನಗಾದ ಅನ್ಯಾಯಕ್ಕೆ ಹೇಗೆ ಪ್ರತೀಕಾರ ತೀರಿಸಿಕೊಳ್ಳುತ್ತಾನೆ, ತನ್ನ ಲವ್ ಅನ್ನ ಹೇಗೆ ಕಾಪಾಡಿಕೊಳ್ಳುತ್ತಾನೆ ಎಂಬುದು ಕಥೆಯ ಎಳೆ ಎಂದು ನಿರ್ದೇಶಕ ರಾಜ್ ಪತ್ತಿಪಾಟಿ ಇತ್ತೀಚೆಗೆ ನಡೆದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ನಿರ್ಮಾಪಕರಾದ ಚಂದ್ರಶೇಖರ್ ನಾಯ್ಡು, ಸೋಮ್ ಸಿಂಗ್, ಪುಷ್ಪಾ ಸೋಮ್ ಸಿಂಗ್ ಬಂಡವಾಳ ಹೂಡಿದ್ದಾರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಚಿತ ಹಾಡೊಂದಕ್ಕೆ ಧ್ವನಿಯಾಗಿರುವುದು ವಿಶೇಷ ವಿಕಾಸ್, ಸಿಂಧು ಲೋಕನಾಥ್, ಧರ್ಮಣ್ಣ, ಅಚ್ಯುತ್ ಕುಮಾರ್,. ಭಜರಂಗಿ ಲೋಕಿ,ಉದಯ್ ಮುಂತಾದವರು ತಾರಾಗಣಲ್ಲಿದ್ದಾರೆ. ‘ಮಾಸ್ತಿಗುಡಿ ಚಿತ್ರದ ದುರಂತದಲ್ಲಿ ಮೃತರಾದ ದಿವಂಗತ ಉದಯ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.’ಕಾಣದಂತೆ ಮಾಯವಾದನು’ ಚಿತ್ರೀಕರಣ ಆಗುವ ವೇಳೆಗೆ, ಬೇರೊಂದು ಚಿತ್ರದ ಶೂಟಿಂಗ್ ನಲ್ಲಿ ನಿರತರಾಗಿದ್ದ ವೇಳೆ ಉದಯ್ ತೀರಿಕೊಂಡಿದ್ದರಿಂದ ಸುಮಾರು 8 ತಿಂಗಳು ಯಾವುದೇ ಚಿತ್ರೀಕರಣ ನಡೆಯಲಿಲ್ಲ. ಆನಂತರ ಭಜರಂಗಿ ಲೋಕಿ ಅವರನ್ನು ಕರೆತರಲಾಯಿತು ಎಂದು ಚಿತ್ರತಂಡ ತಿಳಿಸಿದೆ.